ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮೂರನೇ ಟಿ 20 ಅಂತಾರಾಷ್ಟ್ರೀಯ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ, ಈ ಹಿನ್ನಲೆಯಲ್ಲಿ ಭಾರತ ತಂಡದ ಅಭ್ಯಾಸದ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಪ್ರಸಕ್ತ ಕೋಚ್ ರವಿಶಾಸ್ತ್ರಿ ಮುಖಾಮುಖಿಯಾಗಿದ್ದಾರೆ.



COMMERCIAL BREAK
SCROLL TO CONTINUE READING

ಈಗ ಈ ಇಬ್ಬರು ಆಟಗಾರರು ಭೇಟಿಯಾಗಿರುವ ಪೋಟೋವನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ. ಆದರೆ ಈ ಟ್ವೀಟ್ ನಲ್ಲಿ ರಾಹುಲ್ ದ್ರಾವಿಡ್ ಹಾಗೂ ರವಿಶಾಸ್ತ್ರಿಯನ್ನು ಹೋಲಿಕೆ ಮಾಡಿದಂತಿರುವ ಟ್ವೀಟ್ ಗೆ ಅಭಿಮಾನಿಗಳು ಟ್ರೋಲ್ ಮಾಡಿ ಟ್ವೀಟ್ ಮಾಡಿದ್ದಾರೆ.



ಇದರಲ್ಲಿ ಟ್ವೀಟರ್ ಬಳಕೆದಾರರೊಬ್ಬರು ' ನನ್ನ ಹೀರೋ ಒಬ್ಬನೇ ,ಅದು ಗೋಡೆ ಮಾತ್ರ, ಅವರನ್ನು ಯಾರೊಂದಿಗೂ ಹೋಲಿಕೆ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಇನ್ನೊಬ್ಬ ಕೂಡ ಜೊತೆಯಾಗಿ ಟ್ವೀಟ್ ಮಾಡಿ ನೀವು ರಾಹುಲ್ ಮತ್ತು ದ್ರಾವಿಡ್ ಅವರನ್ನು ಇಬ್ಬರು ಭಿನ್ನ ವ್ಯಕ್ತಿಗಳಾಗಿ ಎಣಿಸಿದ್ದಿರಿ ಅಂತಾ ಕಾಣಿಸುತ್ತೆ ಎಂದಿದ್ದಾರೆ. 



ಮತ್ತೊಬ್ಬರು ರಾಹುಲ್ ಸರ್ ಅವರ ಅಗತ್ಯವಿದೆ ಎಂದು ಹೇಳಿದ್ದಾರೆ. ಸಾಗರ್ ಎನ್ನುವ ಟ್ವಿಟ್ಟರ್ ಬಳಕೆದಾರ ನಿರೀಕ್ಷೆ vs ವಾಸ್ತವ ಎಂದು ಟ್ವೀಟ್ ಮೂಲಕ ಬಿಸಿಸಿಐ ಟ್ವೀಟ್ ನ್ನು ಟ್ರೋಲ್ ಮಾಡಿದ್ದಾರೆ. ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ಕಂಡ ಅಸಮಾನ್ಯ ಕ್ರಿಕೆಟಿಗರಾಗಿದ್ದಾರೆ ಈಗ ಅವರನ್ನು ರವಿಶಾಸ್ತ್ರಿ ಅವರೊಂದಿಗೆ ಹೋಲಿಕೆ ಮಾಡಿರುವುದು ಅಭಿಮಾನಿಗಳಿಗೆ ಸರಿ ಕಂಡಿಲ್ಲ ಎಂದು ಕಾಣಿಸುತ್ತದೆ.