ಒಂದು ಪಂದ್ಯ ಆಡಿದ ಮರುದಿನವೇ ನಾಯಕತ್ವ ತೊರೆದ ಕ್ಯಾಪ್ಟನ್! ಹೊರಬಿತ್ತು ಶಾಕಿಂಗ್ ಅಪ್ಡೇಟ್
Hanuma Vihari stepped down as a captain: ಹನುಮ ವಿಹಾರಿ ನಾಯಕತ್ವ ತೊರೆದ ಬಗ್ಗೆ ಮುಖ್ಯ ಆಯ್ಕೆಗಾರ ಆರ್ ವಿ ಸಿ ಎಚ್ ಪ್ರಸಾದ್ ಮಾತನಾಡಿ, “ಅವರು ತಮ್ಮ ಬ್ಯಾಟಿಂಗ್’ನ ಮೇಲೆ ಕೇಂದ್ರೀಕರಿಸಲು ವಿರಾಮ ತೆಗೆದುಕೊಳ್ಳಲು ಬಯಸಿದ್ದರು. ಅವರನ್ನು ತೆಗೆದುಹಾಕಲು ಯಾವುದೇ ಒತ್ತಡ ಇರಲಿಲ್ಲ” ಎಂದರು
Hanuma Vihari stepped down as a captain: ಆಂಧ್ರ ತಂಡ ರಣಜಿ ಟ್ರೋಫಿ 2023-24ರ ಋತುವಿನ ಮೊದಲ ಪಂದ್ಯವನ್ನು ಬಂಗಾಳದ ವಿರುದ್ಧ ಆಡಿತ್ತು. ಈ ಪಂದ್ಯ ಡ್ರಾ ಕೂಡ ಆಗಿತ್ತು. ಈ ಪಂದ್ಯದಲ್ಲಿ ಆಂಧ್ರ ತಂಡದ ಸಾರಥ್ಯ ವಹಿಸಿದ್ದ ಹನುಮ ವಿಹಾರಿ ಎರಡನೇ ಪಂದ್ಯಕ್ಕೂ ಮುನ್ನವೇ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅವರ ಸ್ಥಾನಕ್ಕೆ ರಿಕಿ ಭುಯಿ ಅವರನ್ನು ಉಳಿದ ಟೂರ್ನಿಗೆ ನಾಯಕರನ್ನಾಗಿ ಮಾಡಲಾಗಿದೆ. ಕಳೆದ ಋತುವಿನಲ್ಲಿ ಹನುಮ ವಿಹಾರಿ ನಾಯಕತ್ವದಲ್ಲಿ ಆಂಧ್ರ ತಂಡ ಕ್ವಾರ್ಟರ್ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿತ್ತು.
ಇದನ್ನೂ ಓದಿ: ಯುವ ಸ್ಪಂದನ: ಯುವ ಸಮಾಲೋಚಕ, ಪರಿಚರ್ತಕರ ಹುದ್ದೆಗೆ ಅರ್ಜಿ ಆಹ್ವಾನ
ಹನುಮ ವಿಹಾರಿ ನಾಯಕತ್ವ ತೊರೆದ ಬಗ್ಗೆ ಮುಖ್ಯ ಆಯ್ಕೆಗಾರ ಆರ್ ವಿ ಸಿ ಎಚ್ ಪ್ರಸಾದ್ ಮಾತನಾಡಿ, “ಅವರು ತಮ್ಮ ಬ್ಯಾಟಿಂಗ್’ನ ಮೇಲೆ ಕೇಂದ್ರೀಕರಿಸಲು ವಿರಾಮ ತೆಗೆದುಕೊಳ್ಳಲು ಬಯಸಿದ್ದರು. ಅವರನ್ನು ತೆಗೆದುಹಾಕಲು ಯಾವುದೇ ಒತ್ತಡ ಇರಲಿಲ್ಲ” ಎಂದರು.
ಮುಂಬೈ ಪಂದ್ಯಕ್ಕೂ ಮುನ್ನ ವಿಹಾರಿ ಆಂಧ್ರ ಪರ 30 ಪಂದ್ಯಗಳನ್ನು ಆಡಿದ್ದರು. ಎಲ್ಲದರಲ್ಲೂ ಉತ್ತಮ ನಾಯಕತ್ವ ವಹಿಸಿದ್ದರು. 53 ಸರಾಸರಿಯಲ್ಲಿ 2000 (2262) ಕ್ಕಿಂತ ಹೆಚ್ಚು ರನ್ ಗಳಿಸಿದ ಆಂಧ್ರದ 10 ಬ್ಯಾಟ್ಸ್‌ಮನ್’ಗಳಲ್ಲಿ ಇವರು ಕೂಡ ಒಬ್ಬರು. ಪ್ರಸಕ್ತ ರಣಜಿ ಋತುವಿನ ಮೊದಲ ಪಂದ್ಯದಲ್ಲಿ ವಿಹಾರಿ ಮೊದಲ ಇನ್ನಿಂಗ್ಸ್’ನಲ್ಲಿ 51 ರನ್ ಗಳಿಸಿದ್ದರು.
ಇದನ್ನೂ ಓದಿ: Mohammed Shami ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ! ಕಾರಣ ಗೊತ್ತಾಗಬೇಕೆ? Viral Video ನೋಡಿ!
ಟೀಂ ಇಂಡಿಯಾ ಪರ ಟೆಸ್ಟ್ ಆಡಿರುವ ಹನುಮ ವಿಹಾರಿ ಮೂರು ವರ್ಷಗಳ ಹಿಂದೆ ಸಿಡ್ನಿ ಟೆಸ್ಟ್’ನಲ್ಲಿ ಮಂಡಿರಜ್ಜು ಗಾಯದ ಹೊರತಾಗಿಯೂ 161 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ