ಕೊವ್ಲೂನ್: ಭಾರತದ ಖ್ಯಾತ ಬಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಹಾಂಗಕಾಂಗ್ ಸೂಪರ್ ಸೀರಿಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್  ಮತ್ತು ಆರನೆಯ ಶ್ರೇಯಾಂಕಿತ ಆಟಗಾರ್ತಿ ರಚ್ನೋಕ್ ಇಂತನೋನ್ ರವರನ್ನು  21-17, 21-17 ಅಂತರದ ಮೂಲಕ  ಸೋಲಿಸಿ  ಫೈನಲ್ ಗೆ ಮುನ್ನಡಿ ಇಟ್ಟಿದ್ದಾರೆ. 43 ನಿಮಿಷಗಳ ಕಾಲ ನಡೆದ ಈ ಆಟದಲ್ಲಿ ಸಿಂಧು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿಂದೆ ನಾಲ್ಕು ಬಾರಿಗೆ ಮುಖಾಮುಖಿಯಾಗಿದ್ದ ಈ ಜೋಡಿಯು ಅದರಲ್ಲಿ ಸಿಂಧು 1-4 ರ ಅಂತರದಿಂದ ಹಿಂದಿದ್ದಾರೆ.ಅಲ್ಲದೆ 2015ರ ಮಾತ್ರ ಸಿಂಧು ಇಂತನೋನ್ ಅವರನ್ನು ಸೋಲಿಸಿದ್ದರು.


ಈಗ ಫೈನಲ್ ಪಂದ್ಯದಲ್ಲಿ  ತೈ ತು ಯಿಂಗ್ ಸೋಲಿಸಿ  ಈ ಸೀರಿಸ್ ನ್ನು ಗೆದ್ದರೆ ಸಿಂಧು ಈ ಸಾಧನೆ ಮಾಡಿದ 3 ನೆಯ  ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗುತ್ತಾರೆ.ಇದಕ್ಕೂ ಮೊದಲು ಸೈನಾ ನೆಹವಾಲ್ 2010ರಲ್ಲಿ ಮತ್ತು ಪ್ರಕಾಶ ಪಡುಕೋಣೆ 1982ರಲ್ಲಿ ಈ ಸಾಧನೆಯನ್ನು ಮಾಡಿದ್ದರು