ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೂ ಮುನ್ನ ಹೊಸ ತರಬೇತಿ ಕಿಟ್ ಅನಾವರಣಗೊಳಿಸಿದ ಬಿಸಿಸಿಐ
ಜೂನ್ 7 ರಿಂದ 11 ರವರೆಗೆ ಓವಲ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್‌ಗೆ ಮುಂಚಿತವಾಗಿ ಟೀಮ್ ಇಂಡಿಯಾ ಗುರುವಾರ ಲಂಡನ್‌ನಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿತು.ಭಾರತ ತಂಡದ ಒಂದು ಭಾಗವು ಈಗಾಗಲೇ ಇಂಗ್ಲೆಂಡ್ ಗೆ ಆಗಮಿಸಿದ್ದು, ಈಗ ವಿರಾಟ್ ಕೊಹ್ಲಿ ಕೂಡ ತಂಡವನ್ನು ಸೇರಿದ್ದಾರೆ.
ನವದೆಹಲಿ: ಜೂನ್ 7 ರಿಂದ 11 ರವರೆಗೆ ಓವಲ್‌ನಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023 ಫೈನಲ್‌ಗೆ ಮುಂಚಿತವಾಗಿ ಟೀಮ್ ಇಂಡಿಯಾ ಗುರುವಾರ ಲಂಡನ್‌ನಲ್ಲಿ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿತು.ಭಾರತ ತಂಡದ ಒಂದು ಭಾಗವು ಈಗಾಗಲೇ ಇಂಗ್ಲೆಂಡ್ ಗೆ ಆಗಮಿಸಿದ್ದು, ಈಗ ವಿರಾಟ್ ಕೊಹ್ಲಿ ಕೂಡ ತಂಡವನ್ನು ಸೇರಿದ್ದಾರೆ.
ರೋಹಿತ್ ಶರ್ಮಾ, ಶುಭಮನ್ ಗಿಲ್, ಮೊಹಮ್ಮದ್ ಶಮಿ ಮತ್ತು ಇತರರು ಸೇರಿದಂತೆ ತಂಡದ ಇತರ ಭಾಗವು ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2023 (ಐಪಿಎಲ್ 2023) ಸೀಸನ್ ಮುಗಿದ ನಂತರ ಯುಕೆಗೆ ಹಾರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್‌ಗೆ ಮುಂಚಿತವಾಗಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಡೀಡಸ್ ಅನ್ನು ಹೊಸ ಕಿಟ್ ಪಾಲುದಾರ ಎಂದು ಘೋಷಿಸಿದ್ದರು. ಇತ್ತೀಚಿಗೆ ಭಾರತ ತಂಡವನ್ನು ಯುಕೆಗೆ ತೆರಳಿದಾಗ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಅಡಿಡಾಸ್ ಶರ್ಟ್‌ಗಳನ್ನು ಧರಿಸಿರುವುದು ಕಂಡುಬಂದಿತು. ಗುರುವಾರದಂದು ಬಿಸಿಸಿಐ ಟೀಂ ಇಂಡಿಯಾದ ತರಬೇತಿ ಕಿಟ್ ಅನ್ನು ಸಹ ಅನಾವರಣಗೊಳಿಸಿ ರಾಹುಲ್ ದ್ರಾವಿಡ್, ವೇಗಿ ಉಮೇಶ್ ಯಾದವ್ ಮತ್ತು ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರ ಚಿತ್ರಗಳನ್ನು ಪೋಸ್ಟ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ