ಅದ್ಹೇಗೆ ಸಾಧ್ಯ ಗುರೂ..!? ಬ್ಯಾಟ್ಗೆ ಬಾಲ್ ಟಚ್ ಆಗೇ ಇಲ್ಲ... ಆದ್ರೂ ಸಿಕ್ತು 10 ರನ್! ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳಿರದ ವಿಚಿತ್ರ ದಾಖಲೆಯಿದು
BAN vs SA: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರ ಓವರ್‌ನಲ್ಲಿ ಈ 10 ರನ್ ದಾಖಲಾಗಿದೆ. ಆದರೆ ರಬಾಡಾ ಅವರಿಗೆ ಈ ಶಿಕ್ಷೆ ಸಿಕ್ಕಿದ್ದು ಅವರ ತಪ್ಪಿನಿಂದಲ್ಲ, ಆದರೆ ಪ್ರೋಟೀಸ್ ಬ್ಯಾಟ್ಸ್‌ಮನ್ ತಪ್ಪಿನಿಂದ.
10 Run in One ball BAN vs SA: ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವೆ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಂದು ಘಟನೆ ನಡೆದಿದೆ. ಇದು ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದ್ದು ಸುಳ್ಳಲ್ಲ. ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ತನ್ನ ಬ್ಯಾಟ್‌ನಿಂದ ಚೆಂಡನ್ನು ಮುಟ್ಟದೆ 10 ರನ್ ಗಳಿಸಿದ್ದಾರೆ. ಅದ್ಹೇಗೆ ಸಾಧ್ಯ ಅಂತಾ ಯೋಚಿಸ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ಓದಿ..
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ 2 ದಿನ ಬೆಳಗ್ಗೆ ʼಈʼ ನೀರನ್ನ ಕುಡಿಯಿರಿ; ಹೊಟ್ಟೆಯ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ!
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಅವರ ಓವರ್‌ನಲ್ಲಿ ಈ 10 ರನ್ ದಾಖಲಾಗಿದೆ. ಆದರೆ ರಬಾಡಾ ಅವರಿಗೆ ಈ ಶಿಕ್ಷೆ ಸಿಕ್ಕಿದ್ದು ಅವರ ತಪ್ಪಿನಿಂದಲ್ಲ, ಆದರೆ ಪ್ರೋಟೀಸ್ ಬ್ಯಾಟ್ಸ್‌ಮನ್ ತಪ್ಪಿನಿಂದ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಸ್ಕೋರ್ ಬೋರ್ಡ್‌ನಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 575 ರನ್ ಗಳಿಸಿದ ನಂತರ ತನ್ನ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಬಾಂಗ್ಲಾದೇಶ ಬ್ಯಾಟಿಂಗ್‌ಗೆ ಬಂದಿತ್ತು. ಶಾದ್ಮನ್ ಇಸ್ಲಾಂ ಮತ್ತು ಮಹ್ಮದುಲ್ ಹಸನ್ ಜಾಯ್ ತಂಡಕ್ಕೆ ಇನ್ನಿಂಗ್ಸ್ ತೆರೆಯಲು ಬಂದರು. ದಕ್ಷಿಣ ಆಫ್ರಿಕಾ ಪರ ಮೊದಲ ಓವರ್ ಬೌಲ್ ಮಾಡಲು ಕಗಿಸೊ ರಬಾಡ ಬಂದರು. ಮೊದಲ ಬಾಲ್, ಡಾಟ್ ಮಾಡಿ ಬೌಲ್ ಮಾಡಿದರು. ಆದರೆ ಆಫ್ರಿಕಾದ ಆಟಗಾರ ಸೆನುರಾನ್ ಮುತ್ತುಸಾಮಿ ಪಿಚ್‌ನಲ್ಲಿ ಓಡುತ್ತಿರುವುದನ್ನು ನೋಡಿದರು. ಇದರೊಂದಿಗೆ ಬಾಂಗ್ಲಾದೇಶಕ್ಕೆ ಪೆನಾಲ್ಟಿಯಾಗಿ 5 ರನ್ ನೀಡಲಾಯಿತು.
ಇದನ್ನೂ ಓದಿ: ಈ ಟೀಂ ಇಂಡಿಯಾ ಕ್ರಿಕೆಟಿಗ ಖ್ಯಾತ ನಟಿ ರಾಧಿಕಾ ಅಳಿಯ! ಯಾರು ಅಂತ ಗೆಸ್ ಮಾಡಿ!!
ಮೊದಲ ಎಸೆತದಲ್ಲಿ ನಡೆದ ಘಟನೆಯಿಂದ ಕೋಪಗೊಂಡ ರಬಾಡ ಮುಂದಿನ ಎಸೆತವನ್ನು ವೈಡ್ ಮಾಡಿದರು. ಚೆಂಡು ವಿಕೆಟ್ ಕೀಪರ್ ಕೈಗೆ ಸಿಗದೆ ನೇರ ಬೌಂಡರಿ ಮುಟ್ಟಿತ್ತು. ಇದರೊಂದಿಗೆ ಅಂಪೈರ್ ವೈಡ್ ಪ್ಲಸ್ ಬೈಸ್ 4 ರನ್ ಸೇರಿ ಐದು ರನ್ ನೀಡಿದ್ದರು. ಇದರೊಂದಿಗೆ ಬಾಂಗ್ಲಾ ಬ್ಯಾಟ್ ಟಚ್ ಮಾಡದೆ ಇನ್ನಿಂಗ್ಸ್ ಅನ್ನು 10 ರನ್ ಗಳೊಂದಿಗೆ ಆರಂಭ ಮಾಡಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ