Commonwealth Games 2022: ಘಾನಾ ವಿರುದ್ಧ ಭಾರತೀಯ ಮಹಿಳಾ ಹಾಕಿ ತಂಡದ ಅದ್ಭುತ ಗೆಲುವು
Birmingham Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ ರಣಕಹಳೆ ಮೊಳಗಿದೆ. ಈ ಕ್ರೀಡಾಕೂಟದ ಮೊದಲ ದಿನವಾದ ಇಂದು, ಭಾರತೀಯ ಮಹಿಳಾ ಹಾಕಿ ತಂಡ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿಯೇ ಭಾರತೀಯ ಮಹಿಳಾ ತಂಡ ಘಾನಾ ಮಹಿಳಾ ಹಾಕಿ ತಂಡವನ್ನು 5-0 ಅಂತರದಿಂದ ಸೋಲಿಸಿದೆ.
Birmingham Commonwealth Games 2022: ಕಾಮನ್ವೆಲ್ತ್ ಕ್ರೀಡಾಕೂಟದ ರಣಕಹಳೆ ಮೊಳಗಿದೆ. ಈ ಕ್ರೀಡಾಕೂಟದ ಮೊದಲ ದಿನವಾದ ಇಂದು, ಭಾರತೀಯ ಮಹಿಳಾ ಹಾಕಿ ತಂಡ ಶುಭಾರಂಭ ಮಾಡಿದೆ. ತನ್ನ ಮೊದಲ ಪಂದ್ಯದಲ್ಲಿಯೇ ಭಾರತೀಯ ಮಹಿಳಾ ತಂಡ ಘಾನಾ ಮಹಿಳಾ ಹಾಕಿ ತಂಡವನ್ನು 5-0 ಅಂತರದಿಂದ ಸೋಲಿಸಿದೆ. ಭಾರತೀಯ ತಂಡದ ಪರವಾಗಿ ಗುರ್ಜೀತ್ ಕೌರ್ ಅತಿ ಹೆಚ್ಚು ಅಂದರೆ ಎರಡು ಗೋಲ್ ಬಾರಿಸಿದ್ದಾರೆ. ಇನ್ನೊಂದೆಡೆ ನೇಹಾ ಗೋಯಲ್, ಸಂಗೀತಾ ಕುಮಾರಿ ಹಾಗೂ ಸಲೀಮಾ ಟೆಟೆ ಕೂಡ ತಲಾ ಒಂದೊಂದು ಗೋಲ್ ಬಾರಿಸಿದ್ದಾರೆ. ಭಾರತೀಯ ಮಹಿಳಾ ತಂಡ ಶನಿವಾರ ಅಂದರೆ ಜುಲೈ 30 ರಂದು ವೇಲ್ಸ್ ವಿರುದ್ಧ ತನ್ನ ಎರಡನೇ ಗ್ರೂಪ್ ಪಂದ್ಯವನ್ನಾಡಲಿದೆ.
ಇದನ್ನೂ ಓದಿ-CWG 2022 Swimming: ಸೆಮಿಸ್‌ಗೆ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ & ಕುಶಾಗ್ರ ರಾವತ್ ಔಟ್!
ಇನ್ನೊಂದೆಡೆ 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಭಾರತೀಯ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇನ್ನೂ ಮೂರು ವಿಕೆಟ್ ಬಾಕಿ ಇರುವಂತೆ 19 ಓವರ್ ಗಳಲ್ಲಿ ನಿರ್ಧಿಷ್ಟ ಗುರಿಯನ್ನು ತಲುಪಿ ಜಯ ದಾಖಲಿಸಿದೆ. ಇಲ್ಲಿ ವಿಶೇಷ ಎಂದರೆ ಆಸ್ಟ್ರೇಲಿಯಾ ತಂಡ 8 ಓವರ್ ಗಳಲ್ಲಿಯೇ ಕೇವಲ 49 ರನ್ ಗಳಿಗೆ ತನ್ನ ಆರಂಭಿಕ 8 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ ಇನ್ನೇನು ಟೀಂ ಇಂಡಿಯಾ ಗೆದ್ದೇ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ, ಎಲ್ವೆ ಗಾರ್ಡ್ನರ್ (ಔಟಾಗದೆ 52) ಮತ್ತು ಗ್ರೇಸ್ ಹ್ಯಾರಿಸ್ (37) ಅವರ ಜೊತೆಯಾಟ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದೆ.
ಇದನ್ನೂ ಓದಿ-Commonwealth Games 2022: ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ಭಾರತದ ಬಾಕ್ಸರ್ ಶಿವ ಥಾಪಾ
ಇದಲ್ಲದೆ, ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತೀಯ ಪುರುಷರ ಸಿಂಗಲ್ಸ್ ತಂಡ ಬಾರ್ಬಾಡೋಸ್ ಅನ್ನು 3-0 ಅಂತರದಿಂದ ಸೋಲಿಸಿದೆ. ಭಾರತೀಯ ತಂಡ ಅತ್ಯಂತ ಸಲೀಸಾಗಿ ಈ ಗೆಲುವನ್ನು ದಾಖಲಿಸಿದೆ ಎಂಬುದು ಇಲ್ಲಿ ವಿಶೇಷ. ಈ ಸ್ಪರ್ಧೆಯಲ್ಲಿ ಆರಂಭದಿಂದಲೇ ತನ್ನ ಪಟ್ಟು ಬಿಗಿಗೊಳಿಸಿದ ಭಾರತೀಯ ತಂಡ ಬಾರ್ಬಾಡೋಸ್ ತಂಡಕ್ಕೆ ಮುಂದಕ್ಕೆ ಹೋಗಲು ಯಾವುದೇ ಅವಕಾಶವನ್ನು ಕೊಟ್ಟಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.