Team Indiaದ ಈ ಆಟಗಾರನ 13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ!
Cheteshwar Pujara: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಚೇತೇಶ್ವರ ಪೂಜಾರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದ ಭಾಗವಾಗಿಲ್ಲ. ಕಳಪೆ ಫಾರ್ಮ್‌ನಿಂದಾಗಿ ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿದೆ.
India vs West Indies: ಟೀಂ ಇಂಡಿಯಾ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಕ್ವೀನ್ಸ್ ಪಾರ್ಕ್ ಓವಲ್ ಸ್ಟೇಡಿಯಂನಲ್ಲಿ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ. ಭಾರತ ತಂಡ ಈ ಸರಣಿಯೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನ ಹೊಸ ಋತುವನ್ನು ಪ್ರಾರಂಭಿಸಿದೆ. ಈ ಹೊಸ ಆರಂಭದೊಂದಿಗೆ ಒಬ್ಬ ಅನುಭವಿ ಆಟಗಾರನನ್ನು ತಂಡದಿಂದ ಕೈಬಿಡಲಾಗಿದೆ. ಈ ಆಟಗಾರ 2010 ರಿಂದ ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಆದರೆ ಈಗ ಈ ಆಟಗಾರ ತಂಡಕ್ಕೆ ಮರಳುವುದು ಕಷ್ಟ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಕೊಹ್ಲಿಯೂ ಮಾಡಲು ಅಸಾಧ್ಯ ಎಂದ ವಿವಿಎಸ್ ಲಕ್ಷ್ಮಣ್’ರ ಆ ಶ್ರೇಷ್ಠ ದಾಖಲೆ ಮುರಿದೇಬಿಟ್ಟರು ಅಶ್ವಿನ್!
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಚೇತೇಶ್ವರ ಪೂಜಾರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾದ ಭಾಗವಾಗಿಲ್ಲ. ಕಳಪೆ ಫಾರ್ಮ್‌ನಿಂದಾಗಿ ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿದೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್’ನಲ್ಲಿ ಯುವ ಆಟಗಾರರ ಮೇಲೆ ಗಮನ ಕೇಂದ್ರೀಕರಿಸಿರುವುದರಿಂದ ಚೇತೇಶ್ವರ ಪೂಜಾರ ಈಗ ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡುವುದು ಕಷ್ಟ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ ಹೇಳಿದ್ದಾರೆ. 2010 ರಿಂದ ಭಾರತ ತಂಡದಲ್ಲಿ ಪೂಜಾರ ಮೂರನೇ ಕ್ರಮಾಂಕದ ಪಾತ್ರವನ್ನು ನಿರ್ವಹಿಸುತ್ತಿದ್ದರು.
ಚೇತೇಶ್ವರ್ ಪೂಜಾರ ಪುನರಾಗಮನದ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್, “ಪೂಜಾರ ಮಟ್ಟಿಗೆ ಮುಂದೆ ಸಾಗುವುದು ಸ್ವಲ್ಪ ಕಷ್ಟ ಎಂದು ನಾನು ಭಾವಿಸುತ್ತೇನೆ. ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿಗಾಗಿ ನೀವು ಹೊಸ ಆಟಗಾರರ ಹುಡುಕಲು ಪ್ರಾರಂಭಿಸಬೇಕು. ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಕಮ್ ಬ್ಯಾಕ್ ಆಗಲಿದ್ದಾರೆ. ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ. ಶುಭಮನ್ ಗಿಲ್ ಎಲ್ಲಾ ಮೂರು ಮಾದರಿಗಳಲ್ಲಿ ಆಡಲಿದ್ದಾರೆ. ಪೂಜಾರ ಪುನರಾಗಮನ ಮಾಡುವುದು ಕಷ್ಟ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
ಪ್ರಸ್ತುತ ಉಪನಾಯಕ ಅಜಿಂಕ್ಯ ರಹಾನೆ ಟೆಸ್ಟ್ ತಂಡದಲ್ಲಿ ಉಳಿಯಲು ಸತತವಾಗಿ ರನ್ ಗಳಿಸಬೇಕು ಎಂದು ವಾಸಿಂ ಜಾಫರ್ ಹೇಳಿದ್ದಾರೆ. ರಹಾನೆ ಈ ವರ್ಷ ಐಪಿಎಲ್’ನಲ್ಲಿ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತೀಯ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್’ನಲ್ಲಿ ಬಲವಾದ ಪ್ರಭಾವ ಬೀರಿದ್ದಾರೆ. ಆದರೆ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರು ತಮ್ಮ ಎರಡೂ ಇನ್ನಿಂಗ್ಸ್‌ಗಳಲ್ಲಿ ಪ್ರಭಾವ ಬೀರಲು ವಿಫಲರಾದರು. ಇದು ಮತ್ತೊಮ್ಮೆ ಅವರ ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: iPhone 14 Proಗೆ ಪೈಪೋಟಿ ನೀಡುತ್ತೆ ಈ ಮೊಬೈಲ್: ಫೀಚರ್ ಅದ್ಭುತವೋ ಅದ್ಭುತ-ಬೆಲೆ 10 ಸಾವಿರ ರೂ.ಗಿಂತಲೂ ಅಗ್ಗ
ಜಾಫರ್ ಹೇಳುವಂತೆ, “ರಹಾನೆ ಅವರ ಆಟದಲ್ಲಿ ಸ್ಥಿರತೆಯನ್ನು ತೋರಿಸಬೇಕಾಗುತ್ತದೆ. ಅದು ಅವರ ಸಮಸ್ಯೆಯಾಗಿದೆ. 80-90 ಟೆಸ್ಟ್‌ಗಳನ್ನು (84) ಆಡಿರಬಹುದು ಆದರೆ ಸ್ಥಿರತೆ ಅವರಿಗೆ ಸಮಸ್ಯೆಯಾಗಿದೆ. ರೋಹಿತ್ ಶರ್ಮಾ ನಿರ್ಗಮನದ ನಂತರ ಅವರು ಭಾರತಕ್ಕೆ ಉತ್ತಮ ನಾಯಕತ್ವದ ಆಯ್ಕೆಯಾಗಿರುವುದರಿಂದ ಅವರು ಇದನ್ನು ಜಯಿಸಬೇಕಾಗಿದೆ” ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ