ನವದೆಹಲಿ: ಕೊರೊನಾವೈರಸ್ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ಅನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಆದರೆ ಉಳಿದ ಪಂದ್ಯಗಳನ್ನು ಶೀಘ್ರದಲ್ಲೇ ಆಯೋಜಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಏತನ್ಮಧ್ಯೆ, ಇಂಗ್ಲಿಷ್ ಕೌಂಟಿಯ ಒಂದು ಗುಂಪು ಈ ವರ್ಷದ ಸೆಪ್ಟೆಂಬರ್ನಲ್ಲಿ ಐಪಿಎಲ್ -2021 ರ ಉಳಿದ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದೆ. ಈ ಕೌಂಟಿ ತಂಡಗಳಲ್ಲಿ ಮಿಡಲ್ಸೆಕ್ಸ್, ಸರ್ರೆ, ವಾರ್ವಿಕ್‌ಷೈರ್ ಮತ್ತು ಲಂಕಾಷೈರ್ ಸೇರಿವೆ.


COMMERCIAL BREAK
SCROLL TO CONTINUE READING

ಇಎಸ್ಪಿಎನ್ ಕ್ರಿಕಿನ್‌ಫೊ ವರದಿಯ ಪ್ರಕಾರ, ಲಾರ್ಡ್ಸ್, ಓವಲ್, ಎಡ್ಜ್‌ಬಾಸ್ಟನ್ ಮತ್ತು ಓಲ್ಡ್ ಟ್ರಾಫೋರ್ಡ್ ಇಸಿಬಿಗೆ ಪತ್ರ ಬರೆಯುವ ಮೂಲಕ ಈ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ ದ್ವಿತೀಯಾರ್ಧದಲ್ಲಿ, ಎರಡು ವಾರಗಳಲ್ಲಿ ಪಂದ್ಯಾವಳಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.


ಇದಕ್ಕೂ ಮುನ್ನ ಎರಡು ಬಾರಿ ಬಿಸಿಸಿಐ ವಿದೇಶದಲ್ಲಿ ಐಪಿಎಲ್‌ (IPL) ಅನ್ನು ಆಯೋಜಿಸಿದೆ. ಇದರಲ್ಲಿ 2009 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2020 ರಲ್ಲಿ ಯುಎಇ ಸೇರಿವೆ. 2014 ರ ಐಪಿಎಲ್ ಆವೃತ್ತಿಯು ಯುಎಇಯಲ್ಲಿಯೂ ನಡೆಯಿತು.


ಇದನ್ನೂ ಓದಿ - "CSK ಆಟಗಾರರು ಸುರಕ್ಷಿತರಾಗಿ ಮನೆಗೆ ತೆರಳಿದ ನಂತರವೇ ಹೋಟೆಲ್ ಬಿಡುವೆ"


ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) 2021 ಅನ್ನು ಮುಂದೂಡಿದ ನಂತರ, ಈಗ ಭಾರತದಲ್ಲಿ, ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೂ ಕೂಡ ಕರೋನಾ ಕಾರ್ಮೋಡ ಕವಿದಿದೆ. 


ಇದೀಗ ಐಪಿಎಲ್‌ನ ಅರ್ಧ ತಂಡಗಳಲ್ಲಿ ಸಕಾರಾತ್ಮಕ ಪ್ರಕರಣಗಳು ಇರುವುದರಿಂದ, ಕ್ರಿಕೆಟ್ ಮಂಡಳಿಯ ಸುರಕ್ಷಿತ ಜೈವಿಕ ಸುರಕ್ಷಿತ ಸಾಮರ್ಥ್ಯವನ್ನು ಪ್ರಶ್ನಿಸಲಾಗಿದೆ. ಆದರೆ, ಭಾರತದಲ್ಲಿ ಟಿ 20 ವಿಶ್ವಕಪ್ ನಡೆಯಲು ಇನ್ನೂ ಐದು ತಿಂಗಳುಗಳಿವೆ ಮತ್ತು ಅದಕ್ಕಾಗಿ ಇನ್ನೂ ಸಮಯವಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಭಿಪ್ರಾಯಪಟ್ಟಿದೆ. ಪಂದ್ಯಾವಳಿಯನ್ನು ಬಲವಂತವಾಗಿ ಅಮಾನತುಗೊಳಿಸುವ ಸಾಧ್ಯತೆ ಬಹಳ ಕಡಿಮೆ ಎಂದು ಮಂಡಳಿ ನಂಬಿದೆ.


ಇದನ್ನೂ ಓದಿ - ತನ್ನ ಚಿಕ್ಕಮ್ಮನಿಗೆ ಆಕ್ಸಿಜನ್ ಸಿಲಿಂಡರ್ ಕೋರಿದ ರೈನಾ ನೆರವಿಗೆ ಧಾವಿಸಿದ ಸೋನು ಸೂದ್


ಐಪಿಎಲ್ ಸಮಯದಲ್ಲಿ ಐಸಿಸಿ ತಂಡವು ಭಾರತಕ್ಕೆ ಭೇಟಿ ನೀಡಲು ನಿರ್ಧರಿಸಲಾಗಿತ್ತು, ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅದು ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿತು. ಇದೀಗ ಕ್ರಿಕೆಟ್ ಅಭಿಮಾನಿಗಳ ಟಿ 20 ಉತ್ಸವದ ಇನ್ನುಳಿದ ಪಂದ್ಯಗಳು ವಿದೇಶದಲ್ಲಿ ಆಯೋಜನೆಗೊಳ್ಳಲಿದೆಯೇ? ಟಿ 20 ವಿಶ್ವಕಪ್ ಭಾರತದಲ್ಲಿ ನಡೆಯಬಹುದೇ? ಇಲ್ಲವೇ? ಎಂಬುದನ್ನು ಕಾದುನೋಡಬೇಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.