T20 World Cup: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T20 ವಿಶ್ವಕಪ್ 2022 ಪಂದ್ಯವು ಇಂದು ಭಾರತೀಯ ಕಾಲಮಾನ ಪ್ರಕಾರ 4:30 ಕ್ಕೆ ಪರ್ತ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ, 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸುತ್ತದೆ. ಇಂದಿನ ಬಿಗ್ ಮ್ಯಾಚ್‌ಗಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Virat Kohli Sand Art: ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್! ಏನದು ನೀವೇ ನೋಡಿ


ನಾಯಕ ರೋಹಿತ್ ಆಫ್ರಿಕಾ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗ:


ದಕ್ಷಿಣ ಆಫ್ರಿಕಾ ವಿರುದ್ಧದ T20 ವಿಶ್ವಕಪ್ ಪಂದ್ಯದಲ್ಲಿ, ರೋಹಿತ್‌ ಕಣಕ್ಕಿಳಿಸುತ್ತಿರುವ ಈ ಆಟಗಾರ ದಕ್ಷಿಣ ಆಫ್ರಿಕಾವನ್ನು ಹಾನಿಗೊಳಿಸಬಹುದು. ಈ ಕ್ರಿಕೆಟಿಗ ತನ್ನ ಕಿಲ್ಲರ್ ಬೌಲಿಂಗ್ ನಲ್ಲಿ ನಿಪುಣ. ಈ ಆಟಗಾರ ಎಸೆಯುವ ಚೆಂಡುಗಳನ್ನು ಎದುರಿಸುವುದು ಯಾರಿಗೂ ಸುಲಭವಲ್ಲ. ಈ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್. ಇಂದಿನ ಪಂದ್ಯದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬದಲಿಗೆ ರೋಹಿತ್ ಶರ್ಮಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರಿಗೆ ಆಡುವ XI ನಲ್ಲಿ ಅವಕಾಶ ನೀಡಬಹುದು.


ಪ್ಲೇಯಿಂಗ್ 11 ರಲ್ಲಿ ಅವಕಾಶ:


ಯುಜ್ವೇಂದ್ರ ಚಹಾಲ್ ಆಸ್ಟ್ರೇಲಿಯಾದಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಯುಜ್ವೇಂದ್ರ ಚಹಾಲ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್. ಯುಜುವೇಂದ್ರ ಚಹಾಲ್ ಅಂತರಾಷ್ಟ್ರೀಯ ಟಿ20ಯಲ್ಲಿ 85 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಯುಜ್ವೇಂದ್ರ ಚಹಾಲ್ ಚೆಂಡಿನ ಮೂಲಕ ಭಾರತಕ್ಕೆ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರಿಗಿಂತ ಯುಜುವೇಂದ್ರ ಚಹಾಲ್ ಉತ್ತಮ T20 ಬೌಲರ್. ಯುಜುವೇಂದ್ರ ಚಹಾಲ್ ಭಾರತ ಪರ 69 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಮತ್ತೊಂದು ದಾಖಲೆ: ಪಾಕ್ ನಾಯಕನನ್ನು ಹಿಂದಿಕ್ಕಿದ ಟೀಂ ಇಂಡಿಯಾದ ‘ಮಿಸ್ಟರ್ 360’


ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್‌ನಲ್ಲಿ ಭಾರತ ಪ್ಲೇಯಿಂಗ್ 11 ಹೀಗಿರಲಿದೆ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (WK), ಅಕ್ಷರ್ ಪಟೇಲ್, ಯುಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ