ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ವಯಸ್ಸಿಗೆ ಸಂಬಂಧಿಸಿದ ಅಡಚಣೆಗಳಿಗೆ ಹೊಸ ನೀತಿಯನ್ನು ಅಳವಡಿಸಿಕೊಳ್ಳಲು ಬಿಸಿಸಿಐ (BCCI) ನಿರ್ಧರಿಸಿದೆ. 2020-21ರ ಸೀಜನ್ ನಲ್ಲಿ ಬಿಸಿಸಿಐನ ಎಲ್ಲಾ ವಯೋಮಾನದ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಆಟಗಾರರಿಗೆ ಹೊಸ ನಿಯಮಗಳು ಅನ್ವಯವಾಗಲಿವೆ. ಹೊಸ ನೀತಿಯ ಪ್ರಕಾರ, ಆಟಗಾರನು ತನ್ನ ತಪ್ಪನ್ನು ಒಪ್ಪಿಕೊಂಡರೆ, ಅಂದರೆ ಅವನು ವಯಸ್ಸಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿರುವುದಾಗಿ ಒಪ್ಪಿಕೊಂಡರೆ, ಅವನು ತಪ್ಪಿಸಿಕೊಳ್ಳಬಹುದು ಮತ್ತು ಆಟಗಾರನು ಇದನ್ನು ಮರೆಮಾಚಿ ಸಿಕ್ಕಿಬಿದ್ದರೆ, ಬಿಸಿಸಿಐ ಅವನನ್ನು 2 ವರ್ಷಗಳ ಕ್ರಿಕೆಟ್ ನಿಂದ ನಿಷೇಧಿಸಲಿದೆ.


COMMERCIAL BREAK
SCROLL TO CONTINUE READING

ಈ ನೂತನ ನೀತಿಯಡಿಯಲ್ಲಿ, ಒಂದು ವೇಳೆ ಆಟಗಾರ ತನ್ನ ನಕಲಿ ದಾಖಲೆಗಳನ್ನು ಸಲ್ಲಿಸಿ  ಹುಟ್ಟಿದ ದಿನಾಂಕದಲ್ಲಿ ಏರುಪೇರು ಮಾಡಿರುವುದನ್ನು ಒಪ್ಪಿಕೊಂಡರೆ ಆತನನ್ನು ನಿಷೇಧಿಸಲಾಗುವುದಿಲ್ಲ ಮತ್ತು ಸರಿಯಾದ ವಯಸ್ಸನ್ನು ತಿಳಿಸಿದರೆ ಪಂದ್ಯಾವಳಿಗಳಲ್ಲಿ ಆಡಲು ಅನುಮತಿಸಲಾಗುತ್ತಿದೆ. ಇದಕ್ಕಾಗಿ ಆಟಗಾರ ತಾನು ಸಹಿ ಮಾಡಿದ ಪತ್ರ / ಇಮೇಲ್ ಅನ್ನು ಸಲ್ಲಿಸಬೇಕಾಗುತ್ತದೆ, ಅದರೊಂದಿಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಪರಿಶೀಲನೆಯ ನಂತರ ಸೆಪ್ಟೆಂಬರ್ 15 ರೊಳಗೆ ಅವನು ನಿಜವಾದ ಜನ್ಮ ದಿನಾಂಕದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.


ಒಂದು ವೇಳೆ ನೊಂದಾಯಿತ ಆಟಗಾರ ನಿಜಾಂಶವನ್ನು ಹೇಳದಿದ್ದರೆ ಹಾಗೂ ಆತನ ದಾಖಲೆಗಳು ನಕಲಿ ಎಂದು ಕಂಡುಬಂದರೆ ಆತನನ್ನು 2 ವರ್ಷಗಳ ಕಾಲ ಬ್ಯಾನ್ ಮಾಡಲಾಗುವುದು ಮತ್ತು ಎರಡು ವರ್ಷಗಳು ಪೂರ್ಣಗೊಂಡ ಬಳಿಕವೂ ಕೂಡ ಆತನನ್ನು ಬಿಸಿಸಿಐನ ವಯೋ ವರ್ಗದಲ್ಲಿ ಆತನಿಗೆ ಟೂರ್ನಾಮೆಂಟ್ ಆಡಲು ಅನುಮತಿ ನೀಡಲಾಗುವುದಿಲ್ಲ. ಇದರ ಜೊತೆಗೆ ಯಾವುದೇ ಆಟಗಾರ ತನ್ನ ನಿವಾಸಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದಲ್ಲಿ (ಹಿರಿಯ ಮಹಿಳಾ ಮತ್ತು ಪುರುಷರು ಶಾಮೀಲು) ಅವರ ಮೇಲೂ ಕೂಡ ಎರಡು ವರ್ಷಗಳ ಕಾಲ ನಿಷೇಧ ವಿಧಿಸಲಾಗುವುದು. ಆದರೆ, ಇಲ್ಲಿ ತಪ್ಪೊಪ್ಪಿಕೊಳ್ಳುವ ನೀತಿ ಅನ್ವಯಿಸುವುದಿಲ್ಲ.


ಬಿಸಿಸಿಐ ಅಂಡರ್ -16 ಪಂದ್ಯಾವಳಿಯಲ್ಲಿ 14-16 ವರ್ಷದ ಆಟಗಾರರು ಮಾತ್ರ ಭಾಗವಹಿಸಬಹುದು. ವಯಸ್ಸಿಗೆ ಸಂಬಂಧಿಸಿದ ಅಡಚಣೆಗಳ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಸಂಖ್ಯೆಯನ್ನು ಸಹ ರಚಿಸಲಾಗಿದೆ ಎಂದು ಮಂಡಳಿ ಹೇಳಿದೆ. ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly), 'ನಾವು ಎಲ್ಲಾ ವಯೋಮಾನದವರಿಗೂ ಸಮಾನ ವೇದಿಕೆಯನ್ನು ಒದಗಿಸಲು ಬದ್ಧರಾಗಿದ್ದೇವೆ. ವಯಸ್ಸಿಗೆ ಸಂಬಂಧಿಸಿದ ವಂಚನೆಯನ್ನು ನಿಗ್ರಹಿಸಲು ಬಿಸಿಸಿಐ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಈಗ ಅದು ಮುಂಬರುವ ಸೀಜನ್ ನಲ್ಲಿ ಹೆಚ್ಚು ಕಠಿಣ ನಿಯಮಗಳನ್ನು ಜಾರಿಗೆ ತರಲಿದೆ. ತಮ್ಮ ತಪ್ಪನ್ನು ತಾವೇ ಒಪ್ಪಿಕೊಳ್ಳದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.