ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ Rajeev Shukla..! ಕ್ರಿಕೆಟರ್ಸ್ ಜಾತಿ ವಿಚಾರದಲ್ಲಿ ಆಗಿದ್ದೇನು?
ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಜಯಗಳಿಸಿರುವ ವಿಚಾರವನ್ನು ಪ್ರಸ್ತಾಪಿಸಿ ಬಿಸಿಸಿಐ ಉಪಾಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಮಾಡಿರುವ ಟ್ವೀಟ್ ಇದೀಗ ಚರ್ಚೆಗೆ ಕಾರಣವಾಗಿದೆ.
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ (Team India) ಜಯಗಳಿಸಿರುವ ವಿಚಾರವನ್ನು ಪ್ರಸ್ತಾಪಿಸಿ ಬಿಸಿಸಿಐ (BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಮಾಡಿರುವ ಟ್ವೀಟ್ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಟ್ವೀಟ್ ನಿಂದ ಕೆಂಡಾಮಂಡಲವಾಗಿರುವ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ರಾಜೀವ್ ಶುಕ್ಲಾ ಅವರನ್ನು ತರಾಟೆಗೆತೆಗೆದುಕೊಂಡಿದ್ದಾರೆ.
ರಾಜೀವ್ ಶುಕ್ಲಾ (Rajeev Shukla) ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ (Team India) ಜಯಗಳಿಸಿರುವ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ರಾಜೀವ್ ಶುಕ್ಲಾ, ಬಾರತೀಯ ಆಟಗಾರರ ಧರ್ಮವನ್ನು ಪ್ರಸ್ತಾಪಿಸಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಜನ್ಮ ದಿನದ ಸಂಭ್ರಮದಲ್ಲಿ ಭಾರತದ ಟೆಸ್ಟ್ ತಜ್ಞ Cheteshwar Pujara
ರಾಜೀವ್ ಶುಕ್ಲಾ ಮೊದಲು ಫೋಟೋವೊಂದನ್ನು ಹಾಕಿ ಟ್ವೀಟ್ (tweet) ಮಾಡಿದ್ದರು. ಇದರಲ್ಲಿ ಒಬ್ಬರು ಹಿಂದೂ (Hindu) ಇನ್ನೊಬ್ಬರು ಮುಸ್ಲಿಂ, ಇಬ್ಬರೂ ಬಾರತದ ಗೆಲುವಿನಿಂದ ಸಂತಸಗೊಂಡಿದ್ದಾರೆ. ಈ ವಿಷಯವನ್ನು ದೇಶದ ಜನರು ಅರ್ಥಮಾಡಿಕೊಂಡರೆ, ಹಾರ್ಡ್‌ಕೋರ್ ಮುಸ್ಲಿಂ (Muslim) ಮತ್ತು ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೆಲವು ಪಕ್ಷಗಳ ರಾಜಕೀಯ ಕೊನೆಯಾಗಬಹುದು ಎಂದು ಬರೆದಿದ್ದರು.
ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಕುಮಾರ್ ಸಂಗಕ್ಕಾರ ನೇಮಕ
ಇದಾದ ನಂತರ ನೆಟ್ಟಿಗರು, ರಾಜೀವ್ ಶುಕ್ಲಾ ಅವರನ್ನು ಟ್ರೋಲ್ (troll) ಮಾಡಲು ಪ್ರಾರಂಭಿಸಿದ್ದಾರೆ,. ರಾಜಕೀಯ ಉದ್ದೇಶದಿಂದ ಭಾರತೀಯ ತಂಡದ ವಿಜಯವನ್ನು ಆಟಗಾರರ ಧರ್ಮದೊಂದಿಗೆ ಜೋಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದಲ್ಲದೆ, ರಾಜೀವ್ ಶುಕ್ಲಾ ವಾಷಿಂಗ್ಟನ್ ಸುಂದರ್ ಅವರ ಧರ್ಮವನ್ನು ಕೂಡಾ ತಪ್ಪಾಗಿ ಹೇಳಿದ್ದಾರೆ. ವಾಸ್ತವವಾಗಿ ಸುಂದರ್ ತಮಿಳುನಾಡಿನ ಹಿಂದೂ ಕುಟುಂಬದಿಂದ ಬಂದವರು. ಆದರೆ ರಾಜೀವ್ ಶುಕ್ಲಾ, ಸುಂದರ್ ಅವರನ್ನು ಕ್ರಿಶ್ಚಿಯನ್ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.