Wrestlers Protest: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ, ಬೃಜ್ ಭೂಷಣ್ ಗೆ ಹೇಳಿಕೆ ನೀಡದಿರಲು ಸೂಚನೆ ನೀಡಿದ ಹೈಕಮಾಂಡ್
Wrestlers Protest: ಕುಸ್ತಿ ಪಟುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅನಾವಶ್ಯಕ ಹೇಳಿಕೆಯನ್ನು ನೀಡದಂತೆ ಬಿಜೆಪಿ ಮುಖಂಡ ಬೃಜ್ ಭೂಷಣ್ ಗೆ ಹೈ ಕಮಾಂಡ್ ಸೂಚನೆ ನೀಡಿದೆ.
Wrestlers Protest: ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣದಲ್ಲಿ ಬಿಜೆಪಿ ಹೈಕಮಾಂಡ್ ಕಾರ್ಯೋನ್ಮುಖವಾಗಿದೆ. ಮೂಲಗಳ ಪ್ರಕಾರ, ಕುಸ್ತಿಪಟುಗಳ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡುವುದನ್ನು ತಪ್ಪಿಸುವಂತೆ ಬ್ರಿಜ್ ಭೂಷಣ್ ಅವರಿಗೆ ಕೇಂದ್ರ ನಾಯಕತ್ವ ಸೂಚನೆ ನೀಡಿದೆ. ಮೂಲಗಳನ್ನು ನಂಬುವುದಾದರೆ, ಹೈಕಮಾಂಡ್ ಸೂಚನೆಯ ಮೇರೆಗೆ ಬ್ರಿಜ್ ಭೂಷಣ್ ಅವರು ಜೂನ್ 5 ರಂದು ನಡೆಯಲಿರುವ ಉದ್ದೇಶಿತ ರ್ಯಾಲಿಯನ್ನು ರದ್ದುಗೊಳಿಸಿದ್ದಾರೆ. ಬ್ರಿಜ್ ಭೂಷಣ್ ರ ರ್ಯಾಲಿ ನಡೆಸದಂತೆ ಬಿಜೆಪಿ ಸೂಚಿಸಿದೆ.
ಕುಸ್ತಿಪಟುಗಳ ಲೈಂಗಿಕ ಶೋಷಣೆಯ ಆರೋಪಗಳಿಂದ ಸುತ್ತುವರಿದಿರುವ ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಜೂನ್ 5 ರಂದು ಅಯೋಧ್ಯೆಯಲ್ಲಿ ಸಾರ್ವಜನಿಕ ಜಾಗೃತಿ ರ್ಯಾಲಿಗೆ ಕರೆ ನೀಡಿದ್ದರು. ಈ ರ್ಯಾಲಿಯಲ್ಲಿ 11 ಲಕ್ಷ ಜನರು ತಮ್ಮ ಬೆಂಬಲಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಹೇಳಿದ್ದಾರೆ, ಆದರೆ ಶುಕ್ರವಾರ (ಜೂನ್ 2) ಅವರು ಫೇಸ್‌ಬುಕ್ ಪೋಸ್ಟ್ ಮೂಲಕ ರ್ಯಾಲಿಯನ್ನು ರದ್ದುಗೊಳಿಸುವುದಾಗಿ ಅವರು ಘೋಷಿಸಿದ್ದಾರೆ.
ವಿರೋಧ ಪಕ್ಷಗಳ ಆರೋಪ ಏನು?
ಈ ಕುರಿತು ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡ ಬ್ರಿಜ್ ಭೂಷಣ್ ನನ್ನ ಪ್ರೀತಿಯ ಹಿತೈಷಿಗಳೇ! ನಿಮ್ಮ ಬೆಂಬಲದಿಂದ ಕಳೆದ 28 ವರ್ಷಗಳಿಂದ ಲೋಕಸಭೆ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಅಧಿಕಾರದಲ್ಲಿದ್ದಾಗ ಮತ್ತು ವಿರೋಧ ಪಕ್ಷದಲ್ಲಿದ್ದಾಗ ಎಲ್ಲ ಜಾತಿ, ಸಮುದಾಯ ಮತ್ತು ಧರ್ಮದ ಜನರನ್ನು ಒಗ್ಗೂಡಿಸಲು ಪ್ರಯತ್ನಿಸಿದ್ದೇನೆ. ಈ ಕಾರಣಗಳಿಂದಲೇ ನನ್ನ ರಾಜಕೀಯ ವಿರೋಧಿಗಳು ಮತ್ತು ಅವರ ಪಕ್ಷಗಳು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುತ್ತಿವೆ ಎಂದು ಹೇಳಿಕೊಂಡಿದ್ದಾರೆ.
ರ್ಯಾಲಿ ಮುಂದೂಡಿಕೆ ಘೋಷಣೆ
ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲವು ರಾಜಕೀಯ ಪಕ್ಷಗಳು ಪ್ರಾಂತೀಯತೆ, ಪ್ರಾದೇಶಿಕತೆ ಮತ್ತು ಜನಾಂಗೀಯ ಸಂಘರ್ಷವನ್ನು ಉತ್ತೇಜಿಸುವ ಮೂಲಕ ವಿವಿಧ ಸ್ಥಳಗಳಲ್ಲಿ ರ್ಯಾಲಿಗಳನ್ನು ನಡೆಸುವ ಮೂಲಕ ಸಾಮಾಜಿಕ ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಿವೆ ಎಂದು ಅವರು ಬರೆದಿದ್ದಾರೆ. ಇಡೀ ಸಮಾಜದಲ್ಲಿ ಹರಡುತ್ತಿರುವ ಅನಿಷ್ಟದ ಬಗ್ಗೆ ಉದ್ದೇಶಪೂರ್ವಕವಾಗಿ ಜೂನ್ 5 ರಂದು ಅಯೋಧ್ಯೆಯಲ್ಲಿ ಸಂತ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿತ್ತು, ಆದರೆ ಪ್ರಸ್ತುತ ಪೊಲೀಸರು ತಮ್ಮ ಮೇಲಿನ ಆರೋಪಗಳ ತನಿಖೆ ನಡೆಸುತ್ತಿದ್ದಾರೆ ಮತ್ತು ಸುಪ್ರೀಂ ಕೋರ್ಟ್‌ನ ಗಂಭೀರ ನಿರ್ದೇಶನಗಳಿಗೆ ಗೌರವಿಸುತ್ತಾ "ಜನಚೇತನ ಜೂನ್ 5, ಅಯೋಧ್ಯೆ ಚಲೋ” ಕಾರ್ಯಕ್ರಮವನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪೋಸ್ಟ್‌ನ ಕೊನೆಯಲ್ಲಿ, ಬ್ರಿಜ್ ಭೂಷಣ್ ಅವರು ತಮ್ಮ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮತ್ತು ಅವರ ಕುಟುಂಬವು ಯಾವಾಗಲೂ ಬೆಂಬಳಿಗರಿಗೆ ಋಣಿಯಾಗಿರುತ್ತದೆ ಎಂದಿದ್ದಾರೆ. ಖಾಪ್ ಪಂಚಾಯತ್‌ಗಳು ಕುಸ್ತಿಪಟುಗಳ ಬೆಂಬಲಕ್ಕೆ ಬಂದಿರುವ ಸಮಯದಲ್ಲಿ ಬ್ರಿಜ್ ಭೂಷಣ್ ರ ರ್ಯಾಲಿಯನ್ನು ರದ್ದುಗೊಳಿಸುವ ಈ ಘೋಷಣೆ ಬಂದಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಗುರುವಾರ ಮುಜಾಫರ್‌ನಗರದ ಸೋರಂನಲ್ಲಿ ಸರ್ವಜಾತಿ ಖಾಪ್ ಪಂಚಾಯತ್ ನಂತರ, ಶುಕ್ರವಾರ ಕುರುಕ್ಷೇತ್ರದಲ್ಲಿ ಮಹಾಪಂಚಾಯತ್ ಕರೆಯಲಾಗಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ