IND vs SA 2nd ODI, KL Rahul Statement: ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಎರಡನೇ ODI ಪಂದ್ಯದಲ್ಲಿಲ್ಲಿ 8 ವಿಕೆಟ್‌’ಗಳ ಸೋಲನ್ನನುಭವಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲವಾಗಿದೆ. ಭಾರತದ ಬ್ಯಾಟ್ಸ್‌ಮನ್‌’ಗಳು 50 ಓವರ್‌’ಗಳ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಆತಿಥೇಯರು 42.3 ಓವರ್‌’ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 215 ರನ್ ಗಳಿಸಿ ಗುರಿ ತಲುಪಿದರು. ಸೋಲಿನ ನಂತರ, ತಂಡದ ನಾಯಕ ಕೆಎಲ್ ರಾಹುಲ್ ತುಂಬಾ ಅಸಮಾಧಾನ ತೋರಿ ಸೋಲಿಗೆ ಕಾರಣವನ್ನು ತಿಳಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಐಶ್ವರ್ಯಾ ರೈ ಇಷ್ಟವಿರಲಿಲ್ಲ… ಈ ನಟಿಯನ್ನೇ ಅಭಿಷೇಕ್’ಗೆ ಮದುವೆ ಮಾಡಿಸಬೇಕೆಂದಿದ್ದರು ಜಯಾ ಬಚ್ಚನ್!


ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 8 ವಿಕೆಟ್‌’ಗಳಿಂದ ಸೋತ ಬಳಿಕ, ಭಾರತೀಯ ನಾಯಕ ಕೆಎಲ್ ರಾಹುಲ್ ಮಾತನಾಡಿ, “ಆರಂಭದಲ್ಲಿ ಪಿಚ್ ವೇಗದ ಬೌಲರ್‌’ಗಳಿಗೆ ಹೆಚ್ಚಿನ ಬೆಂಬಲವನ್ನು ನೀಡಿತ್ತು. ಹೀಗಾಗಿ ಟಾಸ್ ಸೋತವರಿಗೆ ಕಷ್ಟವಾಯಿತು. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಟೋನಿ ಡಿ ಜಾರ್ಜಿ (ಔಟಾಗದೆ 119) ಶತಕ ಸಿಡಿಸಿದ್ದರು. ಪಂದ್ಯದ ಆರಂಭದಲ್ಲಿ ವೇಗಿಗಳಿಗೆ ಪಿಚ್‌\ನಿಂದ ಹೆಚ್ಚಿನ ನೆರವು ದೊರೆಯುತ್ತಿದ್ದು, ಇದರಿಂದಾಗಿ ಭಾರತೀಯ ಬ್ಯಾಟ್ಸ್‌ಮನ್‌’ಗಳು ಹೊಂದಾಣಿಕೆ ಮಾಡಿಕೊಳ್ಳಲು ತೊಂದರೆ ಅನುಭವಿಸಿದರು” ಎಂದು ಹೇಳಿದರು.


'ನಾವು ಹೆಚ್ಚು ರನ್ ಗಳಿಸಬಹುದಿತ್ತು...'


“ಬಹುಶಃ ಟಾಸ್ ಸೋತಿರುವುದೇ ಸಮಸ್ಯೆಯಾಯಿತು. ಈ ಪಿಚ್‌’ನಲ್ಲಿ ಬ್ಯಾಟ್ ಮಾಡುವುದು ಕಷ್ಟಕರವಾಗಿತ್ತು. ಆದರೆ ನಮ್ಮಲ್ಲಿ ಕೆಲವು ಬ್ಯಾಟ್ಸ್‌ಮನ್‌’ಗಳು ಉತ್ತಮ ಆರಂಭಗಳನ್ನು ದೊಡ್ಡ ಇನ್ನಿಂಗ್ಸ್‌’ಗಳಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ನಾವು ಇನ್ನಿಂಗ್ಸ್ ಮುಂದುವರಿಸಿದ್ದರೆ 50-60 ರನ್ ಸೇರಿಸಬಹುದಿತ್ತು. ನಾವು ಬ್ಯಾಟ್ ಮಾಡುವಾಗ 240-250 ರನ್ ಗಳಿಸಿದರೆ ಒಳ್ಳೆಯದಿತ್ತು ಎಂದು ಭಾವಿಸಿದ್ದೆವು. ಪ್ರಮುಖ ಸಮಯಗಳಲ್ಲಿ ನಾವು ವಿಕೆಟ್ ಕಳೆದುಕೊಂಡಿದ್ದೇವೆ” ಎಂದಿದ್ದಾರೆ.


ಇದನ್ನೂ ಓದಿ: ‘ಕಾಟೇರ’ದಲ್ಲಿ ದರ್ಶನ್ ಜೊತೆ ನಟಿಸಲು ಮಾಲಾಶ್ರೀ ಮಗಳು ಆರಾಧನಾ ಪಡೆದ ಸಂಭಾವನೆ ಎಷ್ಟು?


“ಪ್ರತಿಯೊಬ್ಬ ಆಟಗಾರನಿಗೆ ತಂಡದಲ್ಲಿ ಅವರ ಪಾತ್ರದ ಬಗ್ಗೆ ತಿಳಿದಿದೆ. ನಾನು ನನ್ನ ಪಾತ್ರವನ್ನು ಸಂಪೂರ್ಣ ಸ್ಪಷ್ಟತೆಯಿಂದ ನಿರ್ವಹಿಸಲು ಪ್ರಯತ್ನಿಸುತ್ತೇನೆ. ಕ್ರಿಕೆಟ್‌’ನಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ನಿಮ್ಮ ತಂಡಕ್ಕೆ ಉತ್ತಮವಾದದ್ದನ್ನು ಮಾಡಬೇಕು ಅಷ್ಟೇ. ಮೊದಲ 10 ಓವರ್‌’ಗಳಲ್ಲಿ ನಮ್ಮ ಬೌಲರ್‌’ಗಳು ಕೂಡ ಪಿಚ್‌’ನಿಂದ ಸಹಾಯ ಪಡೆಯುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಆ ಕ್ಯಾಚ್ ತೆಗೆದುಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದರೆ, ಬಹುಶಃ ಫಲಿತಾಂಶವು ವಿಭಿನ್ನವಾಗಿರುತ್ತಿತ್ತು” ಎಂದು ಅಸಮಾಧಾನ ಹೊರಹಾಕಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.