ಟೀಂ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್’ಗೆ ಕ್ಯಾನ್ಸರ್! 1 ಕೋಟಿ ರೂಪಾಯಿ ನೆರವು ಘೋಷಿಸಿದ BCCI
Anshuman Gaekwad: ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ಅಂಶುಮಾನ್’ಗೆ ಸಹಾಯ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ಮಾಜಿ ಕ್ರಿಕೆಟಿಗರ ಮನವಿಯನ್ನು ಆಲಿಸಿ ಅಂಶುಮಾನ್ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದೆ.
Anshuman Gaekwad: ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್’ಮನ್ ಮತ್ತು ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಪ್ರಸ್ತುತ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್’ನಿಂದ ಬಳಲುತ್ತಿದ್ದಾರೆ. ಅನೇಕ ಮಾಜಿ ಕ್ರಿಕೆಟಿಗರು ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದ್ದು, ಅಂಶುಮಾನ್ ಚಿಕಿತ್ಸೆಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಮಾಜಿ ಸಿಎಂ ಮೊಮ್ಮಗನೇ ಜಾನ್ವಿ ಕಪೂರ್ ಬಾಯ್ ಫ್ರೆಂಡ್!
ಭಾರತದ ಮಾಜಿ ಬ್ಯಾಟ್ಸ್‌ಮನ್-ಕೋಚ್ ಸಂದೀಪ್ ಪಾಟೀಲ್ ಮತ್ತು ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕರ್ ಈ ವಿಷಯವನ್ನು ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್’ಗೆ ತಲುಪಿಸಿದ್ದರು. ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ಅಂಶುಮಾನ್’ಗೆ ಸಹಾಯ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ಮಾಜಿ ಕ್ರಿಕೆಟಿಗರ ಮನವಿಯನ್ನು ಆಲಿಸಿ ಅಂಶುಮಾನ್ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಸಿಸಿಐ ಭಾನುವಾರ ಹೇಳಿಕೆ ನೀಡಿದ್ದು, ಅಂಶುಮಾನ್ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ನೀಡಲು ಸಿದ್ಧ ಎಂದು ಹೇಳಿದೆ. ಸದ್ಯ ಅಂಶುಮಾನ್ ಲಂಡನ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಸಿಸಿಐ ಹೇಳಿಕೆಯಲ್ಲಿ, ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ಆರ್ಥಿಕ ಸಹಾಯಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ 1 ಕೋಟಿ ರೂಪಾಯಿ ನಿಧಿಯನ್ನು ನೀಡುವಂತೆ ಜಯ್ ಶಾ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಶಾ ಅವರು ಅಂಶುಮಾನ್ ಅವರ ಕುಟುಂಬದೊಂದಿಗೆ ಮಾತನಾಡಿದ್ದು, ಅವರಿಗೆ ಸಹಾಯದ ಭರವಸೆ ನೀಡಿದ್ದಾರೆ.
ಈ ಸಂಕಷ್ಟದ ಸಮಯದಲ್ಲಿ ಮಂಡಳಿಯು ಗಾಯಕ್ವಾಡ್ ಕುಟುಂಬದೊಂದಿಗೆ ನಿಂತಿದೆ ಮತ್ತು ಅವರು ಚೇತರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಬಿಸಿಸಿಐ ಅಂಶುಮಾನ್ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಮತ್ತು ಅವರ ಚಿಕಿತ್ಸೆಯ ಬಗ್ಗೆ ನಾವು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಅಂಬಾನಿ ಪುತ್ರನ ಮದ್ವೆಯಲ್ಲಿ ಟಕೀಲಾ ಏರಿಸಿ ಈ ನಟಿ ಜೊತೆ ಹಾರ್ದಿಕ್ ಪಾಂಡ್ಯ ಬಿಂದಾಸ್ ಡ್ಯಾನ್ಸ್!
ಅಂಶುಮಾನ್ ಭಾರತ ತಂಡದ ಮಾಜಿ ನಾಯಕ ಡಿಕೆ ಗಾಯಕ್ವಾಡ್ ಅವರ ಪುತ್ರ. ಅವರು 1975 ರಿಂದ 1987 ರವರೆಗೆ ಭಾರತದ ಪರ 40 ಟೆಸ್ಟ್ ಮತ್ತು 15 ODI ಪಂದ್ಯಗಳನ್ನು ಆಡಿದ್ದಾರೆ. ಎರಡು ಬಾರಿ ಟೀಂ ಇಂಡಿಯಾ ಕೋಚ್ ಕೂಡ ಆಗಿದ್ದರು. 71 ವರ್ಷದ ಅಂಶುಮಾನ್ ರಕ್ತದ ಕ್ಯಾನ್ಸರ್’ನಿಂದ ಬಳಲುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ