Team India Squad for T20 World Cup 2024: ಭಾರತ ಕೂಡ ಟಿ20 ವಿಶ್ವಕಪ್‌ಗೆ ಸಜ್ಜಾಗಿದೆ. ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಆಯ್ಕೆಗಾರರ ​​ಸಭೆಯ ನಂತರ, ಜೂನ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌’ಗೆ 15 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ರೋಹಿತ್ ಶರ್ಮಾ ತಂಡದ ನಾಯಕರಾಗಿದ್ದರೆ, ಹಾರ್ದಿಕ್ ಪಾಂಡ್ಯ ಉಪನಾಯಕತ್ವ ಪಡೆದಿದ್ದಾರೆ. ಈ ಬಾರಿ, ಅದೃಷ್ಟವು ಸ್ಟಾರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತು ಸ್ಪಿನ್ ಮಾಸ್ಟರ್ ಯುಜ್ವೇಂದ್ರ ಚಹಾಲ್ ಕಡೆ ಮುಖ ಮಾಡಿದ್ದು, ತಂಡದಲ್ಲಿ ಇವರಿಬ್ಬರಿಗೆ ಸ್ಥಾನ ಸಿಕ್ಕಿದೆ. ಅಂದಹಾಗೆ ಚಹಾಲ್ 8 ತಿಂಗಳ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.


ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ಸೇವಿಸಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭಗಳು


ಏಕದಿನ ವಿಶ್ವಕಪ್‌’ಗೂ ಮುನ್ನ ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಶಸ್ತ್ರಚಿಕಿತ್ಸೆಯಿಂದಾಗಿ ಅವರು ಐಪಿಎಲ್ ಮತ್ತು ಟಿ20 ವಿಶ್ವಕಪ್‌’ನಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಮೆಗಾ ಈವೆಂಟ್‌’ಗೆ ಟಿಕೆಟ್ ಪಡೆದಿದ್ದಾರೆ. ವೇಗದ ಬೌಲರ್‌’ಗಳಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಕೂಡ ಇದ್ದು, ಆಲ್ ರೌಂಡರ್ ಗಳಾಗಿ ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ.


ಟಿ20 ವಿಶ್ವಕಪ್‌’ಗೆ ಭಾರತ ತಂಡ


ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.


ಇದನ್ನೂ ಓದಿ: ಬಿಸಿನೀರಿಗೆ ಇದನ್ನು ಬೆರಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಹೊಟ್ಟೆಯ ಹಠಮಾರಿ ಬೊಜ್ಜು ಕರಗುತ್ತೆ! ಹೀರೋಯಿನ್ ಥರ ಸ್ಲಿಮ್ ಆಗ್ತೀರಿ!


ರಿಸರ್ವ ಪ್ಲೇಯರ್ಸ್: ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್.


ಭಾರತದ T20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಆಟಗಾರರ ಪಟ್ಟಿ


  • ಕೆಎಲ್ ರಾಹುಲ್

  • ಇಶಾನ್ ಕಿಶನ್

  • ರುತುರಾಜ್ ಗಾಯಕ್ವಾಡ್

  • ಅಶುತೋಷ್

  • ಸಂದೀಪ್ ಶರ್ಮಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ