ODI World cup 2023: ಏಷ್ಯಾ ಕಪ್ ದಿನಾಂಕಗಳನ್ನು ಪ್ರಕಟಿಸಲಾಗಿದೆ. ಈ ಪಂದ್ಯಾವಳಿಯು ಆಗಸ್ಟ್ 31 ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಈ ಬಾರಿಯ ಏಷ್ಯಾಕಪ್ ಪಂದ್ಯಗಳು ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿವೆ. ಶೀಘ್ರದಲ್ಲೇ ಅದರ ಸಂಪೂರ್ಣ ವೇಳಾಪಟ್ಟಿಯನ್ನು ಸಹ ಬಹಿರಂಗಪಡಿಸಲಾಗುತ್ತದೆ. ಇದಾದ ಬಳಿಕ ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗಲಿದೆ. ಇದೀಗ ದೊಡ್ಡ ಸುದ್ದಿಯೊಂದು ಮುನ್ನೆಲೆಗೆ ಬಂದಿದ್ದು, ವಿಶ್ವಕಪ್‌ ಗೂ ಮೊದಲು, ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ನೇಮಕ ಮಾಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೆಸ್ಟ್ ಸರಣಿಯಲ್ಲಿ ಮಹಾ ಬದಲಾವಣೆ: ಈ ಇಬ್ಬರು ಹೊಸ ಮುಖಗಳಿಗೆ ಆರಂಭಿಕ ಸ್ಥಾನ ನೀಡಿದ ಸಮಿತಿ!


ಜೂನ್ 18 ರಿಂದ ಜಿಂಬಾಬ್ವೆಯಲ್ಲಿ ವಿಶ್ವಕಪ್ ಅರ್ಹತಾ ಪಂದ್ಯಗಳು ಪ್ರಾರಂಭವಾಗಲಿವೆ. ಈ ಮಧ್ಯೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ವೇಗದ ಬೌಲರ್ ಚಮಿಂದಾ ವಾಸ್ ಬಗ್ಗೆ ದೊಡ್ಡ ಸುದ್ದಿ ಬಂದಿದೆ. ಅವರು ಯುಎಇ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕಗೊಳ್ಳಬಹುದು. ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್ 2023 ರ ಮೊದಲು, ಅವರು ಯುಎಇ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ 2023 ರಲ್ಲಿ ರಾಬಿನ್ ಸಿಂಗ್ ರಾಜೀನಾಮೆ ನೀಡಿದ ನಂತರ ಮುದಸ್ಸರ್ ನಜರ್ ತಾತ್ಕಾಲಿಕ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರದ ನಂತರ ಚಾಮಿಂದಾ ವಾಸ್ ಅವರ ಸ್ಥಾನಕ್ಕೆ ಬರುವ ಎಲ್ಲಾ ಸಾಧ್ಯತೆಗಳಿವೆ.


ಯುಎಇ ಕ್ರಿಕೆಟ್ ಮಂಡಳಿಯು ಮುಖ್ಯ ಕೋಚ್‌ ಗೆ ಅರ್ಜಿ ಸಲ್ಲಿಸಲು ಜೂನ್ 26 ರ ಗಡುವನ್ನು ನಿಗದಿಪಡಿಸಿದೆ. ಕೋಚ್ ಆಗುವ ಆಸೆಯನ್ನು ವ್ಯಕ್ತಪಡಿಸಿರುವ ಚಾಮಿಂದಾ ವಾಸ್, ಇತ್ತೀಚಿನ ದಿನಗಳಲ್ಲಿ ಯುಎಇ ತಂಡವನ್ನು ಹತ್ತಿರದಿಂದ ನೋಡಿದ್ದೇನೆ ಮತ್ತು ಮುಂಬರುವ ಪಂದ್ಯಾವಳಿಗಳಿಗೆ ಉತ್ತಮ ಮನಸ್ಥಿತಿಯನ್ನು ಬೆಳೆಸಲು ತಂಡಕ್ಕೆ ಸಹಾಯ ಮಾಡಬಹುದು ಎಂದು ಭಾವಿಸುತ್ತೇನೆ ಎಂದು ಹೇಳಿದರು. ಯುಎಇ ತಂಡವು ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಅರ್ಹತಾ ಪಂದ್ಯಗಳನ್ನು ಆಡುವ ಮೂಲಕ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಸುವರ್ಣಾವಕಾಶವಿದೆ.


ಇದನ್ನೂ ಓದಿ: Rain Alert: ಮುಂದಿನ 2 ದಿನ ಈ ಭಾಗಗಳಲ್ಲಿ ಭಾರೀ ಮಳೆ: ಗುಡುಗು-ಮಿಂಚು ಬಿರುಗಾಳಿ ಬೀಸುವ ಸಾಧ್ಯತೆ


ತಂಡದ ಆಟಗಾರರ ಬಗ್ಗೆಯೂ ಮಾತನಾಡಿದ ಚಾಮಿಂದಾ ವಾಸ್, 'ನಾನು ಯುಎಇ ತಂಡವನ್ನು ಅನುಸರಿಸಿದ್ದೇನೆ ಮತ್ತು ಅವರು ಅನೇಕ ಯುವ ಆಟಗಾರರು ಸೇರಿದಂತೆ ಉತ್ತಮ ಆಟಗಾರರನ್ನು ಹೊಂದಿದ್ದಾರೆಂದು ನಾನು ನಂಬುತ್ತೇನೆ. ಯುಎಇ ತಂಡ ಅತ್ಯಂತ ಸಮತೋಲಿತವಾಗಿದೆ. ತಂಡದ ಆಟಗಾರರನ್ನು ಮುಂದಿನ ಹಂತಕ್ಕೆ ತಲುಪಲು ಪ್ರೇರೇಪಿಸಬೇಕು ಎಂದು ನಾನು ಭಾವಿಸುತ್ತೇನೆ. ಕೆಲವು ಆಟಗಾರರು ಅತ್ಯಂತ ಪ್ರತಿಭಾವಂತರಾಗಿದ್ದು, ಬೇರೆ ಯಾವುದೇ ದೇಶದ ಆಟಗಾರರಿಗೆ ಕಠಿಣ ಸ್ಪರ್ಧೆಯನ್ನು ನೀಡುವ ಸಾಮರ್ಥ್ಯ ಹೊಂದಿರುತ್ತಾರೆ” ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ