PKL 2022 Playoffs: ಪ್ರೊ ಕಬಡ್ಡಿ ಲೀಗ್‌ 2022ರ ಮೊದಲನೇ ಎಲಿಮಿನೇಟರ್ ಪಂದ್ಯ ಇಂದು ನಡೆಯಿತು. ಮೊದಲ ಮ್ಯಾಚ್‌ನಲ್ಲಿ ಬೆಂಗಳೂರು ಬುಲ್ಸ್‌ ಆರ್ಭಟಕ್ಕೆ ದಬಾಂಗ್‌ ಡೆಲ್ಲಿ ಧೂಳಿಪಟವಾಗಿದೆ. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಬುಲ್ಸ್ ಪಡೆ ದಬಾಂಗ್ ಡೆಲ್ಲಿಯನ್ನು 56-24 ಅಂಕಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪ್ರೊ ಕಬಡ್ಡಿ ಲೀಗ್ ಸೀಸನ್ 9 ಎಲಿಮಿನೇಟರ್ ಸುತ್ತಿನಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ದೆಹಲಿ ನಡುವಿನ ಮೊದಲ ಕಬಡ್ಡಿ ಪಂದ್ಯವನ್ನು ಮುಂಬೈನ NSCI ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂನಲ್ಲಿ ಡೋಮ್‌ನಲ್ಲಿ ನಡೆಯಿತು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ : KL Rahul Statement on Virat Kohli: ವಿರಾಟ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಹೀಗಂದ್ರು ರಾಹುಲ್!! ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದೇಕೆ?


ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ಕೆ.ಸಿ. ಆರನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್‌ನಲ್ಲಿ ಸ್ಥಾನ ಪಡೆದರು. ಹಾಲಿ ಚಾಂಪಿಯನ್ ನವೀನ್ ಕುಮಾರ್ 246 ರೇಡ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.


 


R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!


ಮತ್ತೊಂದೆಡೆ ಡಿಫೆಂಡಿಂಗ್‌ನಲ್ಲಿ ಪಾರ್ಥಿಬನ್ ಆಟಕ್ಕೆ ಡಬಾಂಗ್ ಡೆಲ್ಲಿ ರೈಡರ್ ಗಳು ಮಣಿಯಬೇಕಾಯಿತು. ಪಾರ್ಥಿಬನ್ 7 ಟ್ಯಾಕಲ್ ಪಾಯಿಂಟ್ ಪಡೆದರು. ಸೌರಭ್ ನಂದಲ್ 5 ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆದರು. ಆಟದ ದ್ವಿತೀಯಾರ್ಧದಲ್ಲಿಯೂ ದಬಾಂಗ್‌ ಡೆಲ್ಲಿ ಗೂಳಿಗಳ ಎದುರು ಅಬ್ಬರಿಸಲು ಸಾಧ್ಯವಾಗಲಿಲ್ಲ. ಇದೀಗ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಿಸಿರುವ ಬುಲ್ಸ್‌ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬೆಂಗಳೂರು ಬುಲ್ಸ್ ಸೆಮಿಫೈನಲ್‌ನಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್ ವಿರುದ್ಧ ಸೆಣೆಸಲಿದೆ. ಡಿಸೆಂಬರ್ 15ರಂದು ರಾತ್ರಿ 7.30ಕ್ಕೆ ಬೆಂಗಳೂರು ಬುಲ್ಸ್ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್ ನಡುವೆ ಸೆಮಿಫೈನಲ್‌ ಪಂದ್ಯ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.