Team Indiaಗೆ ಪಾಕ್’ಗಿಂತಲೂ ಡೇಂಜರಸ್ ಈ ತಂಡ: ವಿಶ್ವಕಪ್ 2007ರಿಂದ ಭಾರತವನ್ನು ಹೊರಹಾಕಿದ್ದು ಇದೇ ಟೀಂ…
Asia Cup 2023: ಈ ತಂಡ ಭಾರತಕ್ಕೆ ಪಾಕಿಸ್ತಾನಕ್ಕಿಂತ ಹೆಚ್ಚು ಅಪಾಯಕಾರಿ. ಏಷ್ಯಾ ಕಪ್ 2023 ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸುತ್ತವೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ತಂಡಗಳು ಭಾಗವಹಿಸಲಿವೆ.
Asia Cup 2023: ಏಷ್ಯಾ ಕಪ್ 2023 ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾವು ಆಗಸ್ಟ್ 30 ರಿಂದ ಸೆಪ್ಟೆಂಬರ್ 17 ರವರೆಗೆ ಆಯೋಜಿಸಲಿದೆ. ಈ ವರ್ಷ ODI ವಿಶ್ವಕಪ್ ಆಯೋಜಿಸಲಾಗಿರುವುದರಿಂದ, ಏಷ್ಯಾ ಕಪ್ 2023 ಸಹ ODI ಸ್ವರೂಪದಲ್ಲಿ ಆಡಲಾಗುತ್ತದೆ. ಏಷ್ಯಾ ಕಪ್‌ನಂತಹ ಪಂದ್ಯಾವಳಿಗಳ ವಿಷಯಕ್ಕೆ ಬಂದರೆ, ಒಂದು ತಂಡವು ಭಾರತಕ್ಕೆ ದೊಡ್ಡ ಬೆದರಿಕೆಯಂತೆ ಗೋಚರಿಸುತ್ತಿದೆ.
ಇದನ್ನೂ ಓದಿ: ಏಷ್ಯಾಕಪ್’ಗೆ ಬಲಿಷ್ಠ ತಂಡ ಪ್ರಕಟ! ವಿರಾಟ್ ಶತ್ರುವಿಗೆ 2 ವರ್ಷಗಳ ಬಳಿಕ ಸ್ಥಾನ ಕೊಟ್ಟ ಮಂಡಳಿ!
ಈ ತಂಡ ಭಾರತಕ್ಕೆ ಪಾಕಿಸ್ತಾನಕ್ಕಿಂತ ಹೆಚ್ಚು ಅಪಾಯಕಾರಿ. ಏಷ್ಯಾ ಕಪ್ 2023 ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸುತ್ತವೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ತಂಡಗಳು ಭಾಗವಹಿಸಲಿವೆ.
ಈ ತಂಡ ಪಾಕಿಸ್ತಾನಕ್ಕಿಂತ ಭಾರತಕ್ಕೆ ಅಪಾಯಕಾರಿ!
ಟೀಂ ಇಂಡಿಯಾ ಏಷ್ಯಾಕಪ್’ನಲ್ಲಿ ಒಂದು ತಂಡದೊಂದಿಗೆ ವಿಶೇಷವಾಗಿ ಜಾಗರೂಕತೆ ವಹಿಸಬೇಕಿದೆ. ಈ ತಂಡ ಬೇರಾವುದೂ ಅಲ್ಲ, ಅದುವೇ ಬಾಂಗ್ಲಾದೇಶ. ತನ್ನ ಬಲಿಷ್ಠ ಸಾಮಾರ್ಥ್ಯದಿಂದಲೇ ವಿರೋಧಿ ತಂಡವನ್ನು ನೆಲಕಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಬಾಂಗ್ಲಾದೇಶವು ಪ್ರತಿಯೊಂದು ಪ್ರಮುಖ ಪಂದ್ಯಾವಳಿಯಲ್ಲಿ ಅನೇಕ ದೊಡ್ಡ ತಂಡಗಳ ಟ್ರೋಫಿ ಎತ್ತಿಹಿಡಿಯುವ ಕನಸುಗಳನ್ನು ಮುರಿದಿದೆ ಎಂದರೆ ನಂಬಲೇಬೇಕು.
ಒಂದು ವೇಳೆ ಟೀಂ ಇಂಡಿಯಾದಿಂದ ಕೊಂಚ ಎಡವಟ್ಟಾದರೂ ಈ ತಂಡ ನಾಯಕ ರೋಹಿತ್ ಶರ್ಮಾಗೆ ನಿರಾಸೆ ಮೂಡಿಸಿ ಟ್ರೋಫಿ ಗೆಲ್ಲುವ ಕನಸನ್ನು ನಾಶಗೊಳಿಸಬಹುದು. 2007 ರ ODI ವಿಶ್ವಕಪ್’ನಲ್ಲಿ ಭಾರತವನ್ನು ಸೋಲಿಸಿದ ನಂತರ ಬಾಂಗ್ಲಾದೇಶ ಭಾರತವನ್ನು ಪಂದ್ಯಾವಳಿಯಿಂದ ಹೊರಹಾಕಿತ್ತು. ನಂತರ ಸಚಿನ್ ತೆಂಡೂಲ್ಕರ್‌ನಿಂದ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್’ನಂತಹ ಅನುಭವಿಗಳು ನಿರಾಶೆಗೊಂಡಿದ್ದರು. 2015ರ ವಿಶ್ವಕಪ್’ನಿಂದ ಇಂಗ್ಲೆಂಡ್ ತಂಡವನ್ನು ಹೊರಹಾಕಿದ್ದು ಕೂಡ ಬಾಂಗ್ಲಾದೇಶ. 2016 ರ T-20 ವಿಶ್ವಕಪ್’ನಲ್ಲಿಯೂ ಸಹ, ಬಾಂಗ್ಲಾದೇಶವು ಟೀಮ್ ಇಂಡಿಯಾವನ್ನು ಬಹುತೇಕ ಪಂದ್ಯಾವಳಿಯಿಂದ ಹೊರಹಾಕಿತು. ಆದರೆ ಧೋನಿ ಅವರ ಐತಿಹಾಸಿಕ ರನ್ ಔಟ್ ಭಾರತವನ್ನು ಉಳಿಸಿತು. ಆ ಪಂದ್ಯವನ್ನು ಭಾರತ 1 ರನ್’ನಿಂದ ಗೆದ್ದು ಟೂರ್ನಿಯಲ್ಲಿ ತನ್ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು.
ಇದುವರೆಗೆ ತನ್ನ 15 ಆವೃತ್ತಿಗಳಲ್ಲಿ ಭಾರತ ಗರಿಷ್ಠ 7 ಬಾರಿ ಪ್ರಶಸ್ತಿ ಗೆದ್ದಿದೆ. ಭಾರತದ ನಂತರ ಅತಿ ಹೆಚ್ಚು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದ ದಾಖಲೆ ಶ್ರೀಲಂಕಾ ಹೆಸರಿನಲ್ಲಿ ದಾಖಲಾಗಿದೆ. ಶ್ರೀಲಂಕಾ 6 ಬಾರಿ ಪ್ರಶಸ್ತಿ ವಶಪಡಿಸಿಕೊಂಡಿದೆ. ಈ ವರ್ಷ ODI ವಿಶ್ವಕಪ್ ಆಯೋಜಿಸಲಾಗಿರುವುದರಿಂದ, ಏಷ್ಯಾ ಕಪ್ 2023 ಸಹ ODI ಸ್ವರೂಪದಲ್ಲಿ ನಡೆಯಲಿದೆ.
ಏಷ್ಯಾ ಕಪ್ 2023 ಸಂಪೂರ್ಣ ವೇಳಾಪಟ್ಟಿ (30 ಆಗಸ್ಟ್ - 17 ಸೆಪ್ಟೆಂಬರ್ 2023):
ಗುಂಪು ಹಂತ
ಆಗಸ್ಟ್ 30: ಪಾಕಿಸ್ತಾನ vs ನೇಪಾಳ, ಮುಲ್ತಾನ್
31 ಆಗಸ್ಟ್: ಬಾಂಗ್ಲಾದೇಶ vs ಶ್ರೀಲಂಕಾ, ಕ್ಯಾಂಡಿ
ಸೆಪ್ಟೆಂಬರ್ 2: ಪಾಕಿಸ್ತಾನ vs ಭಾರತ, ಕ್ಯಾಂಡಿ
ಸೆಪ್ಟೆಂಬರ್ 4: ಭಾರತ vs ನೇಪಾಳ, ಕ್ಯಾಂಡಿ
ಸೆಪ್ಟೆಂಬರ್ 5: ಅಫ್ಘಾನಿಸ್ತಾನ vs ಶ್ರೀಲಂಕಾ, ಲಾಹೋರ್
ಇದನ್ನೂ ಓದಿ: 3ನೇ ಪಂದ್ಯದ ಗೆಲುವಿಗೆ ಕಾರಣವಾಗಿದ್ದ ಈ ಆಟಗಾರ ತಂಡದಿಂದ ಔಟ್! 4ನೇ T20ಗೆ Playing 11 ಹೀಗಿದೆ
ಸೂಪರ್-4
6 ಸೆಪ್ಟೆಂಬರ್: A1 vs B2, ಲಾಹೋರ್
ಸೆಪ್ಟೆಂಬರ್ 9: B1 vs B2, ಕೊಲಂಬೊ
10 ಸೆಪ್ಟೆಂಬರ್: A1 vs A2, ಕೊಲಂಬೊ
12 ಸೆಪ್ಟೆಂಬರ್: A2 vs B1, ಕೊಲಂಬೊ
14 ಸೆಪ್ಟೆಂಬರ್: A1 vs B1, ಕೊಲಂಬೊ
15 ಸೆಪ್ಟೆಂಬರ್: A2 vs B2, ಕೊಲಂಬೊ
ಸೆಪ್ಟೆಂಬರ್ 17: ಫೈನಲ್, ಕೊಲಂಬೊ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.