ಮದ್ಯ ಸೇವಿಸಿ ಮಹಿಳಾ ಕ್ರಿಕೆಟಿಗರೊಂದಿಗೆ ಅನುಚಿತವಾಗಿ ವರ್ತಿಸಿದ ಕೋಚ್..!
Hyderabad women`s cricket team : ಆಟಗಾರರಿಗೆ ಕ್ರೀಡೆಯ ಬಗ್ಗೆ ಹೇಳಿಕೊಡಬೇಕಿದ್ದ ಕೋಚ್ ಅವರ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ಬಸ್‌ನಲ್ಲಿ ಮದ್ಯ ಸೇವಿಸಿ ಮಹಿಳಾ ಕ್ರಿಕೆಟಿಗರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಯಾರು ಆ ತರಬೇತುದಾರ.. ಘಟನೆ ನಡೆದಿದ್ದು ಎಲ್ಲಿ..? ಈ ಕುರಿತ ವಿವರ ಇಲ್ಲಿದೆ ನೋಡಿ..
Coach Vidyuth Jaisimha : ಕ್ರಿಕೆಟ್ ವಲಯದಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಮಹಿಳಾ ಕ್ರಿಕೆಟಿಗರೊಂದಿಗೆ ಕೋಚ್ ಅನುಚಿತವಾಗಿ ವರ್ತಿಸಿರುವ ಪ್ರಸಂಗ ಬಯಲಿಗೆ ಬಂದಿದೆ. ಬಸ್‌ನಲ್ಲಿ ಪ್ರಯಾಣಿಸುವಾಗ ನೀರಿನ ಬಾಟಲಿಯಲ್ಲಿ ಮದ್ಯ ಸುರಿದು ಸೇವಿಸಿದ್ದಲ್ಲದೆ, ಮಹಿಳಾ ಕ್ರಿಕೆಟಿಗರೊಂದಿಗೆ ತರಬೇತುದಾರ ಅನುಚಿತವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು.. ಜೈಸಿಂಹ ಅವರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಮಹಿಳಾ ಕ್ರಿಕೆಟಿಗರಿಗೆ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರು ಮಹಿಳಾ ಕ್ರಿಕೆಟಿಗರ ಜೊತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನೀರಿನ ಬಾಟಲಿಯಲ್ಲಿ ಮದ್ಯ ಸುರಿದು ಸೇವಿಸಿದ್ದಾರೆ. ಅಲ್ಲದೆ, ಕುಡಿದ ಅಮಲಿನಲ್ಲಿ ಮಹಿಳಾ ಕ್ರಿಕೆಟಿಗರನ್ನು ನಿಂದಿಸಿ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇಡೀ ಘಟನೆಯ ದೃಶ್ಯವನ್ನು ಮಹಿಳಾ ಕ್ರಿಕೆಟಿಗರು ವಿಡಿಯೋ ಮಾಡಿಕೊಂಡಿದ್ದು, ಈ ತಿಂಗಳ 12 ರಂದು ಎಚ್‌ಸಿಎಗೆ (Hyderabad Cricket Association) ಮೇಲ್ ಮೂಲಕ ದೂರು ನೀಡಿದ್ದಾರೆ.
ಇದನ್ನೂ ಓದಿ: ದಿಕ್ಕು-ದೆಸೆ ಇಲ್ಲದ ಸಾಲದ ಹೊರೆಯ ಬಜೆಟ್ : ಸಚಿವ ಪ್ರಹ್ಲಾದ ಜೋಶಿ ಟೀಕೆ
ದೂರು ಮತ್ತು ವಿಡಿಯೋವನ್ನು ಪರಿಶೀಲಿಸಿದ ಎಚ್‌ಸಿಎ ಅಧ್ಯಕ್ಷ ಅರಿಶನಪಲ್ಲಿ ಜಗನ್ಮೋಹನ್ ರಾವ್ ಅವರು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ಕೋಚ್ ಜೈಸಿಂಹ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಅವರು, ಮಹಿಳಾ ಕ್ರಿಕೆಟಿಗರ ರಕ್ಷಣೆಗೆ ತೊಂದರೆಯಾದರೆ ನಿರ್ಲಕ್ಷಿಸುವಂತಿಲ್ಲ. ಎಚ್‌ಸಿಎ ಅವರ ಬೆಂಬಲಕ್ಕೆ ನಿಂತಿದೆ. ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತೇವೆ. ಮಹಿಳಾ ಕ್ರಿಕೆಟಿಗರಿಗೆ ಕಿರುಕುಳ ನೀಡಿದರೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೋಚ್ ಜೈಸಿಂಹ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅಲ್ಲದೆ, ತಮ್ಮ ವಿರುದ್ಧದ ಆರೋಪ ಆಧಾರ ರಹಿತ ಎಂದು ಹೇಳಿಕೆ ನೀಡಿದ್ದಾರೆ. ಈ ನಡುವೆ ಜೈಸಿಂಹ ಬಸ್‌ನಲ್ಲಿ ಮದ್ಯ ಸೇವಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕೋಚ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.