Bhuvaneshwar Kumar Retirement Post Viral: ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ನವೆಂಬರ್ 2022 ರಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಭುವನೇಶ್ವರ್ ಆಡಿದ್ದರು. ಇದಾದ ಬಳಿಕ ಟೀಂ ಇಂಡಿಯಾಗೆ ಮರಳಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2ನೇ ಏಕದಿನಕ್ಕೆ Team India Playing 11 ರೆಡಿ: 13 ವರ್ಷಗಳ ಬಳಿಕ ಈ ಆಟಗಾರನಿಗೆ ಸ್ಥಾನ ನೀಡಿದ ಸಮಿತಿ?


ಇದೀಗ ಭುವನೇಶ್ವರ್ ಇತ್ತೀಚೆಗೆ ತಮ್ಮ ಇನ್‌’ಸ್ಟಾಗ್ರಾಮ್ ಖಾತೆಯ ಬಯೋದಲ್ಲಿ ಬದಲಾವಣೆ ಮಾಡಿದ್ದಾರೆ. ಇದರಿಂದಾಗಿ ಅವರ ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಅನೇಕ ಟ್ವಿಟರ್ ಹ್ಯಾಂಡಲ್‌’ಗಳು ಭುವನೇಶ್ವರ್ ನಿವೃತ್ತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಟ್ವೀಟ್ ಮೂಲಕ ಕೇಳುತ್ತಿದ್ದಾರೆ.


ಭುವನೇಶ್ವರ್ ಅವರು ತಮ್ಮ Instagram ಖಾತೆಯ ಬಯೋದಲ್ಲಿ Indian Cricketer ಎಂಬುದನ್ನು ತೆಗೆದುಹಾಕಿದ್ದಾರೆ. ಇದರ ಬದಲಾಗಿ ‘ಭಾರತೀಯ’ ಎಂದು ಬರೆದಿದ್ದಾರೆ. ಭುವನೇಶ್ವರ್ ಅವರು ಮಾಡಿದ ಈ ಬದಲಾವಣೆ ಚರ್ಚೆಗೆ ಕಾರಣವಾಗಿದೆ. ಟ್ವಿಟರ್‌ ನಲ್ಲಿ ಹಲವು ಬಳಕೆದಾರರು ಭುವಿ ನಿವೃತ್ತಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ಈ ಬಗ್ಗೆ ಭುವನೇಶ್ವರ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.


ಭುವಿಗೆ ಈಗ 33 ವರ್ಷ. ಆದರೆ 2022ರ ಜನವರಿ ನಂತರ ಭಾರತದ ಏಕದಿನ ತಂಡಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಕೊನೆಯ ಟೆಸ್ಟ್ ಅನ್ನು ಜನವರಿ 2018 ರಲ್ಲಿ ಆಡಿದ್ದರು.


ಭುವನೇಶ್ವರ್ ಸ್ವಲ್ಪ ಸಮಯದವರೆಗೆ ಟೀಮ್ ಇಂಡಿಯಾದ ಪ್ರಮುಖ ಬೌಲರ್‌’ಗಳಲ್ಲಿ ಒಬ್ಬರಾಗಿದ್ದರು. ಇದುವರೆಗೆ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 63 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ, 96 ರನ್‌ ಗಳಿಗೆ 8 ವಿಕೆಟ್‌ ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.


ಇದನ್ನೂ ಓದಿ: ವಿಶ್ವಕ್ರಿಕೆಟ್’ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದವರು ಇವರೇ.. ಟಾಪ್ 5ರಲ್ಲಿ ಭಾರತದ ಈ ಒಬ್ಬನಿಗೆ ಮಾತ್ರ ಸ್ಥಾನ


ಜೊತೆಗೆ 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್ ಪಡೆದಿದ್ದಾರೆ. 87 ಟಿ20 ಪಂದ್ಯಗಳಲ್ಲಿ 90 ವಿಕೆಟ್ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲೂ ಭುವನೇಶ್ವರ್ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನ 160 ಪಂದ್ಯಗಳಲ್ಲಿ 170 ವಿಕೆಟ್ ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ