ನವದೆಹಲಿ: ಆಷ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಅತ್ಯಧಿಕ ಒತ್ತಡದ ಪಂದ್ಯದಲ್ಲಿ ಸೈನಾ ನೆಹವಾಲ್ ಸಿಂಧು ವಿರುದ್ದ  21-18, 23-21 ಅಂತರದಲ್ಲಿ ಜಯಸಾಧಿಸಿ, ಭಾರತದಕ್ಕೆ 26 ನೇ ಚಿನ್ನದ ಪದಕವನ್ನು ಗೆದ್ದುಕೊಟ್ಟರು.ಸುಮಾರು ಒಂದು ಗಂಟೆಗಳ ಸುದೀರ್ಘಕಾಲ ನಡೆದ  ಅಂತಿಮ ಪಂದ್ಯದ ಹೋರಾಟದಲ್ಲಿ ಕೊನೆಗೆ ಸೈನಾ ಮುನ್ನಡೆಯನ್ನು ಸಾಧಿಸಿದರು.


ಪಂದ್ಯದಲ್ಲಿ  ಸಿಂಧೂ ಅವರ ಪ್ರಬಲ ಹೊಡೆತವನ್ನು ಎದುರಿಸಲು ಎದುರಿಸಲು ಸೈನಾ ಕಷ್ಟಪಟ್ಟರು ಸಹಿತ ನಂತರ ಅದಕ್ಕೆ ಹೊಂದಿಕೊಂಡರು.  ಇನ್ನೊಂದೆಡೆಗೆ ಸಿಂಧು ತಮ್ಮ ಹೊಡೆತಗಳ ಮೇಲೆ ನಿಯಂತ್ರಣ ಕಂಡುಕೊಳ್ಳದೆ ಕನಿಷ್ಠ ನಾಲ್ಕು ಪಾಯಿಂಟ್ ಗಳನ್ನೂ ಕಳೆದುಕೊಂಡರು.


ಸೈನಾ ನೆಹ್ವಾಲ್ ಈ ಅಂತಿಮ ಪಂದ್ಯದಲ್ಲಿ ಗೆಲ್ಲುವ ಮೂಲಕ  ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯಳು ಎನ್ನುವ ಖ್ಯಾತಿಯನ್ನು ಪಡೆದುಕೊಂಡಳು.ಈ ಮೊದಲು ಅವರು 2010ರಲ್ಲಿ ಪದಕವನ್ನು ಗೆದ್ದುಕೊಂಡಿದ್ದರು.