ಬ್ರಿಸ್ಬೇನ್: ಬ್ರಿಸ್ಬೇನ್ ನಲ್ಲಿ ನಡೆದ ರೋಮಾಂಚಕಕಾರಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು 3 ವಿಕೆಟ್ ಗಳಿಂದ ಸೋಲಿಸಿದೆ. ಗೆಲುವಿನ ನಂತರ ಟೀಮ್ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾನಾ ಮಂದಿ ಸತತವಾಗಿ ಅಭಿನಂದಿಸಲಾಗುತ್ತಿದೆ. ಬ್ರಿಸ್ಬೇನ್ ನಲ್ಲಿ ಟೀಂ ಇಂಡಿಯಾ ಗೆಲುವಿನ ನಂತರ ಬಿಸಿಸಿಐ ದೊಡ್ಡ ಘೋಷಣೆ ಮಾಡಿದೆ. ವಿಜೇತ ಟೀಂ ಇಂಡಿಯಾಗೆ 5 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಬ್ರಿಸ್ಬೆನ್ ನ ಗಬ್ಬಾ ಮೈದಾನದಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ(AUSvsIND) ನಡುವಣ ನಾಲ್ಕನೇ ಟೆಸ್ಟ್ ಪಂದ್ಯಾವಳಿ ನಡೆಯಿತು. ಇಂತಹ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್‌ಗಳಿಂದ ಮಣಿಸುವ ಮೂಲಕ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.


Ind vs Aus, Test Series: ಐತಿಹಾಸಿಕ ವಿಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ


ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 336 ರನ್ ಗುರಿ ಬೆನ್ನತ್ತಿದ ಭಾರತ ಅಂತಿಮ ದಿನದ ಕೊನೆಯ ಅವಧಿಯಲ್ಲಿ 7 ವಿಕೆಟ್ ಕಳೆದುಕೊಂಡು 336 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಪಂದ್ಯದ ಅಂತ್ಯದವರೆಗೂ ಕ್ರೀಸ್‌ನಲ್ಲಿ ನಿಂತು ಹೋರಾಟ ಮಾಡಿ ಗೆಲುವು ತಂದು ಕೊಟ್ಟ ರಿಷಬ್ ಪಂತ್ 89 ರನ್ ಗಳಿಸಿ ಅಜೇಯರಾಗುಳಿದರು.


'ಗಾಯದ ನಡುವೆಯೂ ಭಾರತ ಕ್ರಿಕೆಟ್ ತಂಡ ತನ್ನ ನಿಜ ಸಾಮರ್ಥ್ಯ ತೋರಿಸಿದೆ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.