Wrestlers FIR: `ಉಸಿರು ಪರೀಕ್ಷೆಯ ನೆಪ ಹೇಳಿ ಬೃಜ್ ಭೂಷಣ್ ಎದೆ-ಹೊಟ್ಟೆ ಸ್ಪರ್ಶಿಸುತ್ತಿದ್ದ`
Wrestlers Protest: ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ವಾರ್ಮ್ ಅಪ್, ಟೂರ್ನಿಯ ವೇಳೆ ಹಾಗೂ WFI ಕಚೇರಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಬೇಕಾದ ಹಲವು ಸಂದರ್ಭಗಳು ಎದುರಾಗಿವೆ ಎಂದು ಮಹಿಳಾ ಕುಸ್ತಿಪಟುಗಳು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರ ಬಳಿ ದಾಖಲಾಗಿರುವ ದೂರಿನಲ್ಲಿ 7 ಜನರಲ್ಲಿ ಇಬ್ಬರು ಮಹಿಳಾ ಕುಸ್ತಿಪಟುಗಳು ಹಲವು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.
WFI President Brijbhushan Sharan Singh: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜಂತರ್ ಮಂತರ್‌ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ, ಅವುಗಳಲ್ಲಿ ಒಂದನ್ನು ಪೋಕ್ಸೊ ಕಾಯ್ದೆಯಡಿ ದಾಖಲಿಸಲಾಗಿದೆ. ಈ ಎಫ್‌ಐಆರ್‌ನಲ್ಲಿ ಮಹಿಳಾ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳಲ್ಲಿ ಲೈಂಗಿಕ ಕಿರುಕುಳ, ನಿಂದನೆ, ಅನುಚಿತ ಸ್ಪರ್ಶ ಮತ್ತು ದೈಹಿಕ ಸಂಪರ್ಕ ಶಾಮೀಲಾಗಿವೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಮಹಿಳಾ ಕುಸ್ತಿಪಟುಗಳು ತಮ್ಮ ದೂರಿನಲ್ಲಿ ಅಭ್ಯಾಸ, ಪಂದ್ಯಾವಳಿಗಳು ಮತ್ತು WFI ಕಚೇರಿಯಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಪೊಲೀಸರಿಗೆ ನೀಡಿರುವ ದೂರಿನಲ್ಲಿ 7 ಮಹಿಳಾ ಕುಸ್ತಿಪಟುಗಳ ಪೈಕಿ 2 ಮಂದಿ ಲೈಂಗಿಕ ಕಿರುಕುಳದ ಕುರಿತು ಹಲವು ಬಾರಿ ಮಾತನಾಡಿದ್ದಾರೆ.
ಈ ಇಬ್ಬರು ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮನ್ನು ತಪ್ಪಾಗಿ ಸ್ಪರ್ಶಿಸಿದ್ದಾರೆ ಮತ್ತು ಉಸಿರಾಟದ ಪರೀಕ್ಷೆಯ ನೆಪದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮಹಿಳಾ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಮುಖ್ಯಸ್ಥರಾಗಿ ಬ್ರಿಜ್ ಭೂಷಣ್ ಅವರ ಪ್ರಭಾವ ಮತ್ತು ತಮ್ಮ ವೃತ್ತಿಜೀವನದ ಮೇಲೆ ಉಂಟಾಗುವ ಪರಿಣಾಮದ ಕಾರಣ, ತಾವು ಈ ಹಿಂದೆ ಸುಮ್ಮನಿರಬೇಕಾದ ಸಂದರ್ಭ ಇತ್ತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ-Good News! ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಹೋದ ಕೋವಿಡ್ - 19, ಡಬ್ಲ್ಯೂಎಚ್ಓ ಘೋಷಣೆ
ಮಹಿಳಾ ಕುಸ್ತಿಪಟುಗಳ ಗಂಭೀರ ಆರೋಪ
ಮಹಿಳಾ ಕುಸ್ತಿಪಟು ಬ್ರಿಜ್ ಭೂಷಣ್ ವಿರುದ್ಧ 5 ಬಾರಿ ಲೈಂಗಿಕ ಶೋಷಣೆ ಆರೋಪ ಮಾಡಿದ್ದಾರೆ. ಆರೋಪದ ಪ್ರಕಾರ, '2016 ರಲ್ಲಿ ನಡೆದ ಪಂದ್ಯಾವಳಿಯ ವೇಳೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿಪಟುವಿಗೆ ಕರೆ ಮಾಡಿ ರೆಸ್ಟೋರೆಂಟ್ ಕರೆಯಿಸಿ ಆಕೆಯ ಹೊಟ್ಟೆ ಮತ್ತು ಎದೆಯನ್ನು ತಪ್ಪಾದ ರೀತಿಯಲ್ಲಿ ಸ್ಪರ್ಶಿಸಿದ್ದರು. ಈ ಘಟನೆಯ ನಂತರ ತನಗೆ ನಿದ್ರೆ ಬರಲಿಲ್ಲ, ಊಟವೂ ಇಲ್ಲದೇ ಖಿನ್ನತೆಗೆ ಒಳಗಾಗಿದ್ದೆ' ಎಂದು ಮಹಿಳಾ ಕುಸ್ತಿಪಟು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
'2019 ರಲ್ಲಿ, ಪಂದ್ಯಾವಳಿಯ ಸಮಯದಲ್ಲಿ, ಬ್ರಿಜ್ಭೂಷಣ್ ತನ್ನ ಹೊಟ್ಟೆ ಮತ್ತು ಎದೆಯನ್ನು ಮುಟ್ಟಿದರು. ಇದಾದ ನಂತರ ಅಶೋಕ್ ರಸ್ತೆಯ ಮನೆಯಲ್ಲೂ ತನ್ನನ್ನು ತಪ್ಪಾಗಿ ಸ್ಪರ್ಶಿಸಿದ್ದಾನೆ. ಮೊದಲ ದಿನವೇ ಬ್ರಿಜ್ ಭೂಷಣ್ ತನ್ನ ಭುಜ ಮತ್ತು ತೊಡೆಯನ್ನು ಸ್ಪರ್ಶಿಸಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮರುದಿನ ಹೊಟ್ಟೆ ಮತ್ತು ಎದೆಯನ್ನು ಸ್ಪರ್ಶಿಸಿದ್ದಾನೆ. ಇದನ್ನು ಪ್ರಶ್ನಿಸಿದಾಗ ತಾನು ಉಸಿರಾಟದ ಪರೀಕ್ಷೆ ನಡೆಸುತ್ತಿರುವೆ ಎಂದು ಅವನು ಹೇಳಿದ್ದ ಎಂದು ಆರೋಪಿಸಿದ್ದಾಳೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.