ರನೌಟ್ ಆದ್ರೂ ಔಟಾಗದೆ ಉಳಿದ ಬ್ಯಾಟ್ಸ್’ಮನ್! ವಿಕೆಟ್ ಉಳಿಯಲು ಕಾರಣವಾಗಿದ್ದು ಕ್ರಿಕೆಟ್’ನ ಈ ವಿಚಿತ್ರ ನಿಯಮ!
Cricket Viral Video: ವೆಸ್ಟ್‌ಇಂಡೀಸ್ ಕ್ರಿಕೆಟಿಗ ಅಲ್ಜಾರಿ ಜೋಸೆಫ್ ಕ್ರೀಸ್’ನಿಂದ ಒಂದು ಅಡಿ ದೂರವಿದ್ದರೂ ರನೌಟ್ ನೀಡಿರಲಿಲ್ಲ. ಮೇಲ್ನೋಟಕ್ಕೆ ಅದು ರನೌಟ್ ಎಂದು ಕಂಡರೂ ವಿಕೆಟ್ ಸೇಫ್ ಆಗಿದ್ದು ವಿಶೇಷವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Australia vs West Indies 2nd T20I: ಮೂರು ಪಂದ್ಯಗಳ T20 ಸರಣಿಯ ಎರಡನೇ ಪಂದ್ಯವು ಭಾನುವಾರ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಅಡಿಲೇಡ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ತಂಡವನ್ನು 34 ರನ್ ಗಳಿಂದ ಸೋಲಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಶಾಕ್! ಸಿಲಿಕಾನ್ ಸಿಟಿಯಲ್ಲಿ ನಾಲ್ಕು ದಿನ ಮದ್ಯ ಮಾರಾಟ ನಿಷೇಧ
ಅಡಿಲೇಡ್’ನಲ್ಲಿ ಉಭಯ ದೇಶಗಳ ನಡುವೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆಯಿತು. ಅದೇನೆಂದರೆ, ವೆಸ್ಟ್‌ಇಂಡೀಸ್ ಕ್ರಿಕೆಟಿಗ ಅಲ್ಜಾರಿ ಜೋಸೆಫ್ ಕ್ರೀಸ್’ನಿಂದ ಒಂದು ಅಡಿ ದೂರವಿದ್ದರೂ ರನೌಟ್ ನೀಡಿರಲಿಲ್ಲ. ಮೇಲ್ನೋಟಕ್ಕೆ ಅದು ರನೌಟ್ ಎಂದು ಕಂಡರೂ ವಿಕೆಟ್ ಸೇಫ್ ಆಗಿದ್ದು ವಿಶೇಷವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
12 ವರ್ಷಗಳ ಬಳಿಕ ಈ ಜನ್ಮರಾಶಿಯಲ್ಲಿ ಗಜಲಕ್ಷ್ಮಿ ರಾಜಯೋಗ: ಇನ್ಮುಂದೆ ಇವರು ಕೈಯಿಟ್ಟರೆ ಸಾಕು ಎಲ್ಲೆಲ್ಲೂ ವಿಜಯದ್ದೇ ವೈಭವ!
ಆನ್-ಫೀಲ್ಡ್ ಅಂಪೈರ್ ಗೆರಾರ್ಡ್ ಅಬೂದ್ ಈ ಸನ್ನಿವೇಶಕ್ಕೆ ಟ್ವಿಸ್ಟ್ ನೀಡಿದ್ದರು, ಇದು ರನೌಟ್ ಅಲ್ಲ ಎಂದು ಘೋಷಿಸಿದರು. ಮೈದಾನದ ಅಂಪೈರ್ ಗೆರಾರ್ಡ್ ಅಬೂದ್ ಅವರ ಈ ನಿರ್ಧಾರವನ್ನು ಆಸ್ಟ್ರೇಲಿಯಾದ ಕ್ರಿಕೆಟಿಗರು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ಆದರೆ ಅಂಪೈರ್ ಗೆರಾರ್ಡ್ ಅಬೂಡ್ ಪ್ರಕಾರ, ಆಸ್ಟ್ರೇಲಿಯಾದ ಆಟಗಾರರು ಅಲ್ಜಾರಿ ಜೋಸೆಫ್ ವಿರುದ್ಧ ರನೌಟ್ ಮಾಡಲು ಮನವಿ ಮಾಡಲಿಲ್ಲ. ಕ್ರಿಕೆಟ್ ನಿಯಮಗಳ ಪ್ರಕಾರ, ಔಟಾಗಿದ್ದರೂ ಸಹ ಮೇಲ್ಮನವಿ ಇಲ್ಲದೆ ಅಂಪೈರ್ ಆಟಗಾರನನ್ನು ಔಟ್ ಎಂದು ಹೇಳುವಂತಿಲ್ಲ. ಅಂಪೈರ್ ಗೆರಾರ್ಡ್ ಅಬೂದ್ ಅಲ್ಜಾರಿ ಜೋಸೆಫ್ ಔಟಾಗಿಲ್ಲ ಎಂದು ಹೇಳಿದಾಗ, ಟಿಮ್ ಡೇವಿಡ್, 'ಇದು ಹಾಸ್ಯಾಸ್ಪದ' ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ