18 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಭಾರತ-ಬಾಂಗ್ಲಾದೇಶ ಟಿ20 ಸರಣಿ ಈತನ ಕೊನೆ ಪಂದ್ಯ- ನಿವೃತ್ತಿ ಘೋಷಿಸಿದ 38ರ ಹರೆಯದ ಸ್ಟಾರ್ ಆಲ್ರೌಂಡರ್
India-Bangladesh T20 series: 38 ವರ್ಷದ ಮಹಮ್ಮದುಲ್ಲಾ 2007 ರಲ್ಲಿ ಕೀನ್ಯಾ ವಿರುದ್ಧ ಟಿ 20 ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಇನ್ನು ಭಾರತದಲ್ಲಿ ನಡೆದ 2023 ರ ಪುರುಷರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್ ಗಳಿಸಿದ್ದರು. ಆದರೆ ಇದೀಗ ಟಿ 20 ಅಂತರರಾಷ್ಟ್ರೀಯಕ್ಕೆ ವಿದಾಯ ಹೇಳಿದ್ದಾರೆ.
India vs Bangladesh T20 Series: ಭಾರತ ಮತ್ತು ಬಾಂಗ್ಲಾದೇಶದ ತಂಡಗಳು ಪ್ರಸ್ತುತ ಮೂರು ಪಂದ್ಯಗಳ ಟಿ 20 ಅಂತರರಾಷ್ಟ್ರೀಯ ಸರಣಿಯನ್ನು ಆಡುತ್ತಿವೆ. ಈ ಮಧ್ಯೆ ಬಾಂಗ್ಲಾದೇಶದ ಅನುಭವಿ ಆಲ್ -ರೌಂಡರ್ ಈ ಸ್ವರೂಪದಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. 38 -ವರ್ಷದ ಮಹಮುದಲ್ಲಾ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸ್ತುತ ಸರಣಿಯು ಅವರ ಕೊನೆಯ ಟಿ 20 ಅಂತರರಾಷ್ಟ್ರೀಯ ಸರಣಿಯಾಗಿದೆ.
38 ವರ್ಷದ ಮಹಮ್ಮದುಲ್ಲಾ 2007 ರಲ್ಲಿ ಕೀನ್ಯಾ ವಿರುದ್ಧ ಟಿ 20 ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಇನ್ನು ಭಾರತದಲ್ಲಿ ನಡೆದ 2023 ರ ಪುರುಷರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪರ ಅತಿ ಹೆಚ್ಚು ರನ್ ಗಳಿಸಿದ್ದರು. ಆದರೆ ಇದೀಗ ಟಿ 20 ಅಂತರರಾಷ್ಟ್ರೀಯಕ್ಕೆ ವಿದಾಯ ಹೇಳಿದ್ದಾರೆ.
"ಈ ಸರಣಿಗೆ ಬರುವ ಮೊದಲೇ ನಾನು ನಿರ್ಧರಿಸಿದ್ದೆ. ಈ ಸ್ವರೂಪವನ್ನು ಮೀರಿ ಚಲಿಸಲು ಮತ್ತು ಏಕದಿನ ಪಂದ್ಯಗಳ ಮೇಲೆ ಕೇಂದ್ರೀಕರಿಸಲು ಇದು ಸರಿಯಾದ ಸಮಯ. 2016 ರ ವಿಶ್ವಕಪ್‌ನಲ್ಲಿ ಬೆಂಗಳೂರಿನಲ್ಲಿ ಭಾರತದ ವಿರುದ್ಧ ಸೋಲುಕಂಡಿತ್ತು ಅತ್ಯಂತ ನಿರಾಶಾದಾಯಕ ಕ್ಷಣವಾಗಿದೆ. ಇದು ನನಗೆ ಜೀವನವನ್ನು ಬದಲಾಯಿಸುವ ಕ್ಷಣವಾಗಿತ್ತು. ಜೊತೆಗೆ ಆ ಪಂದ್ಯ ನನಗೆ ಬಹಳಷ್ಟು ಕಲಿಸಿತು" ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.