Celebrity Cricket League 2024: ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ 11ನೇ ಪಂದ್ಯದಲ್ಲಿ ಚೆನ್ನೈ ರೈನೋಸ್​ ತಂಡವನ್ನು 67 ರನ್​ಗಳಿಂದ ಮಣಿಸಿದ ಕರ್ನಾಟಕ ಬುಲ್ಡೋಜರ್ಸ್​ ತಂಡ ಲೀಗ್​ನಲ್ಲಿ ಸತತ 3ನೇ ಗೆಲುವು ದಾಖಲಿಸಿದೆ.


COMMERCIAL BREAK
SCROLL TO CONTINUE READING

ಗೆಲುವಿಗೆ 60 ಎಸೆತಗಳಲ್ಲಿ 149 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ರೈನೋಸ್ ತಂಡವು 3 ವಿಕೆಟ್ ಕಳೆದುಕೊಂಡು 134 ರನ್ ಗಳಿಸಲಷ್ಟೇ ಶಕ್ತವಾಯಿತು. ಇತ್ತ ಕರ್ನಾಟಕ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಡಾರ್ಲಿಂಗ್ ಕೃಷ್ಣ(57), ಪ್ರದೀಪ್‌(66) ಆಕರ್ಷಕ ಅರ್ಧಶತಕ ಸಿಡಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ರಾಜೀವ್‌(63) ಅರ್ಧಶತಕದ ಸಿಡಿಸಿ ತಂಡದ ಗೆಲುವಿಗೆ ಉತ್ತಮ ಕೊಡುಗೆ ನೀಡಿದರು.  


ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ಪ್ರಿ-ವೆಡ್ಡಿಂಗ್’ನಲ್ಲಿ ಧೋನಿ ಡ್ಯಾನ್ಸ್; ಸಾಥ್ ಕೊಟ್ಟ ಪತ್ನಿ ಸಾಕ್ಷಿ, ಕ್ರಿಕೆಟಿಗ ಡ್ವೇನ್ ಬ್ರಾವೋ


ಕರ್ನಾಟಕದ ಮೊದಲ ಇನ್ನಿಂಗ್ಸ್: ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ರೈನೋಸ್ ಫೀಲ್ಡಿಂಗ್‌ ಆಯ್ದುಕೊಂಡಿತು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡವು ಮೊದಲ 10 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪ್ರದೀಪ್(66) ಮತ್ತು ಡಾರ್ಲಿಂಗ್ ಕೃಷ್ಣ(57) ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡವನ್ನು 137 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು.   


ಚೆನ್ನೈ ರೈನೋಸ್ ಮೊದಲ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್​ನಲ್ಲಿ 138 ರನ್​ಗಳ ಗುರಿ ಬೆನ್ನಟ್ಟಿದ ಚೆನ್ನೈ ರೈನೋಸ್​ ತಂಡ ಮೊದಲ 10 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 84 ರನ್‌ ಗಳಿಸಲಷ್ಟೇ ಶಕ್ತವಾಯಿತು. 


ಕರ್ನಾಟಕದ 2ನೇ ಇನ್ನಿಂಗ್ಸ್: 53 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ರಾಜೀವ್‌(63) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಇನ್ನುಳಿದಂತೆ ಮಂಜುನಾಥ್(‌28) ಮತ್ತು ಡಾರ್ಲಿಂಗ್‌ ಕೃಷ್ಣ(20) ರನ್‌ ಗಳಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಕೊನೆಯ 10 ಓವರ್​ಗಳ ಇನ್ನಿಂಗ್ಸ್​ನಲ್ಲಿ ಕರ್ನಾಟಕ ತಂಡ 3 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿತು.


ಇದನ್ನೂ ಓದಿ: IND vs ENG 5th Test: ವಿರಾಟ್‌ ಕೊಹ್ಲಿ ಟೆಸ್ಟ್​ ಆಡದಿರುವುದು ನಾಚಿಕೆಗೇಡಿನ ಸಂಗತಿ- ಅ್ಯಂಡರ್ಸನ್


ಚೆನ್ನೈ ರೈನೋಸ್ 2ನೇ ಇನ್ನಿಂಗ್ಸ್:  2ನೇ ಇನ್ನಿಂಗ್ಸ್​ನಲ್ಲಿ 202 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ರೈನೋಸ್ ಕೊನೆಯ 10 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 134 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಲೀಗ್‌ನಲ್ಲಿ 3ನೇ ಗೆಲುವು ದಾಖಲಿಸಿತು. ಕರ್ನಾಟಕ ಪರ ಎಲ್ಲಾ ಆಟಗಾರರು ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಅತ್ಯುತ್ತಮ ಆಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.