ಟೀಂ ಇಂಡಿಯಾಗೆ ಬಿಗ್ ಶಾಕ್: ಗಾಯದ ಸಮಸ್ಯೆಯಿಂದ ಕ್ರಿಕೆಟ್’ನಿಂದ ದೂರ ಉಳಿಯಲಿದ್ದಾರೆ ಈ ಆಟಗಾರ
Prithwi Shaw Cricket: ಕಳೆದ ತಿಂಗಳು, ಕೌಂಟಿ ಕ್ರಿಕೆಟ್’ನಲ್ಲಿ ಡರ್ಹಾಮ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಶಾ ಮೊಣಕಾಲು ನೋವಿಗೆ ಒಳಗಾಗಿದ್ದರು. ಈ ಗಾಯದ ನಂತರ ಪೃಥ್ವಿ ಶಾ ನಾರ್ಥಾಂಪ್ಟನ್’ಶೈರ್ ಪರವಾಗಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ವರದಿಯ
Prithwi Shaw Cricket: ಭಾರತ ಕ್ರಿಕೆಟ್ ತಂಡ ಪ್ರಸ್ತುತ ಏಷ್ಯಾಕಪ್ ಆಡುತ್ತಿದ್ದು, ಫೈನಲ್ ಹಂತ ತಲುಪಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 15 ರಂದು ಆಡಬೇಕಾಗಿದೆ. ಇದಾದ ಬಳಿಕ ಸೆ.17ರಂದು ಟೀಂ ಇಂಡಿಯಾ ಫೈನಲ್ ಆಡಲಿದೆ. ಇದೆಲ್ಲದರ ನಡುವೆ ಭಾರತದ ಸ್ಟಾರ್ ಆಟಗಾರರೊಬ್ಬರು ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ: ನಿವೃತ್ತಿ ಹಿಂಪಡೆದ ಸ್ಟಾರ್ ಕ್ರಿಕೆಟರ್ ಸಿಡಿಸಿದ ಭರ್ಜರಿ ಶತಕ! ಈತ ಕೊಹ್ಲಿಯ ನೆಚ್ಚಿನ ಕ್ರಿಕೆಟಿಗ
ಕಳೆದ ತಿಂಗಳು, ಕೌಂಟಿ ಕ್ರಿಕೆಟ್’ನಲ್ಲಿ ಡರ್ಹಾಮ್ ವಿರುದ್ಧ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಶಾ ಮೊಣಕಾಲು ನೋವಿಗೆ ಒಳಗಾಗಿದ್ದರು. ಈ ಗಾಯದ ನಂತರ ಪೃಥ್ವಿ ಶಾ ನಾರ್ಥಾಂಪ್ಟನ್’ಶೈರ್ ಪರವಾಗಿ ಉಳಿದ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ವರದಿಯ ಪ್ರಕಾರ, ಪೃಥ್ವಿ ಶಾ ಇದೀಗ ಕ್ರಿಕೆಟ್’ನಿಂದ ದೀರ್ಘಕಾಲ ದೂರ ಉಳಿಯುವ ಪರಿಸ್ಥಿತಿ ಬಂದಿದೆ. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಆಗಸ್ಟ್ 13 ರಂದು ನಡೆದ ಪಂದ್ಯದಲ್ಲಿ ಪೃಥ್ವಿ ಶಾ 76 ಎಸೆತಗಳಲ್ಲಿ ಅಜೇಯ 125 ರನ್ ಗಳಿಸಿದರು. ಇದರ ಸಹಾಯದಿಂದ ನಾರ್ಥಾಂಪ್ಟನ್‌ಶೈರ್ ಆರು ವಿಕೆಟ್‌ಗಳಿಂದ ಗೆದ್ದಿತು. ಇದಕ್ಕೂ ಮುನ್ನ ಇದೇ ಟೂರ್ನಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ್ದರು.
ಪೃಥ್ವಿ ಶಾ ಇದುವರೆಗೆ ಟೀಂ ಇಂಡಿಯಾ ಪರ 5 ಟೆಸ್ಟ್, 6 ODI ಹಾಗೂ ಒಂದು T20 ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದಾರೆ. ಟೆಸ್ಟ್ ನಲ್ಲಿ ಶತಕದ ನೆರವಿನಿಂದ 339 ರನ್ ಕಲೆಹಾಕಿದರೆ, ODIಗಳಲ್ಲಿ 31.50 ಸರಾಸರಿಯಲ್ಲಿ 189 ರನ್ ಗಳಿಸಿದ್ದಾರೆ. ಕೊನೆಯ ಬಾರಿಗೆ 2021 ರಲ್ಲಿ ಟೀಮ್ ಇಂಡಿಯಾದ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು ಪೃಥ್ವಿ ಶಾ. ನಂತರ ಜುಲೈನಲ್ಲಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್’ಗಳ ಸರಣಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Team India ಸ್ಟಾರ್ ವೇಗಿಗೆ ಗಾಯ: ಬದಲಿ ಆಟಗಾರನಾಗಿ ಈ ಬೌಲರ್ ಆಯ್ಕೆ
2013ರಲ್ಲಿ ಮುಂಬೈನಲ್ಲಿ ನಡೆದ ವಯೋಮಿತಿ ಕ್ರಿಕೆಟ್ ಟೂರ್ನಿಯಾದ ಹ್ಯಾರಿಸ್ ಶೀಲ್ಡ್’ನಲ್ಲಿ ರಿಜ್ವಿ ಸ್ಪ್ರಿಂಗ್ ಫೀಲ್ಡ್ ಶಾಲೆಯ ಪರವಾಗಿ ಆಡಿದ್ದ ಪೃಥ್ವಿ ಶಾ, 330 ಎಸೆತಗಳಲ್ಲಿ 85 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಒಳಗೊಂಡು 546 ರನ್ ಗಳಿಸಿದ್ದರು. ಆಗ ಅವರಿಗೆ 14 ವರ್ಷ ವಯಸ್ಸಾಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ