Shakib Al Hasan Announces Retirement: ಬಾಂಗ್ಲಾದೇಶದ ಆಲ್‌ ರೌಂಡರ್ ಶಕೀಬ್ ಅಲ್ ಹಸನ್ ಗುರುವಾರ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ವಿರುದ್ಧದ ತನ್ನ ತಂಡದ ಎರಡನೇ ಟೆಸ್ಟ್‌ಗೆ ಮೊದಲು ಟಿ 20 ಅಂತರಾಷ್ಟ್ರೀಯ ಕ್ರಿಕೆಟ್‌ʼನಿಂದ ನಿವೃತ್ತಿ ಹೊಂದುವುದಾಗಿ ಖಚಿತಪಡಿಸಿದ್ದಾರೆ. ಈ ವರ್ಷದ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಅವರ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ತುಳಸಿ ಗಿಡಕ್ಕೆ ನಿತ್ಯ ಇಷ್ಟು ಸುತ್ತು ಪ್ರದಕ್ಷಿಣೆ ಹಾಕಿ... ಹೆಗಲೇರಿದ ದಾರಿದ್ರ್ಯ ತೊಲಗಿ ಕಡುಬಡವನೂ ಶ್ರೀಮಂತನಾಗುವ! ಮನೆಯಲ್ಲಿ ಸಂಪತ್ತಿನ ನಿಧಿಯೇ ಉಕ್ಕುವುದು


ಎರಡನೇ ಟೆಸ್ಟ್‌ಗೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಶಕೀಬ್ ಅಲ್ ಹಸನ್, ಟೆಸ್ಟ್ ಮತ್ತು ಏಕದಿನ ಮಾದರಿಯ ತನ್ನ ಯೋಜನೆಗಳ ಬಗ್ಗೆಯೂ ಹೇಳಿದ್ದಾರೆ. ಆಗಸ್ಟ್‌ನಲ್ಲಿ ಶೇಖ್ ಹಸೀನಾ ಆಡಳಿತದ ರಾಜಕೀಯ ಪ್ರಕ್ಷುಬ್ಧತೆಯ ನಂತರ 37 ವರ್ಷದ ಶಾಕಿಬ್ ಅಲ್ ಹಸನ್ ಬಾಂಗ್ಲಾದೇಶಕ್ಕೆ ಭೇಟಿ ನೀಡಿಲ್ಲ. ಕಳೆದ ತಿಂಗಳು ಢಾಕಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ 147 ಮಂದಿಯಲ್ಲಿ ಶಕೀಬ್ ಅಲ್ ಹಸನ್ ಹೆಸರೂ ಇತ್ತು.


"ಕಾನ್ಪುರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಟೆಸ್ಟ್ ಪಂದ್ಯ ನನ್ನ ಕೊನೆಯ ಟೆಸ್ಟ್ ಪಂದ್ಯವಾಗಬಹುದು. ಆದರೆ, ಬಾಂಗ್ಲಾದೇಶದಲ್ಲಿ ನನಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಿದರೆ, ಬಾಂಗ್ಲಾದೇಶದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತೇನೆ. ಆ ಬಳಿಕ ತವರಿನಲ್ಲಿ ನಿವೃತ್ತಿ ಪಡೆಯುತ್ತೇನೆ" ಎಂದು ಶಕೀಬ್ ಅಲ್ ಹಸನ್ ಹೇಳಿದ್ದಾರೆ.


ಆದರೆ, ಬಾಂಗ್ಲಾದೇಶದ ಆಂತರಿಕ ವಾತಾವರಣವನ್ನು ನೋಡಿದರೆ ದಕ್ಷಿಣ ಆಫ್ರಿಕಾ ಸರಣಿಯ ಮೇಲೂ ಬಿಕ್ಕಟ್ಟಿನ ಮೋಡ ಕವಿದಿದೆ. ಅಷ್ಟೇ ಅಲ್ಲದೆ, ODI ಸ್ವರೂಪದ ಬಗ್ಗೆ ಮಾತನಾಡಿದ ಅವರು ಚಾಂಪಿಯನ್ಸ್ ಟ್ರೋಫಿ ಆಡಿದ ನಂತರ ODI ನಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದಾರೆ.


70 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್, 242 ವಿಕೆಟ್ ಜೊತೆಗೆ 4600 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ 5 ಶತಕಗಳನ್ನು ಕಲೆಹಾಕಿರುವ ಅವರ ಅತ್ಯುತ್ತಮ ಸ್ಕೋರ್ 217 ಆಗಿದೆ. ಇನ್ನು 247 ಏಕದಿನ ಪಂದ್ಯಗಳಲ್ಲಿ 317 ವಿಕೆಟ್ ಹಾಗೂ 129 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 3 ದಿನ ಕುಂಭದ್ರೋಣ ಮಳೆ! ಈ ಜಿಲ್ಲೆಗಳಲ್ಲಿ ಜಲಪ್ರವಾಹದ ಮುನ್ಸೂಚನೆ


ಕಾನ್ಪುರ ಟೆಸ್ಟ್‌ಗೆ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಕೀಬ್, 'ಟೆಸ್ಟ್ ಕ್ರಿಕೆಟ್‌ಗೆ ಸಂಬಂಧಿಸಿದಂತೆ ನನ್ನ ಭವಿಷ್ಯದ ಬಗ್ಗೆ ಬಿಸಿಬಿಯೊಂದಿಗೆ ಚರ್ಚಿಸಿದ್ದೇನೆ. ಇದು ನನ್ನ ಕೊನೆಯ ಟೆಸ್ಟ್‌ ಪಂದ್ಯವಾಗಿರಬಹುದು. ಒಂದು ವೇಳೆ ಸಾಧ್ಯವಾದರೆ ನನ್ನ ಕೊನೆಯ ಟೆಸ್ಟ್ ಅನ್ನು ಮೀರ್‌ಪುರದಲ್ಲಿ ಆಡಲು ಬಯಸುತ್ತೇನೆ. ನನ್ನ ಸುರಕ್ಷತೆಗಾಗಿ ಮಂಡಳಿ ಪ್ರಯತ್ನಿಸುತ್ತಿದೆ. ಆದರೆ ಇದರ ಹೊರತಾಗಿ, ಯಾವಾಗಲಾದರೂ ನಾನು ದೇಶದಿಂದ ಹೊರಗೆ ಹೋಗಬಹುದು" ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ