ಎದೆ ನೋವಿನಿಂದ ಮುಂಬೈ ಆಸ್ಪತ್ರೆಗೆ ದಾಖಲಾದ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ
ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಎದೆನೋವಿನಿಂದಾಗಿ ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಲೇ ಹೃದಯಾಘಾತದಿಂದ ಬಳಲುತ್ತಿದ್ದ ಲಾರಾ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನವದೆಹಲಿ: ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಅವರು ಎದೆನೋವಿನಿಂದಾಗಿ ಮಂಗಳವಾರ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಗಲೇ ಹೃದಯಾಘಾತದಿಂದ ಬಳಲುತ್ತಿದ್ದ ಲಾರಾ ಅವರನ್ನು ಮುಂಬೈನ ಪ್ಯಾರೆಲ್ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯ ಅಧಿಕಾರಿಗಳು ಕ್ರಿಕೆಟರ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ವರದಿಗಳ ಪ್ರಕಾರ, ಗ್ಲೋಬಲ್ ಆಸ್ಪತ್ರೆಯ ವೈದ್ಯರು ಲಾರಾ ಅವರ ಆಂಜಿಯೋಗ್ರಫಿ ಚೆಕ್ ಮಾಡಿದ್ದಾರೆ. ಆದರೆ ಆಂಜಿಯೋಗ್ರಫಿಯಲ್ಲಿ ಯಾವುದೇ ಅಪಾಯವನ್ನು ಕಾಣದ ಕಾರಣ ಆಂಜಿಯೋಪ್ಲ್ಯಾಸ್ಟಿಗಾಗಿ ಹೋಗಲಿಲ್ಲ ಎನ್ನಲಾಗಿದೆ.
ಲಾರಾ ಈಗ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿನ್ನಲೆಯಲ್ಲಿ ಅವರು ಈಗ ಭಾರತದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಲಾರಾ 2007 ರಲ್ಲಿ ಎಲ್ಲಾ ರೀತಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಏಪ್ರಿಲ್ 21, 2007 ರಂದು ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು.
ಬ್ರಿಯಾನ್ ಲಾರಾ 299 ಏಕದಿನ ಪಂದ್ಯಗಳಲ್ಲಿ 19 ಶತಕ ಮತ್ತು 63 ಅರ್ಧಶತಕಗಳೊಂದಿಗೆ 40.17 ಸರಾಸರಿಯಲ್ಲಿ 10,405 ರನ್ ಗಳಿಸಿದ್ದಾರೆ. 131 ಟೆಸ್ಟ್ ಪಂದ್ಯ ಹಾಗೂ 232 ಇನ್ನಿಂಗ್‌ಗಳಲ್ಲಿ 11,953 ರನ್ ಗಳನ್ನು 52.89 ರ ಸರಾಸರಿಯಲ್ಲಿ ಗಳಿಸಿದ್ದಾರೆ. ಲಾರಾ ಅವರನ್ನು ಆಧುನಿಕ ಯುಗದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ, ಮತ್ತು ಅವರ ಹೆಸರು ಯಾವಾಗಲೂ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ಜಾಕ್ವೆಸ್ ಕಾಲಿಸ್ ಅವರ ಸಾಲಿನಲ್ಲಿ ಕಂಡುಬರುತ್ತದೆ.