WTC ಫೈನಲ್ ತಂಡ ಪ್ರಕಟಕ್ಕೆ ದಿನಗಣನೆ ಶುರು: ಪ್ಲೇಯಿಂಗ್ 11ರಲ್ಲಿ ಈ ಡ್ಯಾಶಿಂಗ್ ಆಟಗಾರನಿಗೆ ಸಿಗುತ್ತಾ ಸ್ಥಾನ!
India Squad WTC Final: ಡ್ಯಾಶಿಂಗ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ ಬೆನ್ನಿನ ಗಾಯವು ಟೀಮ್ ಇಂಡಿಯಾದ ಕಷ್ಟವನ್ನು ಹೆಚ್ಚಿಸಿದೆ. ಶ್ರೇಯಸ್ ಅಯ್ಯರ್ ಇನ್ನೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ಐಪಿಎಲ್‌ನಲ್ಲಿ ಆಡಬೇಕಿದೆ. ಒಂದು ವೇಳೆ ಶ್ರೇಯಸ್ ಅಯ್ಯರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನ ಫೈನಲ್‌ಗೆ ಫಿಟ್ ಆಗದಿದ್ದರೆ, ಕೆಎಲ್ ರಾಹುಲ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
India Squad WTC Final: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ತಂಡವನ್ನು ಪ್ರಕಟಿಸಲು ಮೇ 7 ಕೊನೆಯ ದಿನಾಂಕವಾಗಿದೆ. ಶಿವಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಭಾರತವನ್ನು ಆಯ್ಕೆ ಮಾಡುತ್ತದೆ.
ಇದನ್ನೂ ಓದಿ: ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ಏಕದಿನ ಕ್ರಿಕೆಟ್ ಜೀವನ ಅಂತ್ಯ!
ಟೀಂ ಇಂಡಿಯಾವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯು ಏಪ್ರಿಲ್‌ನಲ್ಲಿ ಸಭೆ ನಡೆಸಲಿದೆ. ಬಿಸಿಸಿಐ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಟ್‌ಗೆ ನೀಡಿದ ಮಾಹಿತಿ ಪ್ರಕಾರ, 'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಭಾರತವನ್ನು ಆಯ್ಕೆ ಮಾಡಲು ನಮಗೆ ಸಮಯವಿದೆ. ತಂಡವನ್ನು ಪ್ರಕಟ ಮಾಡಲು ಮೇ 7 ಕೊನೆಯ ದಿನಾಂಕ. ಮೇ 22 ರೊಳಗೆ ನಾವು ಅಂತಿಮ ತಂಡವನ್ನು ಬದಲಾವಣೆಗಳೊಂದಿಗೆ ಸಲ್ಲಿಕೆ ಮಾಡುತ್ತೇವೆ. ಆಯ್ಕೆ ಸಮಿತಿಯು ಐಪಿಎಲ್ ಸಮಯದಲ್ಲಿ ಆಟಗಾರರ ಫಿಟ್ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ” ಎಂದಿದ್ದಾರೆ.
ಮುಂದಿನ ತಿಂಗಳು ಡಬ್ಲ್ಯುಟಿಸಿ ಫೈನಲ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ
ಡ್ಯಾಶಿಂಗ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರ ಬೆನ್ನಿನ ಗಾಯವು ಟೀಮ್ ಇಂಡಿಯಾದ ಕಷ್ಟವನ್ನು ಹೆಚ್ಚಿಸಿದೆ. ಶ್ರೇಯಸ್ ಅಯ್ಯರ್ ಇನ್ನೂ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ಐಪಿಎಲ್‌ನಲ್ಲಿ ಆಡಬೇಕಿದೆ. ಒಂದು ವೇಳೆ ಶ್ರೇಯಸ್ ಅಯ್ಯರ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನ ಫೈನಲ್‌ಗೆ ಫಿಟ್ ಆಗದಿದ್ದರೆ, ಕೆಎಲ್ ರಾಹುಲ್ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಎರಡು ಪಂದ್ಯಗಳ ನಂತರ ಕೆಎಲ್ ರಾಹುಲ್ ಅವರನ್ನು ಪ್ಲೇಯಿಂಗ್ XI ನಿಂದ ಕೈಬಿಡಲಾಯಿತು. ಇದೀಗ ಕೆಎಲ್ ರಾಹುಲ್ ಬದಲಿಗೆ ಶುಭಮನ್ ಗಿಲ್ ಭಾರತ ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ಆಯ್ಕೆಯಾಗಿದ್ದಾರೆ.
ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್’ನ ಫೈನಲ್’ಗೆ ಕೆ ಎಲ್ ರಾಹುಲ್ ಆಯ್ಕೆಯಾದರೆ, ಅವರನ್ನು ಪ್ಲೇಯಿಂಗ್ 11ರಲ್ಲಿ 5 ನೇ ಸ್ಥಾನದಲ್ಲಿ ಫೀಲ್ಡಿಂಗ್ ಇರಿಸಹುದು, ಏಕೆಂದರೆ ಕೆಎಲ್ ರಾಹುಲ್ ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಅನುಭವವನ್ನು ಹೊಂದಿದ್ದಾರೆ.
ಕೆಎಲ್ ರಾಹುಲ್ ಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನೀಡಬಹುದು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಕೆಎಸ್ ಭಾರತ್ ವಿಫಲವಾದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಂತಹ ದೊಡ್ಡ ಪಂದ್ಯದಲ್ಲಿ ಕೆಎಸ್ ಭರತ್ ಅವರನ್ನು ಉಳಿಸಿಕೊಳ್ಳುವ ಅಪಾಯವನ್ನು ಭಾರತೀಯ ತಂಡದ ನಿರ್ವಹಣೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ರಾಹುಲ್ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಪಾತ್ರವನ್ನು 5 ನೇ ಸ್ಥಾನದಲ್ಲಿ ನಿರ್ವಹಿಸಬಹುದು. ಭಾರತದ 16 ಸದಸ್ಯರ ತಂಡದಲ್ಲಿ ಬ್ಯಾಕ್’ಅಪ್ ವಿಕೆಟ್‌ಕೀಪರ್ ಆಗಿ ಕೆಎಸ್ ಭರತ್ ಅವರನ್ನು ಮಾತ್ರ ಇರಿಸಬಹುದು.
ಇದನ್ನೂ ಓದಿ: Railways: ಒಂದು ಲೀಟರ್ ಇಂಧನದಲ್ಲಿ ರೈಲು ಎಷ್ಟು ಕಿ.ಮೀ ಓಡುತ್ತದೆ? ರೈಲಿನ ಮೈಲೇಜ್ ಹೇಗಿದೆ ಗೊತ್ತಾ?
ಭಾರತದ 16 ಸದಸ್ಯರ ತಂಡ ಹೀಗಿರಬಹುದು:
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಫಿಟ್ನೆಸ್ ಅವಲಂಬಿತ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಜೈದೇವ್ ಮಲಿಕ್ ಉನದ್ಕತ್, ಉಮೇಶ್ ಯಾದವ್.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.