ನವದೆಹಲಿ: ಪಿ.ವಿ ಸಿಂಧು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ತೈಪೆಯ ಎರಡನೇ ಶ್ರೇಯಾಂಕದ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧದ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆಯಿಟ್ಟರು.


COMMERCIAL BREAK
SCROLL TO CONTINUE READING

ಪಿ.ವಿ ಸಿಂಧು ಪಂದ್ಯದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು ಸಹಿತ ಎರಡು ಹಾಗೂ ಮೂರನೇ ಸುತ್ತಿನಲ್ಲಿ ಪ್ರಾಬಲ್ಯ ಮೆರೆದರು. ಸುಮಾರು ಒಂದು ಗಂಟೆ 11 ನಿಮಿಷ  ನಡೆದ ಮಹಿಳಾ ಸಿಂಗಲ್ಸ್ ಸ್ಪರ್ಧೆಯ ರೋಚಕ ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಯಿಂಗ್ ವಿರುದ್ಧ 12-21, 23-21, 21-19 ಅಂತರದಲ್ಲಿ ಜಯಗಳಿಸಿದರು.


ವಿಶೇಷವೆಂದರೆ, ಇದು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್‌ನಲ್ಲಿ ಸೋಲಿನ ನಂತರ ಸಿಂಧು ಮತ್ತು ವಿಶ್ವದ ಎರಡನೇ ನಂಬರ್ ಯಿಂಗ್ ನಡುವಿನ ಮೊದಲ ಮುಖಾಮುಖಿಯಾಗಿದೆ. ಈ ಗೆಲುವಿನೊಂದಿಗೆ ಸಿಂಧು ತೈ ತ್ಸು ವಿರುದ್ಧದ ದಾಖಲೆಯನ್ನು 5-10ಕ್ಕೆ ಹೆಚ್ಚಿಸಿಕೊಂಡರು.


ಈ ಗೆಲುವಿನೊಂದಿಗೆ ಸಿಂಧು ಈಗ ಫೈನಲ್‌ನಲ್ಲಿ ಸ್ಥಾನ ಪಡೆಯಲು ಚೀನಾದ ಚೆನ್ ಯು ಫೀ ಅಥವಾ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ವಿರುದ್ಧ ಸೆಣಸಲಿದ್ದಾರೆ.