ನವದೆಹಲಿ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಬದಲಾವಣೆಯ ಯುಗ ಕಾಣುತ್ತಿದೆ. ಹೊಸ ಸಂವಿಧಾನದ ಪ್ರಕಾರ ಅಕ್ಟೋಬರ್ 23 ರಂದು ಬಿಸಿಸಿಐನಲ್ಲಿ ಚುನಾವಣೆಗಳು ಪೂರ್ಣಗೊಳ್ಳಲಿವೆ. ಈ ದಿನ ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ (ಎಜಿಎಂ) ಕೋಲ್ಕತಾ ಕ್ರಿಕೆಟ್ ಸಂಘದ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಅವರನ್ನು ಮುಂದಿನ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.


COMMERCIAL BREAK
SCROLL TO CONTINUE READING

ಬಿಸಿಸಿಐ ಚುನಾವಣೆಯಲ್ಲಿ ಸೌರವ್ ಗಂಗೂಲಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗಿದೆ. ಲೋಧಾ ಸಮಿತಿಯ ಶಿಫಾರಸುಗಳ ನಂತರ ರಚಿಸಲಾದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) 33 ತಿಂಗಳ ದೀರ್ಘಾವಧಿಯ ನಂತರ ಬಿಸಿಸಿಐನ ಚುನಾಯಿತ ಪ್ರತಿನಿಧಿಗಳನ್ನು ನೀಡುತ್ತಿರುವುದು ಇದೇ ಮೊದಲು.


ಬಿಸಿಸಿಐನ ಹೊಸ ಕಾರ್ಯದರ್ಶಿಯಾಗಿ ದೇಶದ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜೈ ಷಾ ಆಯ್ಕೆಯಾಗಲಿದ್ದು, ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಪ್ರಸ್ತುತ ಹಣಕಾಸು ಸಚಿವ ಅನುರಾಗ್ ಠಾಕೂರ್ ಅವರ ಕಿರಿಯ ಸಹೋದರ ಅರುಣ್ ಧುಮಾಲ್ ಬಿಸಿಸಿಐ ಖಜಾಂಚಿಯಾಗಿ ಆಯ್ಕೆಯಾಗಲಿದ್ದಾರೆ. ಭಾನುವಾರ, ಮುಂಬೈನ ಹೋಟೆಲ್ ಟ್ರೈಡೆಂಟ್ನಲ್ಲಿ ಅನೌಪಚಾರಿಕ ಭೋಜನಕ್ಕೆ ಎಲ್ಲಾ ಸದಸ್ಯರನ್ನು ಆಹ್ವಾನಿಸಲಾಗಿದೆ ಮತ್ತು ಈ ಎಲ್ಲ ಉನ್ನತ ಹುದ್ದೆಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿದ್ದು, ಈ ಬಗ್ಗೆ ತಡರಾತ್ರಿ ಒಮ್ಮತಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.



ಆದಾಗ್ಯೂ, ಎನ್ ಶ್ರೀನಿವಾಸನ್ ಅವರೊಂದಿಗೆ ಸಂಬಂಧ ಹೊಂದಿರುವ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್ ಮತ್ತು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅನ್ನು ಅಕ್ಟೋಬರ್ 23 ರಂದು ನಡೆಯಲಿರುವ ಎಜಿಎಂಗೆ ಬರುವುದನ್ನು ಸಿಎಒ ನಿರ್ಬಂಧಿಸಿದೆ. ಏಕೆಂದರೆ ಈ ಎಲ್ಲಾ ಕ್ರಿಕೆಟ್ ಸಂಘಗಳು ಸಿಒಎ ಸೂಚನೆಗಳ ಪ್ರಕಾರ, ನಾವು ನಮ್ಮ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿವೆ.