“ಚಿಕಿತ್ಸೆ ವೆಚ್ಚ ಬೇಕಂದ್ರೆ ಸೆಕ್ಸ್’ಗೆ ಸಹಕರಿಸು”! ಬ್ರಿಜ್ ಭೂಷಣ್ ವಿರುದ್ಧ ದಾಖಲಾದ FIR ನಲ್ಲಿ ಏನೇನಿದೆ ಗೊತ್ತಾ?
Brij Bhushan Sharan Singh FIR: ಇಂದು, ಹರಿಯಾಣ, ಪಂಜಾಬ್ ಮತ್ತು ಯುಪಿಯ ಸರ್ವಖಾಪ್ ಪಂಚಾಯತ್‌ಗಳ ಪ್ರತಿನಿಧಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ಕುಸ್ತಿಪಟುಗಳಿಗೆ ಬೆಂಬಲವಾಗಿ ಸೇರಲಿದ್ದಾರೆ. ಮುಂದಿನ ಕಾರ್ಯತಂತ್ರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
Brij Bhushan Sharan Singh FIR: ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿರುವ 2 ಎಫ್ ಐ ಆರ್ ಗಳ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ. ಎರಡೂ ಎಫ್ ಐ ಆರ್‌ಗಳಲ್ಲಿ ಒಂದಲ್ಲ 10 ಕಿರುಕುಳ, ದಬ್ಬಾಳಿಕೆ, ಬಲವಂತದ ಸ್ಪರ್ಶ ಪ್ರಕರಣಗಳ ಉಲ್ಲೇಖವಿದೆ. ಉಸಿರಾಟ ಪರೀಕ್ಷೆ ನೆಪದಲ್ಲಿ ಚುಡಾಯಿಸುವುದು, ರೆಸ್ಟೋರೆಂಟ್ ನಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಎದೆ ಮತ್ತು ಹೊಟ್ಟೆಯನ್ನು ಅನುಚಿತವಾಗಿ ಸ್ಪರ್ಶಿಸುವುದು ಎಂಬ ಗಂಭೀರ ಆರೋಪಗಳಿವೆ.
ಇದನ್ನೂ ಓದಿ: DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: ಶೇ.4ರಷ್ಟು ಡಿಎ ಹೆಚ್ಚಳ- ವೇತನದಲ್ಲಾಗುವುದು ಭಾರೀ ಏರಿಕೆ!
ಇಂದು, ಹರಿಯಾಣ, ಪಂಜಾಬ್ ಮತ್ತು ಯುಪಿಯ ಸರ್ವಖಾಪ್ ಪಂಚಾಯತ್‌ಗಳ ಪ್ರತಿನಿಧಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ಕುಸ್ತಿಪಟುಗಳಿಗೆ ಬೆಂಬಲವಾಗಿ ಸೇರಲಿದ್ದಾರೆ. ಮುಂದಿನ ಕಾರ್ಯತಂತ್ರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗೆ ಸಂಬಂಧಿಸಿದಂತೆ ಶಾಕಿಂಗ್ ಸಂಗತಿಗಳು ಬಹಿರಂಗವಾಗಿದೆ. ಬ್ರಿಜ್ ಭೂಷಣ್ ವಿರುದ್ಧದ 2 ಎಫ್‌ಐಆರ್ ಗಳಲ್ಲಿ ಲೈಂಗಿಕ ಶೋಷಣೆ, ಸೇರಿ ಕಿರುಕುಳದ 10 ದೂರುಗಳಿವೆ.
ದೂರಿನ ಪ್ರಕಾರ ಆರೋಪಿಯು ಅನುಚಿತವಾಗಿ ಸ್ಪರ್ಶಿಸುವುದು, ಯಾವುದಾದರೂ ನೆಪದಲ್ಲಿ ಎದೆಯ ಮೇಲೆ ಕೈ ಇಡುವುದು ಅಥವಾ ಇರಿಸಲು ಪ್ರಯತ್ನಿಸುವುದು, ಎದೆಯಿಂದ ಹಿಂಭಾಗಕ್ಕೆ ಕೈಯನ್ನು ಹಾಕಿಕೊಂಡು ಹಿಂಬಾಲಿಸುವುದು ಮುಂತಾದ ಆರೋಪಗಳನ್ನು ಹೊರಿಸಲಾಗಿದೆ. ಏಪ್ರಿಲ್ 21 ರಂದು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಈ ದೂರನ್ನು ನೀಡಲಾಯಿತು ಮತ್ತು ದೆಹಲಿ ಪೊಲೀಸರು ಏಪ್ರಿಲ್ 28 ರಂದು ಎರಡು ಎಫ್ ಐ ಆರ್ ಗಳನ್ನು ದಾಖಲಿಸಿದ್ದಾರೆ.
ಒಂದು ಎಫ್‌ಐಆರ್‌ನ ಪ್ರಕಾರ, “ಆರೋಪಿಯು ತನ್ನನ್ನು ಬಿಗಿಯಾಗಿ ಹಿಡಿದುಕೊಂಡು, ಫೋಟೋಗಳಿಗೆ ಪೋಸ್ ನೀಡುವಂತೆ ಹೇಳುತ್ತಿದ್ದರು. ತನ್ನ ಕಡೆಗೆ ಎಳೆದುಕೊಂಡು, ಭುಜದ ಮೇಲೆ ಬಲವಾಗಿ ಪ್ರೆಸ್ ಮಾಡುತ್ತಿದ್ದರು, ಉದ್ದೇಶಪೂರ್ವಕವಾಗಿ ತನ್ನ ದೇಹವನ್ನು ಅನುಚಿತ ರೀತಿಯಲ್ಲಿ ಸ್ಪರ್ಶಿಸಿದ್ದರು” ಎಂದು ದಾಖಲಿಸಲಾಗಿದ್ದು, ಈ ದೂರನ್ನು ಅಪ್ರಾಪ್ತ ಕುಸ್ತಿಪಟು ನೀಡಿದ್ದಾರೆ.
6 ವಯಸ್ಕ ಮಹಿಳಾ ಕುಸ್ತಿಪಟುಗಳ ಮೇಲಿನ ಆರೋಪಗಳೇನು?
ಇದಲ್ಲದೆ, ಬ್ರಿಜ್ ಭೂಷಣ್ ವಿರುದ್ಧ 6 ವಯಸ್ಕ ಮಹಿಳಾ ಕುಸ್ತಿಪಟುಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಲ್ಲಿಯೂ ಗಂಭೀರ ಆರೋಪಗಳಿವೆ. ಹೋಟೆಲ್ ರೆಸ್ಟೋರೆಂಟ್ ನಲ್ಲಿ ರಾತ್ರಿ ಊಟದ ವೇಳೆ ತನ್ನ ಟೇಬಲ್ ಬಳಿ ಕರೆಸಿಕೊಳ್ಳುವ ಭೂಷಣ್ ನಂತರ ಎದೆಯಿಂದ ಹೊಟ್ಟೆ ಭಾಗದವರೆಗೆ ಸ್ಪರ್ಶಿಸಿಸುತ್ತಿದ್ದ. ಕುಸ್ತಿ ಫೆಡರೇಷನ್ ಕಚೇರಿಯಲ್ಲಿ ಅನುಮತಿಯಿಲ್ಲದೆ ಮೊಣಕಾಲು, ಭುಜ ಮತ್ತು ಅಂಗೈ ಮುಟ್ಟುತ್ತಿದ್ದ. ಉಸಿರಾಟದ ಮಾದರಿಯನ್ನು ಪರೀಕ್ಷೆ ಮಾಡುವ ನೆಪದಲ್ಲಿ ಎದೆಯಿಂದ ಹೊಟ್ಟೆಯನ್ನು ಮುಟ್ಟುತ್ತಿದ್ದ ಎಂದು ಆರೋಪಿಸಿದ್ದಾರೆ.
ಎರಡನೇ ದೂರಿನ ಪ್ರಕಾರ, “ಚಾಪೆ ಮೇಲೆ ಮಲಗಿದ್ದಾಗ, ಆರೋಪಿ (ಬ್ರಿಜ್ ಭೂಷಣ್) ಬಂದು ಅನುಮತಿ ಇಲ್ಲದೆ ಟೀ ಶರ್ಟ್ ಎಳೆದು ನನ್ನ ಮೇಲೆ ಕೈ ಹಾಕಿದ್ದಾನೆ. ಎದೆಯ ಮೇಲೆ ಮತ್ತು ನನ್ನ ಉಸಿರನ್ನು ಪರೀಕ್ಷಿಸುವ ನೆಪದಲ್ಲಿ ಕಿರುಕುಳ ಎಸಗಿದ್ದಾನೆ. ನಾನು ಫೆಡರೇಶನ್ ಕಚೇರಿಯಲ್ಲಿ ನನ್ನ ಸಹೋದರನೊಂದಿಗೆ ಇದ್ದೆ, ಆಗ ನನ್ನನ್ನು ಕರೆದು, ನನ್ನ ಸಹೋದರನನ್ನು ಹೊರಗುಳಿಯುವಂತೆ ಸೂಚಿಸಲಾಯಿತು. ಬಳಿಕ ಬಲವಂತವಾಗಿ ಕೋಣೆಯಲ್ಲಿ ನನ್ನನ್ನು ಆತನ ಕಡೆಗೆ ಎಳೆದುಕೊಂಡರು” ಎಂದು ಹೇಳಲಾಗಿದೆ.
ಮೂರನೇ ದೂರಿನ ಪ್ರಕಾರ ಆರೋಪಿಯು “ನನ್ನನ್ನು ತಬ್ಬಿಕೊಳ್ಳುತ್ತಾನೆ, ನನಗೆ ಲಂಚ ಕೊಡುವ ಬಗ್ಗೆ ಮಾತನಾಡುತ್ತಾನೆ” ಎಂದು ಹೇಳಿದ್ದಾರೆ. ನಾಲ್ಕನೇ ದೂರಿನ ಪ್ರಕಾರ ಉಸಿರಾಟ ಪರೀಕ್ಷೆ ನೆಪದಲ್ಲಿ ಹೊಕ್ಕುಳ ಮೇಲೆ ಕೈ ಹಾಕಿದ್ದಾನೆ. ಐದನೇ ದೂರಿನ ಪ್ರಕಾರ, ಸಂತ್ರಸ್ತೆ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ, ದೂರ ಹೋಗಲು ಪ್ರಯತ್ನಿಸಿದಾಗ ಭುಜವನ್ನು ಹಿಡಿಯುತ್ತಾನೆ. ಆರನೇ ದೂರಿನ ಪ್ರಕಾರ, ಫೋಟೋ ತೆಗೆಯುವ ನೆಪದಲ್ಲಿ ಆರೋಪಿಯು ಭುಜದ ಮೇಲೆ ಕೈ ಹಾಕುತ್ತಿದ್ದ ಎಂದು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Adipurush Collection: ರಿಲೀಸ್‌ಗೂ ಮುಂಚೆಯೇ 400 ಕೋಟಿ ಗಳಿಸಿದ ಆದಿಪುರುಷ.!
ಇನ್ಮು ಟೂರ್ನಮೆಂಟ್ ಗಳಲ್ಲಿ ಗಾಯಗಳಾಗಿದ್ದಾಗ ಚಿಕಿತ್ಸೆ ವೆಚ್ಚ ಭರಿಸಬೇಕೆಂದರೆ, ಆಹಾರ ತಜ್ಞರು ಅಥವಾ ಕೋಚ್ ಗಳು ಅನುಮೋದಿಸದ ಆಹಾರ ನೀಡಬೇಕೆಂದರೆ ಸೆಕ್ಸ್ ಗೆ ಸಹಕರಿಸುವಂತೆ ಬ್ರಿಜ್ ಭೂಷಣ್ ಒತ್ತಾಯಿಸುತ್ತಿದ್ದ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.