ಬೆಂಗಳೂರು : ಮಂಗಳವಾರ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್  ನಡುವೆ ನಡೆದ IPL ಪಂದ್ಯದಲ್ಲಿ ನಡೆದ ಈ ಘಟನೆ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಪಂದ್ಯದ ಸಮಯದಲ್ಲಿ, 20 ವರ್ಷದ ಆಟಗಾರನೊಬ್ಬ ಹಿರಿಯ ಆಫ್-ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಟದ ನಡುವೆಯೇ ಜರಿದಿದ್ದಾನೆ. ಬ್ಯಾಟ್ಸ್ ಮ್ಯಾನ್ ನ ಈ ವರ್ತನೆ ಕ್ರಿಕೆಟ್ ಪ್ರೇಮಿಗಳಿಗೆ ಹಿಡಿಸಲಿಲ್ಲ. 


COMMERCIAL BREAK
SCROLL TO CONTINUE READING

 ಅಶ್ವಿನ್ ಮೇಲೆ ಸಿಟ್ಟಾದ ಆಟಗಾರ : 
20ರ ಹರೆಯದ ಈ ಆಟಗಾರನ ವರ್ತನೆ ಕಂಡು ಅಭಿಮಾನಿಗಳು ಕೂಡ ರೊಚ್ಚಿಗೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರನ ಅನುಚಿತ ವರ್ತನೆಯಾ ಬಗ್ಗೆ ಕಿಡಿ ಕಾರಿದ್ದಾರೆ. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸ್ಟ್ರೈಕ್ ತೆಗೆದುಕೊಳ್ಳಲು ರಿಯಾನ್ ಪರಾಗ್ ನಾನ್-ಸ್ಟ್ರೈಕ್ ಎಂಡ್‌ನಿಂದ ದೌಡಾಯಿಸಿದ್ದಾರೆ. ಆದರೆ ರವಿಚಂದ್ರನ್ ಅಶ್ವಿನ್ ಮಾತ್ರ ತಮ್ಮ ಜಾಗ ಬಿಟ್ಟು ಕದಲಲಿಲ್ಲ. 


ಇದನ್ನೂ ಓದಿ : IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!


ಅಭಿಮಾನಿಗಳಿಗೆ ಹಿಡಿಸಲಿಲ್ಲ ಆಟಗಾರನ ವರ್ತನೆ : 
ಹೀಗೆ ದೌಡಾಯಿಸಿದ ರಿಯಾನ್ ಪರಾಗ್ ಅರ್ಧ ಪಿಚ್‌ನಲ್ಲಿ ನಿಂತಿದ್ದರು. ಪರಿಣಾಮ  ರನ್ ಔಟ್ ಆಗಬೇಕಾಯಿತು. ಈ ವೇಳೆ ರವಿಚಂದ್ರನ್ ಅಶ್ವಿನ್ ಅವರನ್ನು ರಿಯಾನ್ ಪರಾಗ್ ಕೋಪದಿಂದ ದಿಟ್ಟಿಸಿದ್ದಾರೆ. ಅಲ್ಲದೆ, ರವಿಚಂದ್ರನ್ ಅಶ್ವಿನ್ ಜೊತೆ ರಿಯಾನ್ ಪರಾಗ್ ಮಾತನಾಡಿರುವ ರೀತಿ ಅಭಿಮಾನಿಗಳಿಗೆ ಒಂಚೂರು ಹಿಡಿಸಲಿಲ್ಲ. 


ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ :
ರಿಯಾನ್ ಪರಾಗ್ ಅವರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರನೊಂದಿಗಿನ ಈ ರೀತಿಯ ವರ್ತನೆ ತೋರಿದ್ದಕ್ಕೆ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. 


IPL 2022: ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಹೇಗಿರುತ್ತದೆ..?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.