ನವದೆಹಲಿ : ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ ಕೇಂದ್ರ ನೌಕರರಿಗೆ ಹೆಚ್ಚಿನ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಹೃದಯ ಮತ್ತು ಶ್ವಾಸಕೋಶ ಕಸಿಗಾಗಿ ಸಿಜಿಎಚ್‌ಎಸ್ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೌಕರರಿಗೆ 35 ಲಕ್ಷ ರೂ.ವರೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒಂಬತ್ತು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.


COMMERCIAL BREAK
SCROLL TO CONTINUE READING

ಶ್ವಾಸಕೋಶ ಕಸಿ ಮಾಡಲು 25 ಲಕ್ಷ, ಹೃದಯ ಕಸಿ ಮಾಡಲು 15 ಲಕ್ಷ ಹಾಗೂ ಎರಡಕ್ಕೂ 35 ಲಕ್ಷ ರೂಪಾಯಿ ನೀಡಲು ಕೇಂದ್ರ ಸಚಿವಾಲಯ ಮುಂದಾಗಿದೆ. ಈ ಮೊತ್ತವನ್ನು ಹೆಚ್ಚಿಸುವಂತೆ ಕೇಂದ್ರ ನೌಕರರ ಸಂಘಟನೆಗಳು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು.


ಇದನ್ನೂ ಓದಿ : ವಿವಾಹಿತ ಮಹಿಳೆ ತನ್ನ ಬಳಿ ಇಷ್ಟು ಚಿನ್ನವನ್ನು ಮಾತ್ರ ಇಟ್ಟುಕೊಳ್ಳಬಹುದು! ಐಟಿ ನೀಡಿದ ಮಿತಿ ಇದು !


2012ರಲ್ಲಿ ಹೊರಡಿಸಿದ ಸರ್ಕಾರದ ಆದೇಶದ ಪ್ರಕಾರ ಪ್ರಸ್ತುತ ಶ್ವಾಸಕೋಶ ಕಸಿಗೆ 11.50 ಲಕ್ಷ ರೂ., ಹೃದಯ ಕಸಿಗೆ 7.90 ಲಕ್ಷ ರೂ. ಹಾಗೂ ಎರಡೂ ಕಸಿಗಳಿಗೆ ಗರಿಷ್ಠ 18 ಲಕ್ಷ ರೂ. ನೀಡಲಾಗುತ್ತಿದೆ. 


ನೌಕರರ ಸಂಘಟನೆಗಳ ಬೇಡಿಕೆಯ ಮೇರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಿಜಿಎಚ್‌ಎಸ್‌ಕೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದೆ. ಒಂಬತ್ತು ಜನರ ಸಮಿತಿಯಲ್ಲಿ ತಜ್ಞ ವೈದ್ಯರೂ ಇದ್ದಾರೆ. ಈ ಗರಿಷ್ಠ ಮೊತ್ತವನ್ನು ತೆಗೆದುಕೊಳ್ಳಲು, ಈ ಸಮಿತಿಯ ಅನುಮೋದನೆ  ಪಡೆಯುವುದು ಅನಿವಾರ್ಯವಾಗಬಹುದು. 


ಇದನ್ನೂ ಓದಿ : ಹೊಸ ವರ್ಷಾರಂಭಕ್ಕೂ ಮುನ್ನವೇ ಸರ್ಕಾರಿ ನೌಕರರಿಗೊಂದು ಭಾರಿ ಸಂತಸದ ಸುದ್ದಿ, ಹೆಚ್ಚಾಯ್ತು ತುಟ್ಟಿಭತ್ಯೆ!


ಹೃದಯ ಅಥವಾ ಶ್ವಾಸಕೋಶದ ಕಸಿ ಮಾಡಲು ಉದ್ಯೋಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ ಎಂದು ಅಖಿಲ ಭಾರತ ಲೆಕ್ಕ ಪರಿಶೋಧನೆ ಮತ್ತು ಖಾತೆಗಳ ಪಿಂಚಣಿದಾರರ ಸಂಘದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸುಭಾಷ್ ಚಂದ್ರ ಪಾಂಡೆ ತಿಳಿಸಿದ್ದಾರೆ.


ಕಸಿ ಮಾಡುವಿಕೆಯು ತುಂಬಾ ದುಬಾರಿಯಾಗಿರುವುದರಿಂದ, ನೌಕರರು ಹೃದಯ ಮತ್ತು ಶ್ವಾಸಕೋಶಗಳಿಗೆ ಸುಲಭವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಶ್ವಾಸಕೋಶ ಮತ್ತು ಹೃದಯ ಕಸಿ ಮಾಡಲು  ನಿಗದಿ ಪಡಿಸಿರುವ ಮೊತ್ತವನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಿತ್ತು. ಕಸಿಗಾಗಿ ಹಣವನ್ನು ಹೆಚ್ಚಿಸಲು ರಚಿಸಲಾದ ಸಮಿತಿಯು ಶೀಘ್ರದಲ್ಲೇ ತನ್ನ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಿದೆ. ಇದರಿಂದ ಪಿಂಚಣಿದಾರರಿಗೂ ಅನುಕೂಲವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ