Mohammed Shami Fitness Update: ಭಾರತ ತಂಡ ಈ ತಿಂಗಳ ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧ ತವರು ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈಗಾಗಲೇ ಈ ಸರಣಿಗಾಗಿ ಇಂಗ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ. ಆದರಿನ್ನೂ ಭಾರತ ತಂಡದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇದಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದಿದೆ.  ಮೊಹಮ್ಮದ್ ಶಮಿ ಅವರು ತಮ್ಮ ಪಾದದ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಜನವರಿ 25 ರಿಂದ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಶಮಿ: 
ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ವೇಗಿ ಮೊಹಮ್ಮದ್ ಶಮಿ ಇಂಗ್ಲೆಂಡ್ ಸರಣಿಯಲ್ಲಿ ತಂಡಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೆ, ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ಪಾದದ ಗಾಯದ ನಂತರ ಬೌಲಿಂಗ್ ಅನ್ನು ಪುನರಾರಂಭಿಸದ ಕಾರಣ ಜನವರಿ 25 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.


ಇದನ್ನೂ ಓದಿ-  Rohit Sharma: ರೋಹಿತ್ ಶರ್ಮಾಗೆ ಐಸಿಸಿ ನಿಷೇಧ?


ವಾಸ್ತವವಾಗಿ, ಮೊಹಮ್ಮದ್ ಶಮಿ ಇನ್ನೂ ಕೂಡ ಬೌಲಿಂಗ್ ಅಭ್ಯಾಸವನ್ನು ಪ್ರಾರಂಭಿಸಿಲ್ಲ. ಅವರು ತಮ್ಮ ಫಿಟ್ನೆಸ್ ಸಾಬೀತುಪಡಿಸಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಬೇಕಾಗಿದ್ದು ಇದಕ್ಕಾಗಿ ಇನ್ನೂ ಸಮಯ ಬೇಕಾಗಬಹುದು. ಹಾಗಾಗಿ, ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಶಮಿ ಲಭ್ಯತೆ ಬಹುತೇಕ ಅನುಮಾನಾಸ್ಪದವಾಗಿದೆ ಎಂತಲೇ ಹೇಳಲಾಗುತ್ತಿದೆ. 


ಇದೀಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯು ತವರಿನಲ್ಲಿ ನಡೆಯಲಿದ್ದು, ಆರಂಭಿಕ ಪಂದ್ಯಗಳಿಗೆ ಮೊಹಮ್ಮದ್ ಶಮಿ ಲಭ್ಯತೆ ಬಹುತೇಕ ಅನುಮಾನವಾಗಿರುವುದರಿಂದ ಶಮಿ ಬದಲಿಗೆ ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 


ಇದನ್ನೂ ಓದಿ- Virat Kohli: ಕೊಹ್ಲಿ ಧರಿಸಿದ ಈ ವಾಚ್‌ ಬೆಲೆ ಎಷ್ಟು ಗೊತ್ತಾ..? ತಿಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!


ಗಮನಾರ್ಹವಾಗಿ, ಇದಕ್ಕೂ ಮೊದಲು ಮಹಮ್ಮದ್ ಶಮಿ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತದ ಟೆಸ್ಟ್ ತಂಡದ ಭಾಗವಾಗಿ ಘೋಷಿಸಲಾಗಿತ್ತು. ಆದರೆ, ಅವರ ಲಭ್ಯತೆ ಫಿಟ್ನೆಸ್ಗೆ ಒಳಪಟ್ಟಿತ್ತು. ನಂತರ ಬಿಸಿಸಿಐ ವೈದ್ಯಕೀಯ ತಂಡ ಅವರ ಫಿಟ್ನೆಸ್ ಗೆ ಗ್ರೀನ್ ಸಿಗ್ನಲ್ ತೋರದ ಕಾರಣ ಅವರನ್ನು ಸರಣಿಯಿಂದ ಕೈಬಿಡಲಾಯಿತು. 


ಶಮಿ ಅಂಕಿಅಂಶಗಳ ಒಂದು ನೋಟ: 
64 ಪಂದ್ಯಗಳಲ್ಲಿ 27.71 ಸರಾಸರಿಯಲ್ಲಿ 229 ವಿಕೆಟ್‌ಗಳನ್ನು ಹೊಂದಿರುವ ಶಮಿ, ಟೆಸ್ಟ್‌ನಲ್ಲಿ ವೇಗಿಗಳಲ್ಲಿ ಭಾರತದ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ತವರಿನಲ್ಲಿ, ಅವರು 21 ಟೆಸ್ಟ್‌ಗಳಲ್ಲಿ 22.10 ಕ್ಕೆ 76 ವಿಕೆಟ್‌ಗಳನ್ನು ಪಡೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.