T20 World Cup 2024: ಭಾರತ ತಂಡ ಟಿ20 ವಿಶ್ವಕಪ್‌’ನಲ್ಲಿ ಬುಧವಾರ ಐರ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.  ಇನ್ನು ಈ ಸಂದರ್ಭದಲ್ಲಿ ಓಪನಿಂಗ್ ಮಾಡೋದು ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, "ನಮ್ಮ ತಂತ್ರದ ಬಗ್ಗೆ ನಾವು ಹೆಚ್ಚು ಹೇಳಲು ಬಯಸುವುದಿಲ್ಲ. ಆದರೆ ನಮ್ಮಲ್ಲಿ ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಇದ್ದಾರೆ. ವಿರಾಟ್ ಐಪಿಎಲ್‌’ನಲ್ಲಿ ಓಪನಿಂಗ್ ಮಾಡಿದ್ದಾರೆ” ಎಂದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸುತ್ತಲೂ ಕುದುರೆಗಳು.. ಅಮೇರಿಕಾದಲ್ಲಿ ವಿರಾಟ್ ಕೊಹ್ಲಿಗೆ ಭಾರೀ ಭದ್ರತೆ! ವಿಡಿಯೋ ವೈರಲ್


ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವಕಪ್ ಕುರಿತು ಮಾತನಾಡಿದ ಅವರು, “ಕೋಚ್ ಆಗಿ ಕೊನೆಯ ಪಂದ್ಯಾವಳಿಯ ಪ್ರತಿ ಪಂದ್ಯವೂ ಮಹತ್ವದ್ದಾಗಿದೆ. ಕೋಚ್ ಆಗಿ ತರಬೇತಿ ನೀಡಿರುವುದನ್ನು ನಾನು ಆನಂದಿಸಿದ್ದೇನೆ, ಮುಂಬರುವ ವೇಳಾಪಟ್ಟಿಯನ್ನು ಪರಿಗಣಿಸಿ, ಈ ಬಾರಿ ಕೋಚ್‌’ಗೆ ಅರ್ಜಿ ಸಲ್ಲಿಸದಿರಲು ನಿರ್ಧರಿಸಿದ್ದೇನೆ. ಪಿಚ್‌’ಗೆ ಸಂಬಂಧಿಸಿದಂತೆ, ನಾವು ಮೊದಲ ಕೆಲವು ದಿನ ಅಭ್ಯಾಸ ಮಾಡಿದಾಗ ವಿಭಿನ್ನವಾಗಿತ್ತು. ಆದರೆ ಮೂರನೇ ಅಭ್ಯಾಸ ಅವಧಿಯಲ್ಲಿ ಪಿಚ್ ಸ್ವಲ್ಪ ಉತ್ತಮವಾಗಿತ್ತು” ಎಂದಿದ್ದಾರೆ.


“ಪಿಚ್’ಗೆ ತಕ್ಕಂತೆ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕು. ಐಪಿಎಲ್‌’ನಂತೆ ಇಲ್ಲಿ ದೊಡ್ಡ ಸ್ಕೋರ್‌’ಗಳನ್ನು ನೋಡದಿರುವ ಸಾಧ್ಯತೆಯಿದೆ. ಆದರೆ ನಾವು ನಮ್ಮ ಹುಡುಗರಿಗೆ ಹೀಗೆ ಆಡಬೇಕು ಎಂಬ ಪೂರ್ವ ಗ್ರಹಿಕೆಯೊಂದಿಗೆ ಹೋಗಬೇಡಿ ಎಂದು ಹೇಳಿದ್ದೇನೆ. ಸಂದರ್ಭಕ್ಕೆ ತಕ್ಕಂತೆ ಆಡಬೇಕಾಗುತ್ತದೆ” ಎಂದಿದ್ದಾರೆ.


ಇದನ್ನೂ ಓದಿ: ಅಂದು ವಾಸ್ತುಶಿಲ್ಪಿಯಾಗಿದ್ದಾತ ಇಂದು ಸ್ಟಾರ್ ಕ್ರಿಕೆಟರ್! ಟಿ20 ವಿಶ್ವಕಪ್’ನಲ್ಲೂ ಮಿಂಚಿದ ಈತನಿಗೆ ಕೊಹ್ಲಿ ಅಂದ್ರೆ ಪಂಚಪ್ರಾಣ


ಐರ್ಲೆಂಡ್ ಅನ್ನು ಕಡಿಮೆ ಅಂದಾಜು ಮಾಡುತ್ತಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ಇತ್ತೀಚೆಗೆ ಐರ್ಲೆಂಡ್ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು. ಅವರು ಸಾಕಷ್ಟು ಟಿ-20 ಕ್ರಿಕೆಟ್ ಆಡುತ್ತಿದ್ದಾರೆ. ಇದು ಯಾವುದೇ ತಂಡವನ್ನು ನಿರ್ಲಕ್ಷಿಸಲಾಗದ ಸ್ವರೂಪವಾಗಿದೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews