Natasa Stankovic Background: ಸದ್ಯ ನಟಿ ನತಾಶಾ ಸ್ಟಾಂಕೋವಿಕ್, ಕ್ರಿಕೆಟಿಗ ಹಾರ್ದಿಕಾ ಪಾಂಡ್ಯ ಜೊತೆಗೆ ವಿಚ್ಛೇದನ ಮಾಡಿಕೊಳ್ಳುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಈ ವರದಿಯಲ್ಲಿ ನತಾಶಾ ಹಿನ್ನೆಲೆ, ಆಕೆ ನಟಿಸಿದ ಸಿನಿಮಾ ಹಾಗೂ ಡೇಟಿಂಗ್ ವಿಚಾರಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಜೊತೆ ವಿವಾಹವಾದ ಬಳಿಕ ಈಕೆ ಮತ್ತಷ್ಟು ಹೆಸರು ಪಡೆದುಕೊಂಡರು.


ಇದನ್ನೂ ಓದಿ: ಹೈದರಾಬಾದ್ ಗೆದ್ದರೆ ಇತಿಹಾಸ ಸೃಷ್ಟಿ: ಕ್ರಿಕೆಟ್ ಲೋಕದ ಲಕ್ಕಿ ಬಾಯ್ ದಾಖಲೆ ಮುರಿಯುವುದೇ KKR?


ಮಾರ್ಚ್ 4, 1992 ರಂದು ಸರ್ಬಿಯಾದಲ್ಲಿ ಜನಿಸಿದ ನತಾಶಾ, ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದಾದ ಬಳಿಕ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವಕಾಶಗಳನ್ನು ಹುಡುಕುತ್ತಾ ಭಾರತಕ್ಕೆ ಆಗಮಿಸಿದರು.


ಪ್ರಕಾಶ್ ಝಾ ಅವರ 2013ರ ಸತ್ಯಾಗ್ರಹ ಚಿತ್ರದ ಮೂಲಕ ಬಾಲಿವುಡ್‌’ಗೆ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ಅಜಯ್ ದೇವಗನ್ ಜೊತೆ ‘Aiyo Ji’ ಎಂಬ ಹಾಡಿನಲ್ಲಿ ಡ್ಯಾನ್ಸರ್ ಆಗಿಯೂ ಕಾಣಿಸಿಕೊಂಡರು. ನಂತರ ಬಾದ್‌ಶಾ ಮತ್ತು ಆಸ್ತಾ ಗಿಲ್ ಅವರ ಜನಪ್ರಿಯ ‘ಡಿಜೆ ವಾಲಿ ಬಾಬು’ನಲ್ಲಿ ಕಾಣಿಸಿಕೊಂಡು ಫೇಮಸ್ ಆದರು.


2014 ರಲ್ಲಿ ಭಾರತೀಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 8 ನಲ್ಲಿ ಭಾಗವಹಿಸುವ ಮೂಲಕ ನತಾಶಾ ಗಮನ ಸೆಳೆದರು. ಒಂದು ತಿಂಗಳ ಕಾಲ ದೊಡ್ಮನೆಯಲ್ಲೇ ಉಳಿದುಕೊಂಡಿದ್ದರು. ಅದಾದ ಬಳಿಕ ಆಕೆ ನಟ ಅಲಿ ಗೋನಿ ಎಂಬವರ ಜೊತೆ ಡೇಟ್ ಮಾಡುತ್ತಿದ್ದು, ಭಾರೀ ಸುದ್ದಿಯಾಗಿತ್ತು.


ಇನ್ನು ನತಾಶಾ ಮತ್ತು ಹಾರ್ದಿಕ್ ಪಾಂಡ್ಯ 2020 ರಲ್ಲಿ ಸಿಂಪಲ್ ಆಗಿ ಮದುವೆಯಾಗಿದ್ದರು. ಅಷ್ಟೇ ಅಲ್ಲದೆ, ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ನತಾಶಾ, ಅದೇ ವರ್ಷದಲ್ಲಿ ಅಗಸ್ತ್ಯ ಎಂಬ ಗಂಡು ಮಗುವಿಗೆ ಜನ್ಮ ನೀಡಿದರು. ಇನ್ನು 2022ರಲ್ಲಿ ಮಗನ ಸಮ್ಮುಖದಲ್ಲೇ ಇಬ್ಬರೂ ಮತ್ತೆ ಅದ್ಧೂರಿಯಾಗಿ ಮದುವೆಯಾಗಿದ್ದರು.


ಇದನ್ನೂ ಓದಿ: ಟಿ20 ವಿಶ್ವಕಪ್’ನ ಈ ಪಂದ್ಯಕ್ಕಿಲ್ಲ ವಿರಾಟ್ ಕೊಹ್ಲಿ: ಕಾರಣ ಸಮೇತ ಬಿಗ್ ಅಪ್ಡೇಟ್ ನೀಡಿದ ಬಿಸಿಸಿಐ


ಆದರೆ ಇದೀಗ ನತಾಶಾ ಮತ್ತು ಹಾರ್ದಿಕ್ ವಿಚ್ಛೇದನದ ಹಾದಿ ಹಿಡಿದಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. "ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟಿದ್ದಾರೆಯೇ?" ಎಂಬ ಶೀರ್ಷಿಕೆಯ ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೇ ಈ ಸುದ್ದಿ ಮುನ್ನೆಲೆಗೆ ಬರಲು ಪ್ರಾರಂಭಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.