ನಿಗದಿಯಂತೆ ಶ್ರೀಲಂಕಾದಲ್ಲಿ ನಿಡಹಾಸ್ ತ್ರಿಕೋನ ಟಿ20 ಸರಣಿ ಆರಂಭ-ಬಿಬಿಸಿಐ
ಕೋಮು ಹಿಂಸಾಚಾರದ ಭುಗಿಲೆದ್ದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ, ಭಾರತ ಕ್ರಿಕೆಟ್ ತಂಡವನ್ನು ಒಳಗೊಂಡ ಟಿ20 ಸರಣಿ ಕ್ರಿಕೆಟ್ ಪಂದ್ಯ ಮುಂದುವರಿಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಕೋಲ್ಕತ್ತಾ/ನವದೆಹಲಿ: ಕೋಮು ಹಿಂಸಾಚಾರದ ಭುಗಿಲೆದ್ದ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದ್ದರೂ, ಭಾರತ ಕ್ರಿಕೆಟ್ ತಂಡವನ್ನು ಒಳಗೊಂಡ ಟಿ20 ಸರಣಿ ಕ್ರಿಕೆಟ್ ಪಂದ್ಯ ಮುಂದುವರಿಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಪ್ರೇಮ್'ದಾಸ್ ಕ್ರೀಡಾಂಗಣದಲ್ಲಿ ನಡೆದ ನಿಡಹಾಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಭಾರತವು ಆತಿಥೇಯರನ್ನು ಮುನ್ನಡೆಸುವ ಕೆಲವೇ ಗಂಟೆಗಳ ಮುಂಚೆ ಪಂದ್ಯಾವಳಿಯ ನಡೆಯುತ್ತಿರುವ "ಕೊಲಂಬೊದಲ್ಲಿ ಪರಿಸ್ಥಿತಿಯು ನಿಯಂತ್ರಣದಲ್ಲಿದೆ" ಎಂದು ಬಿಸಿಸಿಐ ಖಚಿತಪಡಿಸಿದೆ.
"ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಕರ್ಫ್ಯೂ ವಿಧಿಸಲಾಗಿದೆ. ಕ್ಯಾಂಡಿಯಲ್ಲಿರುವಂತೆ ಕೊಲಂಬೋದಲ್ಲಿ ಪರಿಸ್ಥಿತಿ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಎರಡೂ ಸ್ಥಳಗಳ ಭದ್ರತಾ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಕೊಲಂಬೊದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಇದರಲ್ಲಿ ಯಾವುದೇ ಬದಲಾವಣೆಯಾದರೆ ತಿಳಿಸಲಿದ್ದೇವೆ" ಎಂದು ಭಾರತೀಯ ತಂಡದ ಮಾಧ್ಯಮ ಘಟಕವು ಕೊಲಂಬೋದಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ.