BCCI Announced Indian Team for Sri Lanka Tour: ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಅಡಿಯಲ್ಲಿ ವಿಶೇಷ ತಂಡವನ್ನು ಕಟ್ಟಲಾಗಿದೆ. BCCI ಶ್ರೀಲಂಕಾ ಪ್ರವಾಸಕ್ಕಾಗಿ ಟೀಮ್ ಇಂಡಿಯಾವನ್ನು ಘೋಷಿಸಿದ್ದು, ಇದರಲ್ಲಿ ಅನೇಕ ಆಟಗಾರರ ಅದೃಷ್ಟ ಸುಧಾರಿಸಿದೆ, ಇನ್ನೂ ಕೆಲವರಿಗೆ ಕೈ ಕೊಟ್ಟಿದೆ.


COMMERCIAL BREAK
SCROLL TO CONTINUE READING

ಅಭಿಮಾನಿಗಳ ಊಹೆಗೂ ನಿಲುಕದಂತಿದ್ದ ಟಿ20 ತಂಡದ ನಾಯಕತ್ವದ ಬಗ್ಗೆ ಬಹುದೊಡ್ಡ ನಿರ್ಧಾರ ಕೈಗೊಳ್ಳಲಾಗಿದೆ. ಟಿ20ಯಲ್ಲಿ ಬಿಸಿಸಿಐ ಟೀಂ ಇಂಡಿಯಾದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್‌ʼಗೆ ಹಸ್ತಾಂತರಿಸಿದೆ.


ಇದನ್ನೂ ಓದಿ: ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇ


T20 ವಿಶ್ವಕಪ್ 2024ರಲ್ಲಿ, ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದರು ಮತ್ತು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದರು. ಆದರೆ ಗಂಭೀರ್ ಆಳ್ವಿಕೆಯಲ್ಲಿ ಇದೂ ಕೂಡ ಹಾರ್ದಿಕ್ ಕೈ ತಪ್ಪಿದೆ. ಶುಭ್ಮನ್ ಗಿಲ್ ನಾಯಕತ್ವದ ಜಿಂಬಾಬ್ವೆ ಸರಣಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಜಯ ಸಾಧಿಸಿತ್ತು. ‌


ಟಿ 20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಾರೆ ಎಂಬ ವರದಿಗಳಿತ್ತು. ಆದರೆ ಶ್ರೀಲಂಕಾ ಪ್ರವಾಸದಿಂದ ಅವರಿಗೆ ಬಿಡುವು ಸಿಕ್ಕಿಲ್ಲ. ಇಬ್ಬರೂ ದಿಗ್ಗಜರು ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಲಿದ್ದಾರೆ. ಏಕದಿನ ತಂಡದ ನಾಯಕತ್ವವು ರೋಹಿತ್ ಶರ್ಮಾ ಕೈಯಲ್ಲಿದ್ದರೆ ಇಲ್ಲಿಯೂ ಸಹ ಉಪನಾಯಕನಾಗಿ ಶುಭಮನ್ ಗಿಲ್ ಇರುತ್ತಾರೆ. ವಿಶ್ವಕಪ್‌ʼನ ಭಾಗವಾಗಿದ್ದ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಸಿರಾಜ್ ಶ್ರೀಲಂಕಾ ಪ್ರವಾಸದಲ್ಲಿ ಅವಕಾಶ ಪಡೆದಿದ್ದಾರೆ.


ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ


ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.


ಇದನ್ನೂ ಓದಿ:   ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್: ಥೇಟ್‌ ದಂತದ ಗೊಂಬೆಯೇ ಜೂ.ಕೊಹ್ಲಿ...!


ಟಿ20 ಸರಣಿಗೆ ಭಾರತ ತಂಡ


ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ