Sourav Ganguly On Virat Kohli: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಮುಖಾಮುಖಿಯ ವರದಿಗಳ ನಡುವೆ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ದೊಡ್ಡ ಹೆಲಿಕೆಯೊಂದನ್ನೇ ನೀಡಿದ್ದಾರೆ. ಗುರ್ಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ದಾದಾ, ವಿರಾಟ್ ಕೊಹ್ಲಿ ಅವರ ವರ್ತನೆಯನ್ನು ನಾನು ಇಷ್ಟಪಡುತ್ತೇನೆ ಆದರೆ ಅವರು ತುಂಬಾ ಜಗಳವಾಡುತ್ತಾರೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ (Sourav Ganguly Vs Virat Kohli) ಅವರ ವರ್ತನೆ ತುಂಬಾ ಚೆನ್ನಾಗಿದೆ, ಆದರೆ ಅವರು ಸಾಕಷ್ಟು ಜಗಳವಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ದಾದಾಗೆ ಅವರು ಯಾವ ಆಟಗಾರನ ವರ್ತನೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಗಂಗೂಲಿ, "ವಿರಾಟ್ ಕೊಹ್ಲಿ ವರ್ತನೆ ತುಂಬಾ ಚೆನ್ನಾಗಿದೆ, ಆದರೆ ಅವರು ಸಾಕಷ್ಟು ಜಗಳವಾಡುತ್ತಾರೆ" ಎಂದು ಉತ್ತರಿಸಿದ್ದಾರೆ. 


ನೀವು ಈಗ ಜೀವನದಲ್ಲಿ ಇಷ್ಟು ಒತ್ತಡವನ್ನು ಹೇಗೆ ನಿಭಾಯಿಸುತ್ತಿದ್ದೀರಿ ಎಂದು ದಾದಾಗೆ ಪ್ರಶ್ನಿಸಲಾಗಿ "ಜೀವನದಲ್ಲಿ ಯಾವುದೇ ಒತ್ತಡವಿಲ್ಲ, ಹೆಂಡತಿ ಮತ್ತು ಗೆಳತಿ ಮಾತ್ರ ಒತ್ತಡವನ್ನು ನೀಡುತ್ತಾರೆ" ಎಂದು ದಾದಾ ಹೇಳಿದ್ದಾರೆ.


ಇದನ್ನೂ ಓದಿ-ದ್ರಾವಿಡ್ ನಂತರ ಟೀಂ ಇಂಡಿಯಾದ ಸಂಭಾವ್ಯ ಕೋಚ್ ಇವರೆ ಎಂದ ಸೌರವ್ ಗಂಗೂಲಿ


ಇದನ್ನು ಮೊದಲೇ ಹೇಳಲಾಗಿತ್ತು
ಇದಕ್ಕೂ ಮುನ್ನ, ವಿರಾಟ್ ಕೊಹ್ಲಿ ಅವರ ಪತ್ರಿಕಾಗೋಷ್ಠಿಗೆ ಸಂಬಂದಿಸಿದಂತೆ ತಮ್ಮ ಮೌನ ಮುರಿದಿದ್ದ  ದಾದಾ, ಈ ವಿಷಯದಲ್ಲಿ ಯಾವುದೇ ಹೆಚ್ಚುವರಿ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಹೇಳಿದ್ದರು. ಹಾಗೆ ನೋಡಿದರೆ ಗಂಗೂಲಿ ಏನನ್ನೂ ಮಾತನಾಡದೆ ದೊಡ್ಡ ವಿಷಯವನ್ನೇ ಹೇಳಿದ್ದರು. ದಾದಾ ಅವರ ಈ ಹೇಳಿಕೆಯ ನಂತರ ಮಂಡಳಿಯು ಕೊಹ್ಲಿಗೆ ತನ್ನ ಪಾವರ್ ತೋರಿಸಲು ಮನಸ್ಸು ಮಾಡಿದೆ ಎಂದೇ ಮಾಧ್ಯಮಗಳಲ್ಲಿ ವರದಿಯಾಗಿತ್ತು.


ಇದನ್ನೂ ಓದಿ-Virat Vs Ganugly : ಕೊಹ್ಲಿ ಹೇಳಿಕೆಗೆ ಪ್ರತೀಕಾರ ತೀರಿಸಿಕೊಂಡ ಗಂಗೂಲಿ : ಈಗ ಕ್ರಮ ಕೈಗೊಳ್ಳಲಿದೆಯೇ BCCI 


ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹಲವಾರು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ  ಒಂದು ದಿನದ ನಂತರ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಈ ವಿಷಯದ ಬಗ್ಗೆ ಯಾವುದೇ ಹೆಚ್ಚುವರಿ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದರು. ಈ ಸಮಸ್ಯೆಯನ್ನು ಮಂಡಳಿ ವತಿಯಿಂದ ಪರಿಹರಿಸಲಾಗುವುದು ಎಂದು ಹೇಳಿದ್ದರು.


ಇದನ್ನೂ ಓದಿ-Sunil GavaSkar : ನಾಯಕತ್ವ ಸ್ಥಾನದಿಂದ ಕೊಹ್ಲಿ ವಜಾ : ಕಾರಣ ಬಹಿರಂಗಪಡಿಸಿದ ಸುನಿಲ್ ಗವಾಸ್ಕರ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.