ನವದೆಹಲಿ: COVID-19 ರ ಎರಡನೇ ತರಂಗವು ಭಾರತದಾದ್ಯಂತ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ, ಹಲವಾರು ರಾಜ್ಯಗಳು ಮಾರಣಾಂತಿಕ ವೈರಸ್ ಹರಡುವುದನ್ನು ತಡೆಯಲು ಕರ್ಪ್ಯೂ ಹಾಗೂ ಇತರ ನಿರ್ಬಂಧಗಳಿಗೆ ಮೊರೆಹೋಗಿವೆ.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ವ್ಯಾಪಕವಾಗಿ ಆವರಿಸಿರುವ ಕೊರೊನಾ ವೈರಸ್ ಬಗ್ಗೆ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಟ್ವಿಟ್ ಮಾಡಿ ಜನರು ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತವಾಗಿರಲು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ವೀಕ್-ಎಂಡ್ ಕರ್ಫ್ಯೂ ಮೊರೆಹೋದ ರಾಷ್ಟ್ರ ರಾಜಧಾನಿ


'ನಾನು ಈಗ ಹೇಳಬಲ್ಲೆ !! ನಾವೆಲ್ಲರೂ ಹಾಳಾಗುತ್ತಿದ್ದೇವೆ....ದುಃಖದ ದಿನ, ವೈರಸ್ ನನ್ನ ಮನೆ ಬಾಗಿಲಿಗೆ ಬಂದಿದೆ, ಅದು ನಾಳೆ ನಿಮ್ಮದಾಗಲಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. "ಉತ್ತಮ ಅಭ್ಯಾಸಗಳನ್ನು ಮತ್ತು ನನ್ನ ಪ್ರಾಮಾಣಿಕ ಪ್ರಾರ್ಥನೆಗಳನ್ನು ಪ್ರಯತ್ನಿಸೋಣ ಮತ್ತು ಅನುಸರಿಸೋಣ" ಎಂದು ಅವರು ಹೇಳಿದ್ದಾರೆ


ಬುಧುವಾರದಂದು ಅವರ ಪತ್ನಿ ಪೃಥ್ವಿ ಪೋಷಕರಿಗೆ ಕೊರೊನಾ ಧೃಢಪಟ್ಟಿರುವ ವಿಚಾರವಾಗಿ ಟ್ವೀಟ್ ಮಾಡಿದ್ದರು.ರವಿಚಂದ್ರನ್ ಅಶ್ವಿನ್ ಅವರ ದೆಹಲಿ ಕ್ಯಾಪಿಟಲ್ಸ್ ತಂಡದ ಸಹ ಆಟಗಾರ ಆಕ್ಸರ್ ಪಟೇಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021 ರ ಋತುವಿನ ಆರಂಭದ ಮುನ್ನ COVID-19 ಇರುವುದು ಧೃಢಪಟ್ಟಿತ್ತು.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಲಾಕ್ಡೌನ್, ಕರ್ಫ್ಯೂ ವಿಧಿಸಿದರೂ ಕೂಡ 398 ಜನರ ಪ್ರಾಣ ತೆಗೆದ ಕೊರೊನಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.