ICC Ranking: ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಪಟ್ಟಕ್ಕೇರಿ ವಿಶ್ವದಾಖಲೆ ಬರೆದ ರ್ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ
ICC Men`s Test Rankings: ಬೌಲರ್’ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ನಾಲ್ಕನೇ ಮತ್ತು ಮೊದಲ ವೇಗದ ಬೌಲರ್ ಬುಮ್ರಾ. ಇದಕ್ಕೂ ಮುನ್ನ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಮಾಜಿ ದಿಗ್ಗಜ ಬಿಷನ್ ಬೇಡಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ICC Men's Test Rankings: ಫೆಬ್ರವರಿ 7 ಅಂದರೆ ಇಂದು ಭಾರತೀಯ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ದಿನ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಪುರುಷರ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂಬರ್ 1 ಸ್ಥಾನಕ್ಕೇರಿದ್ದಾರೆ. ಬುಮ್ರಾ ಅಗ್ರ ಶ್ರೇಯಾಂಕ ಪಡೆದಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 106 ರನ್’ಗಳಿಂದ ಗೆಲ್ಲಲು ಬುಮ್ರಾ ಪ್ರಮುಖ ಕಾರಣವಾಗಿದ್ದರು. ವಿಶ್ವದ ಅತ್ಯುತ್ತಮ ಬೌಲರ್’ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಬುಮ್ರಾ, ವೈಜಾಗ್ ಟೆಸ್ಟ್’ನಲ್ಲಿ 9/91 ಅಂಕಿಅಂಶಗಳನ್ನು ದಾಖಲಿಸುವ ಮೂಲಕ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.
ಇದನ್ನೂ ಓದಿ: ಈ ಬೀಜವನ್ನು ಅರೆದು ಹಚ್ವಿದರೆ ಬಿಳಿ ಕೂದಲು ಪರ್ಮನೆಂಟ್ ಆಗಿ ಕಪ್ಪಾಗುವುದಲ್ಲದೆ, ದಷ್ಟಪುಷ್ಟವಾಗಿ ಬೆಳೆಯುತ್ತೆ!
ಬೌಲರ್’ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ನಾಲ್ಕನೇ ಮತ್ತು ಮೊದಲ ವೇಗದ ಬೌಲರ್ ಬುಮ್ರಾ. ಇದಕ್ಕೂ ಮುನ್ನ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಮಾಜಿ ದಿಗ್ಗಜ ಬಿಷನ್ ಬೇಡಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ ತಂಡದ ಹಿರಿಯ ಸ್ಪಿನ್ನರ್ ಅಶ್ವಿನ್ ಕಳೆದ ವರ್ಷ ಮಾರ್ಚ್’ನಿಂದ ಟೆಸ್ಟ್’ನಲ್ಲಿ ಮೊದಲ ಶ್ರೇಯಾಂಕವನ್ನು ಹೊಂದಿದ್ದು, ವೈಜಾಗ್ ಟೆಸ್ಟ್’ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎರಡು ಸ್ಥಾನ ಕುಸಿದು ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಈ ಮಧ್ಯೆ, ನ್ಯೂಜಿಲೆಂಡ್’ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಹೊರಗುಳಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಎರಡನೇ ಸ್ಥಾನದಲ್ಲಿದ್ದಾರೆ.
ಬುಮ್ರಾ ಜೊತೆಗೆ ಇಂಗ್ಲೆಂಡ್ ವಿರುದ್ಧದ ವೈಜಾಗ್ ಟೆಸ್ಟ್’ನ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ದ್ವಿಶತಕ ಸಿಡಿಸಿದ್ದ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಕೂಡ ಶ್ರೇಯಾಂಕದಲ್ಲಿ ಜಿಗಿತ ಕಂಡಿದ್ದಾರೆ. ಜೈಸ್ವಾಲ್ ಅವರು 209 ರನ್’ಗಳ ತಮ್ಮ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್’ಗಳನ್ನು ಆಡಿದ್ದು, ಇತ್ತೀಚಿನ ಶ್ರೇಯಾಂಕದಲ್ಲಿ 29ನೇ ಸ್ಥಾನಕ್ಕೆ ತಲುಪಿದ್ದಾರೆ. ಇತ್ತೀಚೆಗಷ್ಟೇ 30 ಟೆಸ್ಟ್ ಶತಕ ಪೂರೈಸಿದ ನ್ಯೂಜಿಲೆಂಡ್’ನ ಅನುಭವಿ ಕೇನ್ ವಿಲಿಯಮ್ಸನ್ ಅಗ್ರಸ್ಥಾನದಲ್ಲಿದ್ದಾರೆ.
ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಅವರು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್’ನಲ್ಲಿ ಎಂಟು ವಿಕೆಟ್’ಗಳನ್ನು ಕಬಳಿಸುವ ಮೂಲಕ ಮೂರು ಸ್ಥಾನಗಳ ಜಿಗಿತ ಕಂಡು ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಅವರ ಸಹ ಆಟಗಾರ ಅಸಿತಾ ಫೆರ್ನಾಂಡೋ ಅದೇ ಪಂದ್ಯದಲ್ಲಿ ಆರು ವಿಕೆಟ್’ಗಳನ್ನು ಪಡೆದು 34 ನೇ ಸ್ಥಾನಕ್ಕೆ ಏರಿದ್ದಾರೆ.
ಇದನ್ನೂ ಓದಿ: ಭಾರತ 2ನೇ ಟೆಸ್ಟ್ ಗೆಲ್ಲಲು ಪ್ರಮುಖ ಕಾರಣವಾಗಿದ್ದ ಈ ಪ್ಲೇಯರ್ 3ನೇ ಟೆಸ್ಟ್’ಗೆ ಅಲಭ್ಯ!
ಬ್ಯಾಟ್ಸ್‌ಮನ್’ಗಳ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಇಂಗ್ಲೆಂಡ್’ನ ಮಾಜಿ ನಾಯಕ ಜೋ ರೂಟ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರ ಸಹ ಆಟಗಾರ ಜಾಕ್ ಕ್ರೌಲಿ ಎಂಟು ಸ್ಥಾನ ಮೇಲೇರಿ 22ನೇ ಸ್ಥಾನಕ್ಕೆ ತಲುಪಿದ್ದಾರೆ. ಟೆಸ್ಟ್ ಆಲ್ ರೌಂಡರ್’ಗಳ ಶ್ರೇಯಾಂಕದ ಕುರಿತು ಮಾತನಾಡುವುದಾದರೆ, ಇಂಗ್ಲೆಂಡ್’ನ ಬೆನ್ ಸ್ಟೋಕ್ಸ್ ನಾಲ್ಕನೇ ಮತ್ತು ಭಾರತದ ಅಕ್ಷರ್ ಪಟೇಲ್ ಐದನೇ ಸ್ಥಾನದಲ್ಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ