Age Detection Software: ಕ್ರಿಕೆಟ್ ಆಟಗಾರರ ವಯಸ್ಸು ಪತ್ತೆಗೆ ಸಾಫ್ಟ್‌ವೇರ್ ಬಳಸಲು ಬಿಸಿಸಿಐ ಸಿದ್ಧತೆ
ಸದ್ಯ ಜಾರಿಯಲ್ಲಿರುವ TW3 ಪದ್ಧತಿಯ ಜೊತೆಗೆ ಹೊಸ ಸಾಫ್ಟ್‌ವೇರ್ ಬಳಸುವುದರಿಂದ ಪರೀಕ್ಷೆ, ಪ್ರಕ್ರಿಯೆಯ ಖರ್ಚಿನಲ್ಲಿ ಶೇ.80ರಷ್ಟು ಉಳಿತಾಯ ಮಾಡಬಹುದು ಎಂದು ಬಿಸಿಸಿಐ ಹೇಳಿದೆ.
ನವದೆಹಲಿ: ಭಾರತೀಯ ಕ್ರಿಕೆಟ್ ಆಟಗಾರರ ವಯಸ್ಸು ಪತ್ತೆಗಾಗಿ ನೂತನ ಪ್ರಾಯೋಗಿಕವಾಗಿ ನೂತನ ಸಾಫ್ಟ್‌ವೇರ್ ಬಳಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಜ್ಜಾಗಿದೆ ಎಂದು ವರದಿಯಾಗಿದೆ.
ಸದ್ಯ ಜಾರಿಯಲ್ಲಿರುವ TW3 (ಎಡಗೈ ಮತ್ತು ಮಣಿಗಂಟಿನ ಕ್ಷಕಿರಣ ಆಧಾರಿತ) ಪದ್ಧತಿಯ ಜೊತೆಗೆ ಹೊಸ ಸಾಫ್ಟ್‌ವೇರ್ ಬಳಸುವುದರಿಂದ ಪರೀಕ್ಷೆ, ಪ್ರಕ್ರಿಯೆಯ ಖರ್ಚಿನಲ್ಲಿ ಶೇ.80ರಷ್ಟು ಉಳಿತಾಯ ಮಾಡಬಹುದು ಎಂದು ಬಿಸಿಸಿಐ ಹೇಳಿದೆ. TW3 ಟೆಸ್ಟ್ ಮಾಡಲು 2,400 ರೂ. ಖರ್ಚಾಗುತ್ತದೆ. ಫಲಿತಾಂಶವು ಬರಲು 3-4 ದಿನಗಳು ಬೇಕು. ಹೊಸದಾಗಿ ಬಳಸಲು ಉದ್ದೇಶಿಸಿರುವ ಬೋನ್‌ಎಕ್ಸ್‌ಪರ್ಟ್ ಸಾಫ್ಟವೇರ್ ನಲ್ಲಿ ಕೇವಲ 288 ರೂ. ವೆಚ್ಚವಾಗಲಿದ್ದು, ತಕ್ಷಣವೇ ಫಲಿತಾಂಶ ದೊರೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: IND vs WI : ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಎಂಟ್ರಿ ನೀಡಿದ ಈ ಮಾರಣಾಂತಿಕ ಆಲ್‌ರೌಂಡರ್!
‘ಆಟಗಾರರು ತಮ್ಮ ತವರು ರಾಜ್ಯದಲ್ಲಿ ಬಿಸಿಸಿಐನಿಂದ ಗುರುತಿಸಲಾದ ಪ್ರಯೋಗಾಲಯಗಳಲ್ಲಿಯೇ ಎಕ್ಸ್ ರೇ ತೆಗೆಸಿ, ಅದರ ಚಿತ್ರವನ್ನು ಮಂಡಳಿಯ ಎವಿಪಿ ವಿಭಾಗಕ್ಕೆ ಕಳಿಸುತ್ತಾರೆ. ಎವಿಪಿಯ ಸಂಗ್ರಹಿಸಿದ ಚಿತ್ರಗಳು ಮತ್ತು ಮಾಹಿತಿಯನ್ನು ಸ್ವತಂತ್ರ ರೆಡಿಯೊಲಾಜಿಸ್ಟ್‌ಗಳಿಗೆ ಕಳಿಸುತ್ತದೆ. ಬೋನ್ ಏಜ್ (ಎಲುವಿನ ವಯಸ್ಸು) ಪತ್ತೆ ಮಾಡಲು ಸಮಯ ಹೆಚ್ಚು ತೆಗೆದುಕೊಳ್ಳುತ್ತಾರೆ. 38 ಸಂಸ್ಥೆಗಳ ಆಟಗಾರರ ಸಂಖ್ಯೆ ಹೆಚ್ಚಿದ್ದು, ರೇಡಿಯೊಲಾಜಿಸ್ಟ್‌ಗಳ ಸಂಖ್ಯೆ ಕಡಿಮೆ ಇದೆ’ ಅಂತಾ ಮೂಲಗಳು ತಿಳಿಸಿವೆ ಎಂದು PTI ಸುದ್ದಿಸಂಸ್ಥೆ ವರದಿ ಮಾಡಿದೆ.
‘BCCI AVP ವಿಭಾಗವು ಅವುಗಳನ್ನು ಸರಿಯಾದ ಸ್ವರೂಪದಲ್ಲಿ ಒಟ್ಟುಗೂಡಿಸುತ್ತದೆ ಮತ್ತು ಮೂಳೆ ವಯಸ್ಸಿನ ವ್ಯಾಖ್ಯಾನಕ್ಕಾಗಿ BCCI ಪ್ಯಾನೆಲ್‌ನಲ್ಲಿರುವ ಇಬ್ಬರು ಸ್ವತಂತ್ರ ರೇಡಿಯಾಲಜಿಸ್ಟ್‌ಗಳಿಗೆ ಕಳುಹಿಸಲಾಗುತ್ತದೆ. ನಮ್ಮಲ್ಲಿ ಸುಮಾರು 4 ರೇಡಿಯಾಲಜಿಸ್ಟ್‌ಗಳು 38 ಸಂಘಗಳ ರೇಟಿಂಗ್‌ಗಳನ್ನು ಮಾಡುವುದರಿಂದ ಮತ್ತು ಪ್ರತಿ ವಿಕಿರಣಶಾಸ್ತ್ರಜ್ಞರು ವ್ಯಾಖ್ಯಾನವನ್ನು ಮಾಡುವುದರಿಂದ ವರದಿ ಮಾಡಲು ಸಮಯ ತೆಗೆದುಕೊಳ್ಳುತ್ತದೆ. ಸುಮಾರು 8-9 ಅಸೋಸಿಯೇಷನ್‌ಗಳು ಪೂರ್ಣಗೊಳಿಸಲಾಗುವುದು’ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಯೋಗದಲ್ಲಿ ಮಂಡಳಿಯು ರಾಜ್ಯ ಸಂಘಗಳೊಂದಿಗೆ ಕೆಲಸ ಮಾಡಲಿದೆ.
ಇದನ್ನೂ ಓದಿ: Ind vs WI : ಇಂದು ಟೀಂ ಇಂಡಿಯಾಗೆ ಎಂಟ್ರಿ ನೀಡಲಿದ್ದಾನೆ ಈ ಮಾರಕ ಬ್ಯಾಟ್ಸ್‌ಮನ್!
ಕ್ರಿಕೆಟ್ ಆಟದಲ್ಲಿ ವಯೋಮಾನದ ವಂಚನೆ ದೇಶದಾದ್ಯಂತ ವ್ಯಾಪಕವಾಗಿದೆ. 2019ರ ಜೂನ್‍ನಲ್ಲಿ ನಕಲಿ ಜನನ ಪ್ರಮಾಣಪತ್ರ ಸಲ್ಲಿಸಿ ತಪ್ಪಿತಸ್ಥರೆಂದು ಕಂಡುಬಂದ ನಂತರ ಜಮ್ಮು-ಕಾಶ್ಮೀರದ ವೇಗಿ ರಸಿಖ್ ಆಲಂರನ್ನು 2 ವರ್ಷಗಳ ಕಾಲ ನಿಷೇಧಿಸಲಾಯಿತು. ಇದರೊಂದಿಗೆ 19 ವರ್ಷದೊಳಗಿನವರ ವಿಶ್ವಕಪ್ ಸ್ಟಾರ್ ಮಂಜೋತ್ ಕಾರ್ಲಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ದೆಹಲಿ ಬ್ಯಾಟರ್ ಅಂಕಿತ್ ಬಾವ್ನೆ ತಮ್ಮ ನಿಜ ವಯಸ್ಸು ಮರೆಮಾಚಿದ ಆರೋಪವನ್ನು ಎದುರಿಸುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.