IND vs ENG 3rd Test: ಟೀಂ ಇಂಡಿಯಾದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ವೈದ್ಯಕೀಯ ತುರ್ತುಪರಿಸ್ಥಿತಿಯಿಂದಾಗಿ ಎರಡನೇ ದಿನದಾಟದ ಬಳಿಕ ಅವರು ರಾಜ್‌ಕೋಟ್‌ನಿಂದ ಚೆನ್ನೈಗೆ ತೆರಳಿದ್ದು... ಸದ್ಯ ಅಶ್ವಿನ್ ಅವರು ತಮ್ಮ ತಾಯಿಯೊಂದಿಗೆ ಇರಲು ನಿರ್ಧರಿಸಿದ್ದಾರೆ.. ಎಂದು BCCI ಮಾಹಿತಿ ನೀಡಿದೆ.. "ಅಶ್ವಿನ್‌ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.. ಇದು ಕಠಿಣ ಸಮಯ ಮತ್ತು ಬಿಸಿಸಿಐ ಅಶ್ವಿನ್ ಜೊತೆಗಿದೆ" ಎಂದು ಮಂಡಳಿಯು ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಿದೆ..  


COMMERCIAL BREAK
SCROLL TO CONTINUE READING

ಇದನ್ನೂ ಓದಿ-IND vs ENG: ಸರ್ಫರಾಜ್ ಖಾನ್ ತಂದೆಗೆ ಭರ್ಜರಿ ಗಿಫ್ಟ್‌ ನೀಡಿದ ಆನಂದ್ ಮಹೀಂದ್ರ!


ಅಶ್ವಿನ್ ನಿರ್ಗಮನ ಇದೀಗ ಭಾರತ ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಕೇವಲ ನಾಲ್ವರು ಪ್ರಮುಖ ಬೌಲರ್‌ಗಳು ಮಾತ್ರ ಲಭ್ಯವಿದ್ದಾರೆ. ಆದರೆ.. ಅಶ್ವಿನ್ ಸ್ಥಾನದಲ್ಲಿ ಮತ್ತೊಬ್ಬ ಬೌಲರ್ ತೆಗೆದುಕೊಳ್ಳುವ ಸಾಧ್ಯತೆ ಇದೆಯೇ..? ಎಂಬ ಪ್ರಶ್ನೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಕನ್ಕ್ಯುಶನ್ ನಿಯಮದಂತಹ ನಿಯಮವೇನಾದರೂ ಇದೆಯೇ ಎಂದು ಹುಡುಕುತ್ತಿದ್ದಾರೆ.. ಎಂಸಿಸಿ ನಿಯಮದ ಪ್ರಕಾರ ಅಶ್ವಿನ್ ಬದಲಿಗೆ ಮತ್ತೊಬ್ಬ ಆಟಗಾರನನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ. ಆದರೆ, ಅಂಪೈರ್‌ಗಳು ಬದಲಿ ಫೀಲ್ಡರ್‌ಗೆ ಅನುಮತಿ ನೀಡುತ್ತಾರೆ. 


ಇದನ್ನೂ ಓದಿ-IND vs ENG: ಇತಿಹಾಸ ಸೃಷ್ಟಿಸಿದ ಅಶ್ವಿನ್.. ದಿಗ್ಗಜರ ದಾಖಲೆಳೆಲ್ಲ ಉಡೀಸ್!


ಆಟಗಾರ ಗಾಯಗೊಂಡ ಅಥವಾ ಅಸ್ವಸ್ಥಗೊಂಡ ಸಂದರ್ಭಗಳಲ್ಲಿ ಮಾತ್ರ ಪರ್ಯಾಯ ಆಟಗಾರನನ್ನು ಕಣಕ್ಕಿಳಿಸುವುದು ಸಾಧ್ಯ. ಈ ಪಂದ್ಯದಲ್ಲಿ ಅಶ್ವಿನ್ ಗಾಯಗೊಂಡಿಲ್ಲ ಅಥವಾ ಅನಾರೋಗ್ಯಕ್ಕೆ ಒಳಗಾಗಿಲ್ಲ. ಆದ್ದರಿಂದ ಬದಲಿ ಫೀಲ್ಡರ್‌ಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಬದಲಿ ಫೀಲ್ಡರ್‌ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡಲು ಅವಕಾಶವಿರುವುದಿಲ್ಲ. ಅವರು ಫೀಲ್ಡಿಂಗ್ ಮಾತ್ರ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಅಂಪೈರ್‌ಗಳ ಅನುಮತಿಯೊಂದಿಗೆ ವಿಕೆಟ್ ಕೀಪಿಂಗ್ ಕೂಡ ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.