ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ತಂಡವು ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ದುಕೊಂಡಿತು. ಇದಾದ ನಂತರ ಮೊದಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡವನ್ನು 20 ಓವರ್ ಗಳಲ್ಲಿ  ಎಂಟು ವಿಕೆಟ್ ನಷ್ಟಕ್ಕೆ 149 ಗೆ ಕಟ್ಟಿ ಹಾಕುವಲ್ಲಿ ಡೆಲ್ಲಿ ತಂಡವು ಯಶಸ್ವಿಯಾಯಿತು.


COMMERCIAL BREAK
SCROLL TO CONTINUE READING

ನಾಯಕ ವಿರಾಟ್ ಕೊಹ್ಲಿ ಬೆಂಗಳೂರಿನ ಪರ 41 ರನ್  ಹಾಗೂ ಮೊಯಿನ್ ಅಲಿ 32 ರನ್ ಗಳಿಸಿದ್ದು ಬಿಟ್ಟರೆ ಉಳಿದರ್ಯಾರು ಕೂಡ ಹೆಚ್ಚಿನ ಮೊತ್ತಗಳಿಸಲಿಲ್ಲ.ಡೆಲ್ಲಿ ಪರ ಕಾಗಿಸೂ ರಬಾಡಾ ನಾಲ್ಕು ಹಾಗೂ ಕ್ರಿಸ್ ಮೊರಿಸ್ ಎರಡು ವಿಕೆಟ್ ಗಳಿಸುವ ಮೂಲಕ ಬೆಂಗಳೂರಿನ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.


ಈಗಾಗಲೇ ಟೂರ್ನಿಯುದ್ದಕ್ಕೂ ಸೋಲಿನ ಕಹಿ ಉಂಡಿರುವ  ಬೆಂಗಳೂರು ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗದ ಅನಿರ್ವಾಯವಿದೆ. ಒಂದು ವೇಳೆ ಈ ಪಂದ್ಯ ಸೋತಿದ್ದೆ ಆದಲ್ಲಿ ಕಪ್ ಗೆಲ್ಲುವ ಎಲ್ಲ ಸಾಧ್ಯತೆಗೆಳು ಕ್ಷೀಣಿಸಲಿವೆ. ಉತ್ತಮ ಬ್ಯಾಟಿಂಗ್ ಪಡೆಯನ್ನು ಬೆಂಗಳೂರು ತಂಡವು ಹೊಂದಿದ್ದರೂ ಕೂಡ ಅದು ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದೆ. 


150 ರನ್  ಗಳ ಗೆಲುವಿನ ಗುರಿಯನ್ನು ಹೊಂದಿರುವ ಡೆಲ್ಲಿ ತಂಡವು 3 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.ಸದ್ಯ ಕ್ರೀಸ್ ನಲ್ಲಿ ಪೃಥ್ವಿ ಷಾ ಹಾಗೂ ಶ್ರೇಯಸ್ ಅಯ್ಯರ್ ಇದ್ದಾರೆ.