ವಿಶ್ವಕಪ್ ಬಳಿಕ ಒನ್ ಡೇ ಕ್ರಿಕೆಟ್ನಿಂದ ಗೇಲ್ ನಿವೃತ್ತಿ!
2019ರ ಐಸಿಸಿ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳಿಂದ ನಿವೃತ್ತಿ ಪಡೆಯುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಘೋಷಿಸಿದ್ದಾರೆ.
ನವದೆಹಲಿ: 2019ರ ಐಸಿಸಿ ವಿಶ್ವಕಪ್ ಬಳಿಕ ಏಕದಿನ ಪಂದ್ಯಗಳಿಂದ ನಿವೃತ್ತಿ ಪಡೆಯುವುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಘೋಷಿಸಿದ್ದಾರೆ.
ಈ ಬಗ್ಗೆ ವಿಂಡೀಸ್ ಕ್ರಿಕೆಟ್ ಮಂಡಳಿಯು ಟ್ವೀಟ್ ಮಾಡಿದ್ದು, "WINDIES ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ನಂತರ ಏಕದಿನ ಪಂದ್ಯಗಳಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ" ಎಂದು ತಿಳಿಸಿದೆ.
ಟಿ-20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಈ ಮೂರೂ ಆವೃತ್ತಿಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿರುವ ಗೇಲ್, 1999ರಲ್ಲಿ ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದರು. ಈವರೆಗೆ ಒಟ್ಟು 284 ಪಂದ್ಯಗಳಲ್ಲಿ ಆಡಿರುವ ಗೇಲ್, ಇವುಗಳಲ್ಲಿ 36.98 ಸರಾಸರಿಯಲ್ಲಿ 9,727 ರನ್ ಕಲೆಹಾಕಿದ್ದು, 23 ಶತಕ ಹಾಗೂ 49 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಇನ್ನು ಬೌಲಿಂಗ್ನಲ್ಲು ಕಮಾಲ್ ಮಾಡಿರುವ ಗೇಲ್ 165 ವಿಕೆಟ್ಗಳನ್ನೂ ಕೂಡ ಉರುಳಿಸಿದ್ದಾರೆ.