IPL 2022: ಕ್ರಿಕೆಟ್ ಅಭಿಮಾನಿಗಳಿಗೆ ಯುಗಾದಿ ಉಡುಗೊರೆ
IPL 2022: ಮುಂಬೈ ಮತ್ತು ಪುಣೆಯ ಕ್ರೀಡಾಂಗಣಗಳಲ್ಲಿ ವೀಕ್ಷಕರ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಲಾಗಿದೆ ಎಂದು ಐಪಿಎಲ್ 2022 ರ ಅಧಿಕೃತ ಟಿಕೆಟಿಂಗ್ ಪಾಲುದಾರ BookMyShow ಶುಕ್ರವಾರ ಪ್ರಕಟಿಸಿದೆ.
IPL 2022: ಐಪಿಎಲ್ 2022 ರ ಅಧಿಕೃತ ಟಿಕೆಟ್ ಪಾಲುದಾರ ಬುಕ್ ಮೈ ಶೋ (BookMyShow) ಶುಕ್ರವಾರ ಮುಂಬೈ ಮತ್ತು ಪುಣೆಯ ಕ್ರೀಡಾಂಗಣಗಳಲ್ಲಿ ವೀಕ್ಷಕರ ಸಂಖ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಿರುವುದಾಗಿ ಪ್ರಕಟಿಸಿದೆ. ಏಪ್ರಿಲ್ 2 ರಿಂದ ಎಲ್ಲಾ ಕೋವಿಡ್ -19 ನಿರ್ಬಂಧಗಳನ್ನು ತೆಗೆದುಹಾಕಲು ಮಹಾರಾಷ್ಟ್ರ ಸರ್ಕಾರವು ಅನುಮೋದನೆ ನೀಡಿದ ನಂತರ ಟಿಕೆಟಿಂಗ್ ಪಾಲುದಾರರಿಂದ ಈ ಘೋಷಣೆ ಮಾಡಲಾಗಿದೆ.
ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ:
ಪ್ರಸ್ತುತ, ನಡೆಯುತ್ತಿರುವ ಐಪಿಎಲ್ 2022 (IPL 2022) ಮಹಾರಾಷ್ಟ್ರದಾದ್ಯಂತ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯುತ್ತಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಮುಂಬೈನ ಬ್ರಬೋರ್ನ್ ಸ್ಟೇಡಿಯಂ ಮತ್ತು ವಾಂಖೆಡೆ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ- IPL 2022: ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರಿವರು
ಈ ವರ್ಷ ಐಪಿಎಲ್ ಪಂದ್ಯಗಳು ನಡೆಯುವ ಎಲ್ಲಾ ಸ್ಟೇಡಿಯಂಗಳಲ್ಲಿ ಶೇ.25 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಶುಕ್ರವಾರ (ಏಪ್ರಿಲ್ 01) ಟಿಕೆಟಿಂಗ್ ಪಾಲುದಾರ ಬುಕ್ ಮೈ ಶೋ (BookMyShow) ಅಧಿಕೃತ ಪ್ರಕಟಣೆಯು, "ಆನ್‌ಲೈನ್‌ನಲ್ಲಿ ಪಂದ್ಯಗಳ ಟಿಕೆಟ್‌ಗಳ ಮಾರಾಟ ಲಭ್ಯವಿದೆ, ಏಕೆಂದರೆ ಬಿಸಿಸಿಐ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಹೆಚ್ಚಳವನ್ನು ಘೋಷಿಸಿದೆ."
ಇದನ್ನೂ ಓದಿ- Lowest Power Play Score in IPL: ಐಪಿಎಲ್‌ನಲ್ಲಿ ಅತ್ಯಂತ ಕಡಿಮೆ ಪವರ್ ಪ್ಲೇ ಸ್ಕೋರ್
ಲೈವ್ ಟಿಕೆಟ್ ಮಾರಾಟ:
ಐಪಿಎಲ್ 2022 (IPL 2022) ಪಂದ್ಯಗಳ 2 ನೇ ಹಂತದ ಮಾರಾಟವು ಅವರ ಅಧಿಕೃತ ವೆಬ್‌ಸೈಟ್‌ನಲ್ಲಿ ಲೈವ್ ಆಗಲಿದೆ ಎಂದು ಟಿಕೆಟ್ ಸೈಟ್ ಪ್ರಕಟಿಸಿದೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಏಪ್ರಿಲ್ 6 ರಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಈಗ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.