IPL 2025: RTM ಕಾರ್ಡ್ ಬಳಸುವಂತಿಲ್ಲ.. ಐವರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ..! ಇದು ಬಿಸಿಸಿಐ ರಿಟೆನ್ಷನ್ ರೂಲ್ಸ್..!
IPL 2025: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025ರ ಮೆಗಾ ಹರಾಜಿಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಅಂತಿಮಗೊಳಿಸಿದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಸಿಸಿಐನ 93ನೇ ಸಾಮಾನ್ಯ ಸಭೆಯಲ್ಲಿ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಫ್ರಾಂಚೈಸಿಗಳು ಕೋರಿದ ಆರ್‌ಟಿಎಂ ಕಾರ್ಡ್ ಅನ್ನು ಬಿಸಿಸಿಐ ತಿರಸ್ಕರಿಸಿದಂತಿದಂತೆ ಕಂಡು ಬರುತ್ತಿದೆ.
IPL 2025: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025ರ ಮೆಗಾ ಹರಾಜಿಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ನೀತಿಯನ್ನು ಅಂತಿಮಗೊಳಿಸಿದಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಸಿಸಿಐನ 93ನೇ ಸಾಮಾನ್ಯ ಸಭೆಯಲ್ಲಿ ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ. ಫ್ರಾಂಚೈಸಿಗಳು ಕೋರಿದ ಆರ್‌ಟಿಎಂ ಕಾರ್ಡ್ ಅನ್ನು ಬಿಸಿಸಿಐ ತಿರಸ್ಕರಿಸಿದಂತಿದಂತೆ ಕಂಡು ಬರುತ್ತಿದೆ.
ಬಿಸಿಸಿಐ ಶೀಘ್ರದಲ್ಲೇ ಐಪಿಎಲ್ 2025ರ ಧಾರಣ ನೀತಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ. ರಾಷ್ಟ್ರೀಯ ವೆಬ್‌ಸೈಟ್ ಲೇಖನದ ಪ್ರಕಾರ, ಹೊಸ ಧಾರಣ ನೀತಿಯಲ್ಲಿ ಕೇವಲ ಐದು ಆಟಗಾರರನ್ನಷ್ಟೆ ಉಳಿಸಿಕೊಳ್ಳಬಹುದು. ಹಿಂದಿನ ಮೆಗಾ ಹರಾಜಿನಂತೆ ಆರ್‌ಟಿಎಂ ಕಾರ್ಡ್‌ಗಳಿಗೆ ಅವಕಾಶವಿಲ್ಲ. ಧಾರಣ ನೀತಿಯನ್ನು ರೂಪಿಸುವ ಮುನ್ನ ಬಿಸಿಸಿಐ 10 ಫ್ರಾಂಚೈಸಿಗಳ ಮಾಲೀಕರ ಜೊತೆ ಸಭೆ ನಡೆಸಿ ಅವರ ಸಲಹೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ: IPL 2025: ಸ್ಟಾರ್ ಆಟಗಾರನನ್ನು ಕೈ ಬಿಟ್ಟ RCB ತಂಡ! ದೊಡ್ಡ ಮೊತ್ತದ ಶುಲ್ಕ ಕೇಳಿ ತಂಡದಿಂದ ಹೊರಬಿದ್ದ ಆ ಆಟಗಾರ ಯಾರು ಗೊತ್ತಾ?
ಈ ಸಭೆಯಲ್ಲಿ ಆಯಾ ಫ್ರಾಂಚೈಸಿಗಳು ವಿವಿಧ ವಾದಗಳನ್ನು ಆಲಿಸಿದ್ದಾರೆ ಎಂದು ವರದಿಯಾಗಿದೆ. ಕೆಲವರಿಗೆ ಮೆಗಾ ಹರಾಜು ಅಗತ್ಯವಿಲ್ಲ, ಇನ್ನು ಕೆಲವರಿಗೆ ಬೇಕು, 8 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿ ಆರ್‌ಟಿಎಂ ಕಾರ್ಡ್ ಕೊಡಿ ಎಂದು ಕೆಲವು ಫ್ರಾಂಚೈಸಿಗಳು ಹರಿಹಾಯ್ದಿದ್ದಾರೆ.
ಫ್ರಾಂಚೈಸಿಗಳ ಬೇಡಿಕೆಯನ್ನು ಪರಿಗಣಿಸದೆ ಐವರು ಆಟಗಾರರನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಬಿಸಿಸಿಐ ನಿಯಮಗಳನ್ನು ರೂಪಿಸಿರುವಂತಿದೆ. ಹರಾಜಿನಲ್ಲಿ ತಮ್ಮ ಆಟಗಾರನನ್ನು ಖರೀದಿಸುವ ರೈಟ್ ಟು ಮ್ಯಾಚ್ ಕಾರ್ಡ್ (RTM) ಹೊಂದಿರುವ ಯಾವುದೇ ತಂಡವು ಬೆಲೆ ಪಾವತಿಸಿದ ನಂತರ ಅದನ್ನು ಮರಳಿ ಖರೀದಿಸಬಹುದು. RTM ಕಾರ್ಡ್ ಅನ್ನು ಕೊನೆಯದಾಗಿ 2018ರ IPL ಮೆಗಾ ಹರಾಜಿನಲ್ಲಿ ಬಳಸಲಾಗಿತ್ತು.
ಇದಾದ ಬಳಿಕ ಬಿಸಿಸಿಐ ಆರ್‌ಟಿಎಂ ಕಾರ್ಡ್‌ಗಳನ್ನು ತೆಗೆದುಹಾಕಿತ್ತು. ಆದರೆ ಬಹುತೇಕ ಫ್ರಾಂಚೈಸಿಗಳು ಮುಂಬರುವ ಮೆಗಾ ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್‌ಗಳ ನಿಯಮವನ್ನು ಪರಿಚಯಿಸಲು ಒತ್ತಾಯಿಸಿವೆ. ಆದರೆ ಬಿಸಿಸಿಐ ಅವರ ಬೇಡಿಕೆಯನ್ನು ನಿರ್ಲಕ್ಷಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.