ನವದೆಹಲಿ: ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ತಿಳಿಸಿರುವ ಮೂಲಗಳ ಪ್ರಕಾರ ಭಜರಂಗ್ ಪುನಿಯಾ ಅವರಿಗೆ ಕುಸ್ತಿ ಕ್ಷೇತ್ರದಲ್ಲಿನ ಸತತ ಪ್ರದರ್ಶನದಿಂದಾಗಿ ಅವರಿಗೆ ಪ್ರಶಸ್ತಿ ನೀಡಲಾಗುವುದು ಎನ್ನಲಾಗಿದೆ.  



COMMERCIAL BREAK
SCROLL TO CONTINUE READING

ಪುನಿಯಾ ಜೊತೆಗೆ ವಿನೇಶ್ ಫೋಗಾಟ್ ಅವರನ್ನು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಪ್ರತಿಷ್ಠಿತ ಪ್ರಶಸ್ತಿಗೆ ಶಿಫಾರಸು ಮಾಡಿದೆ.ಪುರುಷರ ಮುಕ್ತ ಶೈಲಿಯ ಸ್ಪರ್ಧೆಯ 65 ಕೆಜಿ ಫೈನಲ್‌ನಲ್ಲಿ ಇರಾನ್‌ನ ಪೀಮನ್ ಬಿಬಯಾನಿ ವಿರುದ್ಧ ಮೇಲುಗೈ ಸಾಧಿಸಿ ಟಿಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.



ಚೀನಾದ ಕ್ಸಿಯಾನ್‌ನಲ್ಲಿ ನಡೆದ ಏಷ್ಯನ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ ನಂತರ ಕುಸ್ತಿಪಟು ಪುನಿಯಾ ಏಷ್ಯನ್ ಸರ್ಕ್ಯೂಟ್‌ನಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪುನಿಯಾ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆಗ ಅವರು ಜಪಾನಿನ ಕುಸ್ತಿಪಟು ತಕತಾನಿ ಡೈಚಿಯನ್ನು 11-8ರಿಂದ ಸೋಲಿಸಿದ್ದರು.ಇದಕ್ಕೂ ಮುನ್ನ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇದೇ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ವೇಲ್ಸ್‌ನ ಕೇನ್ ಚಾರಿಗ್‌ರನ್ನು ಹಿಂದಿಕ್ಕಿ ಚಿನ್ನ ಗೆದ್ದರು.



ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.